ಪ್ರಾಕೃತಿಕ ವಿಕೋಪ ಮರು ಸೃಷ್ಟಿ; ಕಾಶ್ಮೀರದಲ್ಲಿ ಭಾರತದೊಂದಿಗೆ ಚೀನಾ ಜಂಟಿ ಸೇನಾ ತರಬೇತಿ!

ಮಹತ್ವದ ಬೆಳೆವಣಿಗೆಯೊಂದರಲ್ಲಿ ಚೀನಾದ ರೆಡ್ ಆರ್ಮಿ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯೊಂದಿಗೆ ಜಂಟಿ ಸಮರಾಭ್ಯಾಸ ಮಾಡಿದೆ.
ಇಂಡೋ-ಚೀನಾ ಸಮರಾಭ್ಯಾಸ (ಸಂಗ್ರಹ ಚಿತ್ರ)
ಇಂಡೋ-ಚೀನಾ ಸಮರಾಭ್ಯಾಸ (ಸಂಗ್ರಹ ಚಿತ್ರ)

ನವದೆಹಲಿ: ಮಹತ್ವದ ಬೆಳೆವಣಿಗೆಯೊಂದರಲ್ಲಿ ಚೀನಾದ ರೆಡ್ ಆರ್ಮಿ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯೊಂದಿಗೆ ಜಂಟಿ ಸಮರಾಭ್ಯಾಸ ಮಾಡಿದೆ.

ಬುಧವಾರ ಜಮ್ಮು ಮತ್ತು ಕಾಶ್ಮೀರದ ಲಡಾನ್ ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ ಎಸಿ) ಬಳಿ ಜಂಟಿ ಸಮರಾಭ್ಯಸ ನಡೆಸಿವೆ. ಲಡಾಕ್ ಸಮೀಪದಲ್ಲಿರುವ ಹಳ್ಳಿಯೊಂದರಲ್ಲಿ ಈ  ಸಮರಾಭ್ಯಾಸ ನಡೆಸಲಾಗಿದ್ದು, ಭೂಕಂಪನ ಅಥವಾ ಮತ್ತಿತರೇ ಪ್ರಾಕೃತಿಕ ವಿಕೋಪಗಳ ಸಂಭಿವಿಸಿದಾಗ ಕೈಗೊಳ್ಳಬಹುದಾದ ಕಾರ್ಯಾಚರಣೆ ಕುರಿತಂತೆ ಉಭಯ ಸೇನೆಯ ಸೈನಿಕರು  ತರಬೇತಿ ನಡೆಸಿದ್ದಾರೆ.

ಗಡಿಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮಾನವೀಯತೆಯ ಆಧಾರದ ಮೇಲೆ ಪರಸ್ಪರ ಸಹಕಾರ ಹಾಗೂ ಜಂಟಿ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಈ ಅಭ್ಯಾಸ ನಡೆಸಲಾಗಿದೆ  ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತುರ್ತು ಕಾರ್ಯಾಚರಣೆ, ಗಾಯಾಳುಗಳ ಸ್ಥಳಾಂತರ, ವೈದ್ಯಕೀಯ ಸೇವೆ, ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣೆ ಸೇರಿದಂತೆ ಹಲವು  ರೀತಿಯ ತರಬೇತಿಯನ್ನು ಸೈನಿಕರಿಗೆ ನೀಡಲಾಯಿತು.

ಈ ಹಿಂದೆಯೂ ಕೂಡ ಭಾರತ ಮತ್ತು ಚೀನಾ ಇಂತಹುದೇ ಸಮರಾಭ್ಯಾಸ ನಡೆಸಿದ್ದವು. ಕಳೆದ ಫೆಬ್ರವರಿ 6ರಂದು ಇದೇ ಲಡಾಕ್ ನ ಪೂರ್ವಭಾಗದಲ್ಲಿ ಉಭಯ ದೇಶಗಳ ಸೈನಿಕರು  ಸಮರಾಭ್ಯಾಸ ನಡೆಸಿದ್ದವು. ಪ್ರಸ್ತುತ ಸಮರಾಭ್ಯಾಸ ಅದರ ಮುಂದುವರೆದ ಭಾಗ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com