ಸೆಕ್ಸ್ ಹಗರಣದ ಕುರಿತು ಮೊದಲ ಬಾರಿಗೆ ಪತ್ರಿಕೆಯಲ್ಲಿ ಪ್ರಕಟಿಸಿದ ಮನೇಕಾ ಗಾಂಧಿ ಪುತ್ರನ ವಿರುದ್ಧ ಅಂತಹುದೇ ಆರೋಪ!

ಸೆಕ್ಸ್ ಹಗರಣ ಸಂಬಂಧ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವರದಿ ಬರೆದು ಸಂಚಲನ ಉಂಟುಮಾಡಿದ್ದ ಮನೇಕಾ ಗಾಂಧಿ ಅವರ ಪುತ್ರನ ವಿರುದ್ಧ ಅಂತಹುದೇ ಆರೋಪ ಕೇಳಿಬರುತ್ತಿದ್ದು...
ವರುಣ್ ಗಾಂಧಿ ಮತ್ತು ಮನೇಕಾ ಗಾಂಧಿ (ಸಂಗ್ರಹ ಚಿತ್ರ)
ವರುಣ್ ಗಾಂಧಿ ಮತ್ತು ಮನೇಕಾ ಗಾಂಧಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಸೆಕ್ಸ್ ಹಗರಣ ಸಂಬಂಧ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವರದಿ ಬರೆದು ಸಂಚಲನ ಉಂಟುಮಾಡಿದ್ದ ಮನೇಕಾ ಗಾಂಧಿ ಅವರ ಪುತ್ರನ ವಿರುದ್ಧ ಅಂತಹುದೇ ಆರೋಪ  ಕೇಳಿಬರುತ್ತಿದ್ದು, ಹನಿ ಟ್ರ್ಪಾಪ್ ಗೆ ಒಳಗಾಗಿ ದೇಶದ ರಕ್ಷಣಾ ಮಾಹಿತಿಯನ್ನು ವಿದೇಶಕ್ಕೆ ರವಾನಿಸಿದ ಗಂಭೀರ ಆರೋಪವನ್ನು ವರುಣ್ ಗಾಂಧಿ ಎದುರಿಸುತ್ತಿದ್ದಾರೆ.

1978ರಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸೆಕ್ಸ್ ಹಗರಣವನ್ನು ಬಯಲಿಗೆಳೆದಿದ್ದ ಮನೇಕಾ ಗಾಂಧಿ ಪುತ್ರ ವರುಣ್ ಗಾಂಧಿ ಕೂಡ ಇದೀಗ ಅಂತಹುದೇ ಆರೋಪ ಎದುರಿಸುತ್ತಿದ್ದಾರೆ.  ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ದಲ್ಲಾಳಿಯೊಬ್ಬನ ಕುತಂತ್ರಕ್ಕೆ ಬಲಿಯಾಗಿ ದೇಶದ ಅತ್ಯಮೂಲ್ಯ ರಕ್ಷಣಾ ಮಾಹಿತಿಯನ್ನು ವಿದೇಶಕ್ಕೆ ರವಾನಿಸಿದ್ದಾರೆ ಎಂಬ ಗಂಭೀರ ಆರೋಪ ವರುಣ್ ಗಾಂಧಿ ಅವರ ಮೇಲಿದೆ.

ವಿಶೇಷವೆಂದರೆ 1978ರಲ್ಲಿ ಖ್ಯಾತ ದಲಿತ ನಾಯಕ ಜಗಜೀವನ್ ರಾಂ ಅವರ ಖಾಸಗಿ ಫೋಟೋಗಳನ್ನು ಮನೇಕಾ ಗಾಂಧಿ ತಮ್ಮ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದರು. ಸೂರ್ಯ ಎಂಬ  ನಿಯತಕಾಲಿಕೆಯನ್ನು ನಡೆಸುತ್ತಿದ್ದ ಮನೇಕಾ ಗಾಂಧಿ ಅವರು ಅದೇ ಪತ್ರಿಕೆಯಲ್ಲಿ ಜಗಜೀವನ್ ರಾಂ ಅವರ ಖಾಸಗಿ ಫೋಟೋಗಳನ್ನು ಪ್ರಸಾರ ಮಾಡಿದ್ದರು. ವಿಪರ್ಯಾಸವೆಂದರೆ ದಶಕಗಳ  ಬಳಿಕ ಅಂದರೆ ಈಗ ಅವರ ಪುತ್ರನ ಸೆಕ್ಸ್ ಹಗರಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸೂರ್ಯ ಪತ್ರಿಕೆ ಮನೇಕಾ ಗಾಂಧಿ ಸಂಪಾದಕರಾಗಿದ್ದರು ಎಂದು  ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com