ನವದೆಹಲಿ: 'ತ್ರಿವಳಿ ತಲಾಕ್' ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ಲಿಂಗ ತಾರತಮ್ಯದ ಒಂದು ರೂಪ ಎಂದು ಹೇಳಿರುವ ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ಅದು ನಿಷೇಧಗೊಳ್ಳಬೇಕು ಎಂದು ಮಂಗಳವಾರ ಕರೆ ನೀಡಿದ್ದಾರೆ.
"ಲಿಂಗ ತಾರತಮ್ಯ ಕೊನೆಗೊಳ್ಳಬೇಕು. ನಾವು ನಾಗರಿಕ ಪ್ರಜಾಪ್ರಭುತ್ವ ಸಮಾಜದಲ್ಲಿ ಬದುಕಿದ್ದೇವೆ. ಇಲ್ಲಿ ಲಿಂಗ ತಾರತಮ್ಯ ಏಕಿರಬೇಕು? 'ತ್ರಿವಳಿ ತಲಾಕ್' ಸಂವಿಧಾನದ ಸೂತ್ರಗಳಿಗೆ ವಿರುದ್ಧವಾಗಿದೆ" ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮಾಧ್ಯಮಗಳಿಗೆ ಹೇಳಿದ್ದಾರೆ.
"ಯಾರದೋ ತಪ್ಪಿಗೆ ಈ ನತದೃಷ್ಟ ಮಹಿಳೆಯರಿಗೆ ಏಕೆ ಶಿಕ್ಷೆಯಾಗಬೇಕು? ಇದಕ್ಕಾಗಿಯೇ ಬಿಜೆಪಿ ಸರ್ಕಾರ ತ್ರಿವಳಿ ತಲಾಕ್ ನಿಷೇಧದ ಪರವಾಗಿ ಗಟ್ಟಿಯಾಗಿ ನಿಂತಿರುವುದು" ಎಂದು ನಾಯ್ಡು ಹೇಳಿದ್ದಾರೆ.
'ತ್ರಿವಳಿ ತಲಾಕ್' ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ ಒಂದು ದಿನದ ನಂತರ ನಾಯ್ಡು ಹೀಗೆ ಪ್ರತಿಕ್ರಿಯಿಸಿದ್ದಾರೆ.