ಬೆಂಗಳೂರು: ಒಡಿಶಾದಲ್ಲಿ ವ್ಯಕ್ತಿಯೊಬ್ಬ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಪತ್ನಿಯನ್ನು ಸ್ವಗ್ರಾಮಕ್ಕೆ ಸಾಗಿಸಲು ಹಣವಿಲ್ಲದೇ ಪರದಾಡಿ, ಕೊನೆಗೆ ಪತ್ನಿಯ ಶವವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯಿಂದ ಎಚ್ಚೆತ್ತುಕೊಂಡ ಒಡಿಶಾ ಸರ್ಕಾರ ಮಹಾಪ್ರಯಾಣ ಎಂಬ ಯೋಜನೆ ಆರಂಭಿಸಿದ್ದು, ರಾಜ್ಯದ್ಯಂತ ಪ್ರತಿ ಜಿಲ್ಲಾಸ್ಪತ್ರೆಯ ಬಳಿ ಶವ ಸಾಗಿಸುವ 30 ವಾಹನ ನಿಲ್ಲಿಸಲಾಗುತ್ತಿದೆ.