ಪ್ರಧಾನ ಸುದ್ದಿ

ವಿಷ ಸೇವಿಸಿ ದೆಹಲಿಯಲ್ಲಿ ತಂದೆ-ಪುತ್ರಿ ಆತ್ಮಹತ್ಯೆ

ದೆಹಲಿಯಲ್ಲಿ ಇಡೀ ಕುಟುಂಬ ವಿಷ ಸೇವಿಸಿದ್ದರಿಂದ ತಂದೆ ಮತ್ತು ಪುತ್ರಿ ಮೃತಪಟ್ಟು, ವ್ಯಕ್ತಿಯ ಪತ್ನಿ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷ ಸೇವಿಸಿ ದೆಹಲಿಯಲ್ಲಿ ತಂದೆ-ಪುತ್ರಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ದೆಹಲಿಯಲ್ಲಿ ಇಡೀ ಕುಟುಂಬ ವಿಷ ಸೇವಿಸಿದ್ದರಿಂದ ತಂದೆ ಮತ್ತು ಪುತ್ರಿ ಮೃತಪಟ್ಟು, ವ್ಯಕ್ತಿಯ ಪತ್ನಿ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ದಕ್ಷಿಣ ದೆಹಲಿಯ ಖೇರಾ ಡಾಬರ್ ಪ್ರದೇಶದಲ್ಲಿ ಭಗವಾನ್ ದಾಸ್ (50) ಮತ್ತು ಸರಿತಾ (20) ಮೃತಪಟ್ಟಿದ್ದು, ಭಗವಾನ್ ಅವರ ಪತ್ನಿ ಶಾರದಾ (48) ಅವರನ್ನು ರಾವ್ ತುಲಾ ರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ, 
"ಆತ್ಮಹತ್ಯೆಯ ವಿಷಯವಾಗಿ ಬೆಳಗ್ಗೆ 7:16 ಕ್ಕೆ ಕರೆ ಸ್ವೀಕರಿಸಿರುವುದಾಗಿ" ಉಪ ಪೊಲೀಸ್ ಕಮಿಶನರ್ ಸುರೇಂದರ್ ಕುಮಾರ್ ಹೇಳಿದ್ದಾರೆ. 
ನಿವೃತ್ತ ಸರ್ಕಾರಿ ಅಧಿಕಾರಿ ಭಗವಾನ್ ದಾಸ್ ಮತ್ತು ಪುತ್ರಿ ಸರಿತಾ ಅವರು ಮೃತಪಟ್ಟಿರುವುದನ್ನು ವೈದ್ಯರು ಧೃಢೀಕರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಪೋಲೀಸರ ಪ್ರಕಾರ, ರಷ್ಯಾದಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದ ಭಗವಾನ್ ಅವರ ಪುತ್ರ 15 ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದುದರಿಂದ ಕುಟುಂಬ ಖಿನ್ನತೆಗೆ ಒಳಪಟ್ಟಿತ್ತು ಎಂದು ತಿಳಿಯಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.