ನವದೆಹಲಿ: ಅಕ್ಟೋಬರ್ 2 ಗಾಂಧಿ ಜಯಂತಿಯಂದು ಜಾಗತಿಕ ತಾಪಮಾನವನ್ನು ಕುಗ್ಗಿಸಲು ಮಾಡಿಕೊಂಡಿರುವ ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಫ್ರಾನ್ಸ್ ಸ್ವಾಗತಿಸಿದೆ.
ವಿದೇಶಾಂಗ ವ್ಯವಹಾರಗಳ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ಇಲಾಖೆಯ ಫ್ರೆಂಚ್ ವಕ್ತಾರ ನೀಡಿರುವ ಹೇಳಿಕೆಯಲ್ಲಿ "'ಹವಾಮಾನ ವೈಪರೀತ್ಯ'ದ ವಿರುದ್ಧ ಹೋರಾಡುವ ಬಾರತದ ಬದ್ಧತೆ, ಪ್ಯಾರಿಸ್ ಒಪ್ಪಂದವನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಣಾಯಕವಾಗಲಿದೆ" ಎಂದಿದ್ದಾರೆ.
ಶನಿವಾರ ಕೇರಳದ ಕ್ಯಾಲಿಕಟ್ ನಲ್ಲಿ ಭಾಷಣ ಮಾಡಿದ್ದ ಮೋದಿ, ಪ್ಯಾರಿಸ್ ಒಪ್ಪಂದ 2015 ಅನ್ನು ಅಕ್ಟೋಬರ್ 2 ರಂದು ಅನುಷ್ಠಾನಗೊಳಿಸುವುದುದಾಗಿ ಹೇಳಿದ್ದರು.
ಕಳೆದ ವರ್ಷ ಪ್ಯಾರಿಸ್ ನಲ್ಲಿ 195 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.