ಆದಾಯ ತೆರಿಗೆ ನೋಟಿಸ್ ಹಿಂದೆ ಬಿಜೆಪಿ ಪಕ್ಷದ ಪಿತೂರಿ ಇದೆ: ದೆಹಲಿ ಸಚಿವ

ತಾವು ಹೂಡಿಕೆ ಮಾಡಿರುವ ಮೂರು ಸಂಸ್ಥೆಗಳ ವಿರುದ್ಧ ಆದಾಯ ತೆರಿಗೆ ನೋಟಿಸ್ ನೀಡಿರುವ ಹಿಂದೆ ಬಿಜೆಪಿ ಪಕ್ಷದ ಪಿತೂರಿ ಇದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಬುಧವಾರ ಹೇಳಿದ್ದಾರೆ.
ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್
ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್
Updated on: 
ನವದೆಹಲಿ: ತಾವು ಹೂಡಿಕೆ ಮಾಡಿರುವ ಮೂರು ಸಂಸ್ಥೆಗಳ ವಿರುದ್ಧ ಆದಾಯ ತೆರಿಗೆ ನೋಟಿಸ್ ನೀಡಿರುವ ಹಿಂದೆ ಬಿಜೆಪಿ ಪಕ್ಷದ ಪಿತೂರಿ ಇದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಬುಧವಾರ ಹೇಳಿದ್ದಾರೆ. 
"ಎಲ್ಲರಿಗು ತಿಳಿದಿದೆ. ಇದು ಪಿತೂರಿ ಎಂದು. ಶುಕ್ರವಾರ ಮುಖ್ಯಮಂತ್ರಿ (ಅರವಿಂದ್ ಕೇಜ್ರಿವಾಲ್) ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿ ಪಿತೂರಿಯನ್ನು ಬಯಲಿಗೆಳೆಯಲಿದ್ದಾರೆ" ಎಂದು ಅವರು ಹೇಳಿದ್ದಾರೆ. 
ಮಂಗಳವಾರ ಜೈನ್ ಅವರನ್ನು ಸಮರ್ಥಿಸಿಕೊಂಡಿದ್ದ ಕೇಜ್ರಿವಾಲ್, ಸುಳ್ಳು ಪ್ರಕರಣಗಳು ಮತ್ತು ರಾಜಕೀಯ ಪಿತೂರಿಯಲ್ಲಿ ಅವರನ್ನು ಸಿಕ್ಕಿಸಲಾಗುತ್ತಿದೆ ಎಂದಿದ್ದರು. 
ದೆಹಲಿ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಮುಂಚಿತವಾಗಿಯೇ ಆ ಮೂರೂ ಸಂಸ್ಥೆಗಳ ಎಲ್ಲ ಸ್ಥಾನಗಳಿಂದ ರಾಜೀನಾಮೆ ನೀಡಿರುವುದಾಗಿ ಜೈನ್ ಹೇಳಿದ್ದಾರೆ. "ನಾನು ಹೂಡಿಕೆ ಮಾಡಿದ್ದು 2007 ರಿಂದ 2012-13 ರವರೆಗೆ. ಸಕ್ರಿಯ ರಾಜಕೀಯಕ್ಕೆ ಪ್ರವೇಶ ಪಡೆಯುತ್ತಿದ್ದರಿಂದ ಮೂರೂ ಸಂಸ್ಥೆಗಳ ಎಲ್ಲ ಸ್ಥಾನಗಳಿಂದ ಜುಲೈ 2013 ರಲ್ಲಿಯೇ ರಾಜೀನಾಮೆ ನೀಡಿದ್ದೇನೆ. ಆನಂತರ ಆ ಸಂಸ್ಥೆಗಳ ಯಾವುದೇ ಚಟುವಟಿಕೆಗಳಲ್ಲಿ ನಾನು ಭಾಗಿಯಾಗಿಲ್ಲ" ಎಂದು ಅವರು ಹೇಳಿದ್ದಾರೆ. 
"ಚುನಾವಣಾ ಅಫಿಡವಿಟ್ ನಲ್ಲಿ ನನ್ನೆಲ್ಲಾ ಹೂಡಿಕೆಯನ್ನು ತೋರಿಸಿದ್ದೇನೆ" ಎಂದು ಕೂಡ ಅವರು ಹೇಳಿದ್ದಾರೆ. 
ಆದಾಯ ತೆರಿಗೆ ನೋಟಿಸ್ ನ ನಾಲ್ಕು ಪ್ರತಿಗಳನ್ನು ಪಡೆದಿರುವುದಾಗಿ ಜೈನ್ ಹೇಳಿದ್ದು "ನನ್ನ ತಂದೆ ಒಂದು ಪ್ರತಿ ಪಡೆಯುವಂತೆ, ನನ್ನ ಕಚೇರಿಯಲ್ಲಿ ಮತ್ತೊಂದು ಹಾಗು ನನಗೆ ಪೋಸ್ಟ್ ನಲ್ಲಿ ಎರಡು ನೋಟಿಸ್ ಪ್ರತಿಗಳನ್ನು ಕಳುಹಿಸಿದ್ದಾರೆ. ಇದನ್ನು ಯಾರು ನೋಡಿಕೊಳ್ಳುತ್ತಿದ್ದಾರೋ ನನಗೆ ಗೊತ್ತಿಲ್ಲ ಆದರೆ ನನಗೆ ಸಮನ್ಸ್ ನೀಡಲು ಹೀಗೆ ಮಾಡಿದ್ದಾರೆ" ಎಂದು ಅವರು ಹೇಳಿದ್ದಾರೆ. 
ಅವರು ಹೂಡಿಕೆ ಮಾಡಿರುವ ಮೂರೂ ಸಂಸ್ಥೆಗಳ ಬಗ್ಗೆ ಪ್ರಶ್ನೆ ಮಾಡಲು ಆರು ಸಚಿವಾಲಯಗಳ ಹೊಣೆ ಹೊತ್ತಿರುವ ಜೈನ್ ಅವರಿಗೆ ತೆರಿಗೆ ಇಲಾಖೆ ನೋಟಿಸ್ ನೀಡಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com