ಪ್ರಧಾನ ಸುದ್ದಿ

ಮಾಜಿ ಕಾಂಗ್ರೆಸ್ ಶಾಸಕ ಅಂಬರೀಶ್ ಗೌತಮ್ ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್ ಪಕ್ಷ ಹಿರಿಯ ನಾಯಕರನ್ನು ಕಡೆಗಣಿಸದೆ ಎಂದು ದೂರಿ ತಮ್ಮ ಪುತ್ರ ಅವಿನಾಶ್ ಗೌತಮ್ ಜೊತೆಗೆ ಮಾಜಿ ಕಾಂಗ್ರೆಸ್ ಶಾಸಕ ಅಂಬರೀಶ್ ಗೌತಮ್ ಸೋಮವಾರ ಭಾರತೀಯ ಜನತಾ ಪಕ್ಷ

ಮಾಜಿ ಕಾಂಗ್ರೆಸ್ ಶಾಸಕ ಅಂಬರೀಶ್ ಗೌತಮ್ ಬಿಜೆಪಿಗೆ ಸೇರ್ಪಡೆ
ಮಾಜಿ ಕಾಂಗ್ರೆಸ್ ಶಾಸಕ ಅಂಬರೀಶ್ ಗೌತಮ್
Published On :
ನವದೆಹಲಿ: ಕಾಂಗ್ರೆಸ್ ಪಕ್ಷ ಹಿರಿಯ ನಾಯಕರನ್ನು ಕಡೆಗಣಿಸದೆ ಎಂದು ದೂರಿ ತಮ್ಮ ಪುತ್ರ ಅವಿನಾಶ್ ಗೌತಮ್ ಜೊತೆಗೆ ಮಾಜಿ ಕಾಂಗ್ರೆಸ್ ಶಾಸಕ ಅಂಬರೀಶ್ ಗೌತಮ್ ಸೋಮವಾರ ಭಾರತೀಯ ಜನತಾ ಪಕ್ಷ ಸೇರಿದ್ದಾರೆ. 
ತಮ್ಮ ಸಲಹೆ ತೆಗೆದುಕೊಳ್ಳದೆ ಈ ಬಾರಿಯ ದೆಹಲಿ ಮುನ್ಸಿಪಲ್ ಚುನಾವಣೆಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ ಪೂರ್ವ ದೆಹಲಿಯ ಕೊಂಡ್ಲಿ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಗೌತಮ್. 
"ನನ್ನ ಕ್ಷೇತ್ರ ಮತ್ತು ಕಾರ್ಯಕರ್ತರನ್ನು ಕಡೆಗಣಿಸಿರುವುದರಿಂದ ಮತ್ತು ನನ್ನ ಸಲಹೆ ತೆಗೆದುಕೊಳ್ಳದೆ ಟಿಕೆಟ್ ಗಳನ್ನು ನೀಡಿರುವುದರಿಂದ ನಾನು ಕಾಂಗ್ರೆಸ್ ತೊರೆದಿದ್ದೇನೆ. ನನ್ನನ್ನು ಉಪೇಕ್ಷಿಸಲಾಗಿದೆ" ಎಂದು ಗೌತಮ್ ಬಿಜೆಪಿ ಸೇರಿದ ಮೇಲೆ ವರದಿಗಾರರಿಗೆ ತಿಳಿಸಿದ್ದಾರೆ. 
ಈ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ಕೂಡ ಉಪಸ್ಥಿತರಿದ್ದರು. 
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಪ್ರಶಂಸಿಸಿರುವ ಗೌತಮ್, "ಪ್ರಧಾನಿಯವರು ನೀತಿಗಳು ಮತ್ತು ಕಾರ್ಯವೈಖರಿ ನನಗೆ ಮೆಚ್ಚುಗೆಯಾಗಿದೆ" ಎಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.