ಇನ್ಸ್ಟಾಗ್ರಾಮ್ ಅನುಸರಣೆ; ಟ್ರಂಪ್ ಹಿಂದಿಕ್ಕಿದ ಮೋದಿಗೆ ಈಗ ಮೊದಲ ಸ್ಥಾನ
೬೮ ಲಕ್ಷ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್ಬುಕ್ ನ ಫೋಟೋ ಹಂಚಿಕೊಳ್ಳುವ ಸಾಮಾಜಿಕ ತಾಣ ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಜನ ಅನುಸರಿಸುವ ತಾರೆಯಾಗಿ ಹೊರಹೊಮ್ಮಿದ್ದಾರೆ
ನವದೆಹಲಿ: ೬೮ ಲಕ್ಷ ಬೆಂಬಲಿಗರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್ಬುಕ್ ನ ಫೋಟೋ ಹಂಚಿಕೊಳ್ಳುವ ಸಾಮಾಜಿಕ ತಾಣ ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಜನ ಅನುಸರಿಸುವ ತಾರೆಯಾಗಿ ಹೊರಹೊಮ್ಮಿದ್ದಾರೆ ಎಂದು ಅಧ್ಯನವೊಂದು ತಿಳಿಸಿದೆ.
ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಮೋದಿ ಈಗ ಮೊದಲ ಸ್ಥಾನಕ್ಕೆ ಜಿಗಿದು, ೬೩ ಲಕ್ಷ ಬೆಂಬಲಿಗರಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಸ್ಥಾನದಲ್ಲಿದ್ದಾರೆ ಎಂದು ಅಧ್ಯಯನ ಹೇಳಿದೆ.
ವಿವಿಧ ಸರ್ಕಾರಗಳ ವಿವಿಧ ಇಲಾಖೆಗಳ ಮುಖ್ಯಸ್ಥರ ಮತ್ತು ವಿದೇಶಾಂಗ ಸಚಿವರ ಇನ್ಸ್ಟಾಗ್ರಾಮ್ ಚಟುವಟಿಕೆಗಳನ್ನು ೧೨ ತಿಂಗಳ ಕಾಲ ಅಧ್ಯಯನ ನಡೆಸಲಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ಮೋದಿಯವರ ಕೇವಲ ೫೩ ಫೋಟೋಗಳಷ್ಟೇ ಇದ್ದರೂ, ಈ ಫೋಟೋ ಹಂಚಿಕೊಳ್ಳುವ ತಾಣದಲ್ಲಿ ಇವರನ್ನು ಪರಿಣಾಮಕಾರಿ ನೇತಾರ ಎನ್ನಲಾಗಿದೆ. ಇವರ ಪ್ರತಿ ಪೋಸ್ಟ್ ಗಳು ಸರಾಸರಿ ೨,೨೩,೦೦೦ ಮಾತುಕತೆ ನಡೆಸಿವೆ.
ಮೂರನೇ ಸ್ಥಾನದಲ್ಲಿ ೩೭ ಲಕ್ಷ ಬೆಂಬಲಿಗರೊಂದಿಗೆ ಪೋಪ್ ಫ್ರಾನ್ಸಿಸ್ ಇದ್ದಾರೆ ನಾಲ್ಕನೇ ಸ್ಥಾನದಲ್ಲಿ ವೈಟ್ ಹೌಸ್ ಇದೆ.