ಚರ್ಚ್ ಗಳು ರಾಜಕೀಯದಿಂದ ದೂರವಿರಬೇಕು: ವೆಂಕಯ್ಯ ನಾಯ್ಡು

ಕೇರಳದಲ್ಲಿ ಚರ್ಚ್ ಗಳು ರಾಜಕೀಯಕ್ಕೆ ಇಳಿಯಬಾರದು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗುರುವಾರ ಹೇಳಿದ್ದಾರೆ. ಕೇರಳ ಪ್ರವಾಸದಲ್ಲಿರುವ ನಾಯ್ಡು ವರದಿಗಾರರ ಜೊತೆಗೆ ನಡೆಸಿದ
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
Updated on: 
ತಿರುವಂತನಂತಪುರಂ: ಕೇರಳದಲ್ಲಿ ಚರ್ಚ್ ಗಳು ರಾಜಕೀಯಕ್ಕೆ ಇಳಿಯಬಾರದು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗುರುವಾರ ಹೇಳಿದ್ದಾರೆ. ಕೇರಳ ಪ್ರವಾಸದಲ್ಲಿರುವ ನಾಯ್ಡು ವರದಿಗಾರರ ಜೊತೆಗೆ ನಡೆಸಿದ ಸಂವಾದದಲ್ಲಿ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. 
"ಚರ್ಚ್ ಗಳು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಗಮನ ಹರಿಸಬೇಕು ಮತ್ತು ರಾಜಕೀಯ ಮಾಡಬಾರದು" ಎಂದು ರಾಜ್ಯದಲ್ಲಿ ಬಿಜೆಪಿ ಬೆಳೆಯುವುದಕ್ಕೆ ಚರ್ಚ್ ಗಳು ಅಡ್ಡ ಬಂದಿವೆಯೇ ಎಂಬ ಪ್ರಶೆಗೆ ನಾಯ್ಡು ಹೇಳಿದ್ದಾರೆ.
ಅಲ್ಪಸಂಖ್ಯಾತ ಕೋಮುಗಳನ್ನು ಬಿಜೆಪಿ ಪಕ್ಷ ಓಲೈಸುವುದಿಲ್ಲ ಆದರೆ ಎಲ್ಲರನ್ನು ಬಿಜೆಪಿ ಮುಕ್ತವಾಗಿ ಸ್ವಾಗತಿಸುತ್ತದೆ ಎಂದಿದ್ದಾರೆ. ಕೇರಳದ ೧೪೦ ಕ್ಷೇತ್ರಗಳ ಬಲಾಬಲದ ವಿಧಾನಸಭೆಯಲ್ಲಿ ಬಿಜೆಪಿ ಒಂದು ಸ್ಥಾನ ಗಳಿಸಿದೆ ಮತ್ತು ಲೋಕಸಭೆ ಹಾಗು ರಾಜ್ಯ ಸಭೆಯಲ್ಲಿ ಇನ್ನು ಖಾತೆ ತೆರಯಬೇಕಿದೆ. 
"೨೦೧೪ ರ ಲೋಕಸಭಾ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ೧೨೦ ಕ್ಷೇತ್ರಗಳ ಬಗ್ಗೆ ನಮ್ಮ ಪಕ್ಷದ ಯೋಜನೆಯ ಭಾಗವಾಗಿ ಇಲ್ಲಿದ್ದೇನೆ. ನಮ್ಮ ಪಕ್ಷದ ಮುಖಂಡರನ್ನು ಭೇಟಿ ಮಾಡಲಿದ್ದೇನೆ" ಎಂದು ನಾಯ್ಡು ಹೇಳಿದ್ದಾರೆ. 
ಕಾಂಗ್ರೆಸ್ ಪಕ್ಷದ ಬಗ್ಗೆ ವಾಗ್ದಾಳಿ ನಡೆಸಿರುವ ನಾಯ್ಡು, ಯಾರೇ ಬುದ್ದಿವಂತ ವ್ಯಕ್ತಿ ಕಾಂಗ್ರೆಸ್ ಸೇರಿವುದಿಲ್ಲ, ಅದು "ಮುಳುಗುತ್ತಿರುವ ಹಡಗು" ಎಂದಿದ್ದಾರೆ. "ಹೀಗಿದ್ದೂ, ನಾನು ಕಾಂಗ್ರೆಸ್ ಮುಖಂಡರನ್ನು ಕೇರಳದಲ್ಲಿ ಬಿಜೆಪಿಗೆ ಸೆಳೆಯಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಆದರೆ ವಿವಿಧ ಇತರ ಪಕ್ಷಗಳು ಹಲವು ಮುಖಂಡರು ನಮ್ಮ ಬಳಿಗೆ ಬರಲು ಸಿದ್ಧರಾಗಿದ್ದಾರೆ" ಎಂದಿದ್ದಾರೆ ನಾಯ್ಡು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com