ಭಯೋತ್ಪಾದಕ ದಾಳಿಗಳ ವಿರುದ್ಧ ತಂತ್ರಗಾರಿಕೆಯ-ದಿಟ್ಟ ಕ್ರಮ ತೆಗೆದುಕೊಳ್ಳಬೇಕು: ರಾಹುಲ್
ಮ್ಮು ಮತ್ತು ಕಾಶ್ಮೀರದ ಸೇನಾ ನೆಲೆಯ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಂತಹ ದಾಳಿಗಳ ವಿರುದ್ಧ ತಂತ್ರಗಾರಿಕೆಯ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸೇನಾ ನೆಲೆಯ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಂತಹ ದಾಳಿಗಳ ವಿರುದ್ಧ ತಂತ್ರಗಾರಿಕೆಯ ಮತ್ತು ದಿಟ್ಟತನದ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
"ಮತ್ತೆ ಮತ್ತೆ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. ಅದರಲ್ಲೂ ಸೇನಾ ನೆಲೆಗಳ ಮೇಲೆ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳ ಉಂಟುಮಾಡಿವೆ. ಇವುಗಳ ವಿರುದ್ಧ ತಂತ್ರಗಾರಿಕೆಯ ಮತ್ತು ದಿಟ್ಟತನದ ಕ್ರಮ ತೆಗೆದುಕೊಳ್ಳಬೇಕು" ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ.
"ಕುಪ್ವಾರ ದಾಳಿಯಲ್ಲಿ ಹತ್ಯೆಯಾದ ನಮ್ಮ ಮೂವರು ಧೈರ್ಯಶಾಲಿ ಯೋಧರಿಗೆ ನನ್ನ ಶ್ರದ್ಧಾಂಜಲಿ" ಎಂದು ಕೂಡ ರಾಹುಲ್ ಹೇಳಿದ್ದಾರೆ.
ಕಾಶ್ಮೀರ ಕಣಿವೆಯ ಕುಪ್ವಾರ ಜಿಲ್ಲೆಯ ಸೇನಾ ನೆಲೆಯ ಮೇಲೆ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಯೋಧರು ಮತ್ತು ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದಾರೆ.