ಪಾಟ್ನಾ: ಪಾಟ್ನಾದ ಸರ್ಕಾರಿ ಮಾಧ್ಯಮಿಕ ಪಾಠಶಾಲೆಯಲ್ಲಿ ಲಘು ತೀವ್ರತೆಯ ಬಾಂಬ್ ಸ್ಫೋಟದಿಂದ ಶನಿವಾರ ನಾಲ್ಕು ಶಾಲಾಮಕ್ಕಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಖಾಜೇನ್ಕಲಾದ ಮಾರ್ವಾಡಿ ಕಾಲೋನಿಯ ಉರ್ದು ಮಾಧ್ಯಮಿಕ ಶಾಲೆಯ ಸ್ಫೋಟದಲ್ಲಿ ನಾಲ್ವರು ಮಕ್ಕಳು ಗಾಯಗೊಂಡಿರುವುದಾಗಿ ಪೊಲೀಸ್ ಸೂಪರಿಂಟೆಂಡೆಂಟ್ ಮನು ಮಹಾರಾಜ್ ಹೇಳಿದ್ದಾರೆ.
"ಮೇಲ್ನೋಟಕ್ಕೆ ಇಲ್ಲಿ ಸಮಾಜ ವಿರೋಧಿ ವ್ಯಕ್ತಿಗಳ ಕೈವಾಡ ಕಾಣುತ್ತದೆ. ಶಾಲೆಯ ಮೇಲ್ಛಾವಣಿಯಲ್ಲಿ ಒಂದು ಕಚ್ಚಾ ಬಾಂಬ್ ಇರಿಸಲಾಗಿತ್ತು. ಆಟವಾಡುವಾಗ ಕೆಲವು ಮಕ್ಕಳು ಇದನ್ನು ಮುಟ್ಟಿದ್ದರಿಂದ ಸ್ಫೋಟಗೊಂಡಿದೆ" ಎಂದು ಮಹಾರಾಜ್ ಹೇಳಿದ್ದಾರೆ.
ಈ ಘಟನೆಯ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಗಾಯಗೊಂಡ ಮಕ್ಕಳನ್ನು ಆಸ್ಪತೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.