ಟರ್ಕಿಶ್ ಹಂತಕನನ್ನು ಸೆರೆಹಿಡಿದ ಫೋಟೋಗೆ ವಿಶ್ವ ಮಾಧ್ಯಮ ಛಾಯಾಚಿತ್ರ ಪ್ರಶಸ್ತಿ

Published On :
ಆಮ್ಸ್ಟೆಡಾಮ್: ಟರ್ಕಿ ದೇಶದ ರಷ್ಯನ್ ರಾಯಭಾರಿಯನ್ನು ಹತ್ಯೆಗೈದು, ಮೃತ ದೇಹದ ಪಕ್ಕದಲ್ಲೇ ರಿವಾಲ್ವರ್ ಹಿಡಿದು ಮತ್ತೊಂದು ಕೈ ಮೇಲೆತ್ತಿ ಕಿರುಚುತ್ತಿರುವ ಟರ್ಕಿ ದೇಶದ ವ್ಯಕ್ತಿಯನ್ನು ಸೆರೆಹಿಡಿದ ಫೋಟೋಗೆ ೨೦೧೭ರ ವಿಶ್ವ ಮಾಧ್ಯಮ ಛಾಯಾಚಿತ್ರ ಪ್ರಶಸ್ತಿ ಸಿಕ್ಕಿದೆ. ಈ ಫೋಟೋ ಕ್ಲಿಕ್ಕಿಸಿದವರು ಅಸೋಸಿಯೇಟೆಡ್ ಪ್ರೆಸ್ ನ ಛಾಯಾಗ್ರಾಹಕ-ಪತ್ರಕರ್ತ ಬುರ್ಹಾನ್ ಆಜೆಬಿಲಿಕಿ.
'ಟರ್ಕಿಯಲ್ಲಿ ನಡೆದ ಹತ್ಯೆ' ಎಂದು ಶೀರ್ಷಿಕೆ ನೀಡಲಾಗಿದ್ದ ಸರಣಿ ಫೋಟೋಗಳ ಭಾಗವಾಗಿತ್ತು ಬುರ್ಹಾನ್ ಅವರ ಈ ಫೋಟೋ. ಇದಕ್ಕೆ ಸ್ಪಾಟ್-ನ್ಯೂಸ್ ವಿಭಾಗದಲ್ಲಿಯೂ ಪ್ರಶಸ್ತಿ ದೊರಕಿದೆ. ಡಿಸೆಂಬರ್ ೧೯ ರಂದು ನಡೆಯುತ್ತಿದ್ದ ಫೋಟೋ ಪ್ರದರ್ಶನದಲ್ಲಿ ರಷ್ಯನ್ ರಾಯಭಾರಿ ಆಂಡ್ರಿ ಕಾರ್ಲೋವ್ ಅವರಿಗೆ, ಕೆಲಸದಲ್ಲಿರದ ಪೊಲೀಸ್ ಮೇವ್ಳುತ್ ಮರ್ತ್ ಅಲ್ಟಿಮ್ತಾಸ್ ಗುಂಡು ಹೊಡೆಯುವುದಕ್ಕೆ ಕೆಲ ಕ್ಷಣಗಳ ಮುಂಚೆ ಮತ್ತು ಗುಂಡು ಹೊಡೆದ ಕೆಲ ಕ್ಷಣಗಳ ನಂತರ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ.
ಈ ಘಟನೆ ನಡೆದಾಗ ಆಘಾತಕ್ಕೆ ಒಳಗಾದರು ವೃತ್ತಿಪರ ಪ್ರಕೃತಿ ಈ ಫೋಟೋ ಕ್ಲಿಕ್ಕಿಸುವಂತೆ ಮಾಡಿತು ಎಂದಿದ್ದಾರೆ ಪ್ರಶಸ್ತಿ ವಿಜೇತ ಆಜೆಬಿಲಿಕಿ. "ನನ್ನ ತಲೆ ಕುದಿಯುವ ನೀರಿನಂತೆ ಬೇಯುತ್ತಿತ್ತು ನಂತರ ತಣ್ಣಗಾಯಿತು, ತೀವ್ರವಾಗಿ ತಣ್ಣಗಾಯಿತು. ತೀವ್ರ ಅಪಾಯಕಾರಿಯಾಗಿತ್ತು" ಎಂದಿರುವ ಆಜೆಬಿಲಿಕಿ "ಆದರೆ ಅದೇ ಕ್ಷಣದಲ್ಲಿ ಇದು ದೊಡ್ಡ ಇತಿಹಾಸ ಎಂದು ಅರ್ಥ ಮಾಡಿಕೊಂಡೆ ಮತ್ತು ಅತಿ ಪ್ರಮುಖ ಘಟನೆ ಎಂದು ಕೂಡ" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಪ್ರತಿಷ್ಠಿತ ಸ್ಪರ್ಧೆಗೆ ೧೨೫ ದೇಶಗಳಿಂದ ೫೦೩೫ ಫೋಟೋಗ್ರಾಫರ್ ಗಳು ಒಟ್ಟು ೮೦,೪೦೮ ಫೋಟೋಗಳನ್ನು ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Burhan OzbiliciAssociated PressAndrei KarlovMevlut Mert Altintasಅಸೋಸಿಯೇಟೆಡ್ ಪ್ರೆಸ್ಬುರ್ಹಾನ್ ಆಜೆಬಿಲಿಕಿಮೇವ್ಳುತ್ ಮರ್ತ್ ಅಲ್ಟಿಮ್ತಾಸ್ಆಂಡ್ರಿ ಕಾರ್ಲೋವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


