ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ತಿರುಪತಿ ತಿಮ್ಮಪ್ಪನಿಗೆ ಐದು ಕೋಟಿ ರುಪಾಯಿ ಮೌಲ್ಯದ 19 ಕೆಜಿ ಚಿನ್ನಾಭರಣವನ್ನು ಕಾಣಿಕೆಯಾಗಿ ನೀಡಿದ ನಂತರ ಈಗ ಮೇಹಬೂಬಬಾದ್ ಜಿಲ್ಲೆಯ ಕುರವಿ ವೀರಭದ್ರಸ್ವಾಮಿ ದೇವರಿಗೆ ಶುಕ್ರವಾರ ಚಿನ್ನದ ಮೀಸೆ ಅರ್ಪಿಸಿದ್ದಾರೆ.
ಇಂದು ಬೆಳಗ್ಗೆ ತಮ್ಮ ಕುಟುಂಬ ಸಮೇತ ಕುರವಿ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ತೆಲಂಗಾಣ ಸಿಎಂ, 60 ಸಾವಿರ ರುಪಾಯಿ ಮೌಲ್ಯದ ಚಿನ್ನದೆ ಮೀಸೆಯನ್ನು ಕಾಣಿಕೆಯಾಗಿ ನೀಡಿದ್ದಾರೆ.
ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ತಿರುಪತಿಗೆ ಹರಕೆ ಹೊತ್ತಿರುವುದಾಗಿ ಹೇಳಿದ್ದ ಕೆಸಿಆರ್ ಕೆಸಿಆರ್ ಅವರು ಎರಡು ದಿನಗಳ ಹಿಂದಷ್ಟೇ ತಿರುಪತಿ ತಿಮ್ಮಪ್ಪನಿಗೆ ಚಿನ್ನಾಭರಣ ಅರ್ಪಿಸಿದ್ದರು.