ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಇಂದು ಸಂಜೆ 7ಕ್ಕೆ ಸಿಎಂ ಮಲೆಮಹದೇಶ್ವರ ದೇಗುಲಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ ಡೈರಿ ವಿಚಾರದಲ್ಲಿ ಮಾಧ್ಯಮದವರ ಕಣ್ತಪ್ಪಿಸುವ ಉದ್ದೇಶದಿಂದ ಮಧ್ಯಾಹ್ನ 4 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಕೇವಲ 15 ನಿಮಿಷದಲ್ಲೇ ದೇವರ ದರ್ಶನ ಪಡೆದು, ತರಾತರಿಯಲ್ಲಿ ಯಾರ ಕೈಗೂ ಸಿಗದೆ ಅಲ್ಲಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.