ದೀಪಾ ಜಯಕುಮಾರ್ ರಿಂದ ಹೊಸ ಪಕ್ಷ ಘೋಷಣೆ, ಜಯಾ ಕ್ಷೇತ್ರ ಆರ್.ಕೆ.ನಗರದಿಂದ ಸ್ಪರ್ಧೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸೋದರನ ಪುತ್ರಿ(ಸೋದರ ಸೊಸೆ) ದೀಪಾ ಜಯಕುಮಾರ್ ಅವರು ಶುಕ್ರವಾರ...
ಸುದ್ದಿಗೋಷ್ಠಿಯಲ್ಲಿ ದೀಪಾ ಜಯಕುಮಾರ್
ಸುದ್ದಿಗೋಷ್ಠಿಯಲ್ಲಿ ದೀಪಾ ಜಯಕುಮಾರ್
Updated on
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸೋದರನ ಪುತ್ರಿ(ಸೋದರ ಸೊಸೆ) ದೀಪಾ ಜಯಕುಮಾರ್ ಅವರು ಶುಕ್ರವಾರ ಎಂಜಿಆರ್ ಅಮ್ಮ ದೀಪಾ ಫೋರಂ ಎಂಬ ಹೊಸ ಪಕ್ಷ ಘೋಷಣೆ ಮಾಡಿದ್ದು, ಅಮ್ಮ ಪ್ರತಿನಿಧಿಸುತ್ತಿದ್ದ ಆರ್.ಕೆ.ನಗರದಿಂದಲೇ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಜಯಲಲಿತಾ ಅವರ 69ನೇ ಜನ್ಮದಿನದಂದೆ ಹೊಸ ಪಕ್ಷ ಘೋಷಣೆ ಮಾಡಿ, ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೀಪಾ ಜಯಕುಮಾರ್ ಅವರು, ಇದು ರಾಜಕೀಯ ಪಕ್ಷ ಅಲ್ಲ. ಅಮ್ಮ ಜಯಲಲಿತಾ ಅವರ ಬೆಂಬಲಿಗರು ಒಂದೇ ಕಡೆ ಸೇರುವ ಒಂದು ವೇದಿಕೆ ಎಂದರು.
ಜಯಲಲಿತಾರ ವಿಧಾನಸಭಾ ಕ್ಷೇತ್ರ ಆರ್.ಕೆ ನಗರದಿಂದ ನಾನು ಸ್ಪರ್ಧಿಸಬೇಕೆಂಬುದು ಜನರ ಒತ್ತಾಸೆಯಾಗಿದೆ. ಅವರ ಕರೆಗೆ ಓಗೊಟ್ಟು ನಾನು ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ ಎಂದು ದೀಪಾ ಜಯಕುಮಾರ್ ಹೇಳಿದ್ದಾರೆ.
ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಿದ್ದ ದೀಪಾ, ಸಂಜೆ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಹೆಸರು ಮತ್ತು ಜಯಲಲಿತಾ ಹಾಗೂ ಎಂಜಿಆರ್ ಭಾವಚಿತ್ರವಿರುವ ಧ್ವಜವನ್ನು ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com