ಪ್ರಧಾನ ಸುದ್ದಿ

ರಾಹುಲ್ ಗಾಂಧಿ ನೇತೃತ್ವದಲ್ಲಿ ಚೀನಾಗೆ ಕಾಂಗ್ರೆಸ್ ನಿಯೋಗ

ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ (ಸಿಪಿಸಿ) ನೀಡಿರುವ ಆಹ್ವಾನಕ್ಕೆ ಸ್ಪಂದಿಸಿ ಜನವರಿ ೧೫ ರಿಂದ ಒಂದು ವಾರದ ಕಾಲಕ್ಕೆ, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗ

ರಾಹುಲ್ ಗಾಂಧಿ ನೇತೃತ್ವದಲ್ಲಿ ಚೀನಾಗೆ ಕಾಂಗ್ರೆಸ್ ನಿಯೋಗ
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ
Published On :
ನವದೆಹಲಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ (ಸಿಪಿಸಿ) ನೀಡಿರುವ ಆಹ್ವಾನಕ್ಕೆ ಸ್ಪಂದಿಸಿ ಜನವರಿ ೧೫ ರಿಂದ ಒಂದು ವಾರದ ಕಾಲಕ್ಕೆ, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗ ಬೀಜಿಂಗ್ ಪ್ರವಾಸ ಬೆಳೆಸಲಿದೆ ಎಂದು ಮೂಲಗಳು ತಿಳಿಸಿವೆ. 
ಪಕ್ಷದ ಹಿರಿಯ ನಾಯಕರಾದ ಗುಲಾಂ ನಭಿ ಆಜಾದ್, ಆನಂದ್ ಶರ್ಮ, ಕುಮಾರಿ ಸೆಲ್ಜಾ, ಜ್ಯೋತಿರಾದಿತ್ಯ ಸಿಂಧಿಯಾ, ರಾಜೀವ್ ಸಟವ್ ಮತ್ತು ಸುಶ್ಮಿತಾ ದೇವ್ ಸೇರಿದಂತೆ ಇನ್ನಿತರರು ಈ ನಿಯೋಗದ ಭಾಗವಾಗಿದ್ದಾರೆ. 
ಕಳೆದ ವರ್ಶ ಮೇ ನಲ್ಲಿ ಸಿಪಿಸಿ ನಿಯೋಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರುಗಳನ್ನು ಭೇಟಿ ಮಾಡಿತ್ತು. 
ಈ ನಿಯೋಗ ಆಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಭೇಟಿ ಮಾಡಿತ್ತು. 
ಸಿಪಿಸಿ ಮತ್ತು ಭಾರತೀಯ ರಾಜಕೀಯ ಪಕ್ಷಗಳ ನಡುವೆ ವಿಚಾರ ವಿನಿಯೋಗ ಸಾಮಾನ್ಯ ಸಂಗತಿ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.