ಮೆಕ್ಸಿಕೋ ನೈಟ್ ಕ್ಲಬ್ ರೆಸಾರ್ಟ್ ನಲ್ಲಿ ಗುಂಡಿನ ದಾಳಿ; ನಾಲ್ವರ ಸಾವು: ಪೊಲೀಸರು
ಕೆರೆಬಿಯನ್ ತೀರದಲ್ಲಿರುವ ರೆಸಾರ್ಟ್ ಒಂದರಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯೊಬ್ಬ ಕನಿಷ್ಠ ನಾಲ್ಕು ಜನರನ್ನು ಹತ್ಯೆಗೈದಿದ್ದಾನೆ ಮತ್ತು ಒಂಭತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು
ಕ್ಯಾಂಕನ್: ಕೆರೆಬಿಯನ್ ತೀರದಲ್ಲಿರುವ ರೆಸಾರ್ಟ್ ಒಂದರಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯೊಬ್ಬ ಕನಿಷ್ಠ ನಾಲ್ಕು ಜನರನ್ನು ಹತ್ಯೆಗೈದಿದ್ದಾನೆ ಮತ್ತು ಒಂಭತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಮೆಕ್ಸಿಕೋದ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿರುವುದರಿಂದ ಸದ್ಯಕ್ಕೆ ಮಾಹಿತಿ ನೀಡುವ ಅಧಿಕಾರವಿಲ್ಲವೆಂದು ತಿಳಿಸಿದ್ದು, ಗೌಪ್ಯತೆಯ ಮೇರೆಗೆ ಈ ಅಧಿಕಾರಿ ಮೇಲಿನ ಮಾಹಿತಿ ನೀಡಿದ್ದಾರೆ.
ತನಿಖಾಧಿಕಾರಿಗಳು ಪ್ರತ್ಯಕ್ಷದರ್ಶಿಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದಷ್ಟೇ ತಿಳಿಸಿದ್ದು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ದಾಳಿಯ ಕಾರಣದ ಬಗ್ಗೆ ಸ್ಪಷ್ಟತೆಯಿಲ್ಲ.
ಈ ದಾಳಿ ನಡೆದ ಬ್ಲ್ಯೂ ಪ್ಯಾರಟ್ ನೈಟ್ ಕ್ಲಬ್ ನಲ್ಲಿ ಬಿಪಿಎಂ ಸಂಗೀತೋತ್ಸವವನ್ನು ಆಯೋಜಿಸಲಾಗಿತ್ತು.