ಭೋಪಾಲ್-ಉಜ್ಜಯಿನಿ ಪ್ರಯಾಣಿಕ ರೈಲಿನಲ್ಲಿ ಸ್ಫೋಟ; ನಾಲ್ವರಿಗೆ ಗಾಯ

ಜಾಬ್ಡಿ ರೈಲು ನಿಲ್ದಾಣದ ಬಳಿ ಭೋಪಾಲ್-ಉಜ್ಜಯಿನಿ ಪ್ರಯಾಣಿಕ ರೈಲಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಕನಿಷ್ಠ ನಾಲ್ಕು ಜನ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಾಜಾಪುರ್: ಜಾಬ್ಡಿ ರೈಲು ನಿಲ್ದಾಣದ ಬಳಿ ಭೋಪಾಲ್-ಉಜ್ಜಯಿನಿ ಪ್ರಯಾಣಿಕ ರೈಲಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಕನಿಷ್ಠ ನಾಲ್ಕು ಜನ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಉಜ್ಜಯಿನಿಯಿಂದ ಭೋಪಾಲ್ ಕಡೆಗೆ ಹೊರಟಿದ್ದ ಈ ಪ್ರಯಾಣಿಕರ ರೈಲಿನ ಸಾಮಾನ್ಯ ಬೋಗಿಯಲ್ಲಿ ಬೆಳಗ್ಗೆ ಸುಮಾರು ೯:೩೦ ರಿಂದ ೧೦ ಘಂಟೆಯೊಳಗೆ ಈ ಸ್ಫೋಟ ಸಂಭವಿಸಿದೆ ಎಂದು ಇಂದೋರ್ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿತೇಂದರ್ ಕುಮಾರ್ ಜಯಂತ್ ಹೇಳಿದ್ದಾರೆ. 
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಸ್ಫೋಟದಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಕಲಾಪೀಪಲ್ ಪಟ್ಟಣದ ಆಸ್ಪತ್ರೆಗೆ ಗಾಯಗೊಂಡವರನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸ್ಫೋಟದಿಂದ ಸಾಮಾನ್ಯ ಭೋಗಿಯ ಗಾಜಿನ ಕಿಟಕಿಗಳು ಒಡೆದಿವೆ ಎಂದು ಅವರು ಹೇಳಿದ್ದಾರೆ. 
ಸ್ಫೋಟದ ನಂತರ ರೈಲನ್ನು ನಿಲ್ಲಿಸಲಾಗಿದೆ. ಸಾಮಾನ್ಯ ಬೋಗಿಯಲ್ಲಿ ಹೊಗೆ ದಟ್ಟವಾಗಿ ಆವರಿಸಿದ್ದರಿಂದ ಜನರಲ್ಲಿ ಆತಂಕ ಮೂಡಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ ಎಂದು ತಿಳಿಯಲಾಗಿದೆ. 
ಈ ಸ್ಫೋಟಕ್ಕೆ ಕಾರಣ ತಿಳಿಯಲು ತನಿಖೆ ಪ್ರಾರಂಭವಾಗಿದೆ ಎಂದು ಅಧಿಕಾರಿ ಹೇಳಿದ್ದು, ಸ್ಥಳಕ್ಕೆ ರಕ್ಷಣಾ ರೈಲನ್ನು ಕಳುಹಿಸಿರುವುದಾಗಿ ತಿಳಿಸಿದ್ದಾರೆ. 
ಹೆಚ್ಚಿನ ಮಾಹಿತಿ ತಿಳಿಯಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com