ಹೋಳಿ ಹಬ್ಬದ ದಿನ ಸಂಸ್ಕೃತಿಗಳು ಒಗ್ಗೂಡಲಿ ಎಂದು ಕರೆಕೊಟ್ಟ ರಾಷ್ಟಪತಿ

ಹೋಳಿ ಹಬ್ಬದ ಅಂಗವಾಗಿ ದೇಶದ ಜನತೆಗೆ ಭಾನುವಾರ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದೇಶದ ವೈವಿಧ್ಯ ಸಂಸ್ಕೃತಿಗಳ ಮಧ್ಯೆ 'ಒಗ್ಗಟಿನ ಕಾಮನಬಿಲ್ಲು' ಮೂಡಲಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
Updated on: 
ನವದೆಹಲಿ: ಹೋಳಿ ಹಬ್ಬದ ಅಂಗವಾಗಿ ದೇಶದ ಜನತೆಗೆ ಭಾನುವಾರ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ದೇಶದ ವೈವಿಧ್ಯ ಸಂಸ್ಕೃತಿಗಳ ಮಧ್ಯೆ 'ಒಗ್ಗಟಿನ ಕಾಮನಬಿಲ್ಲು' ಮೂಡಲಿ ಎಂದಿದ್ದಾರೆ. 
"ಹೋಳಿ ಹಬ್ಬದ ಈ ಪವಿತ್ರ ದಿನವಾದ ಇಂದು, ನನ್ನ ಸಮಸ್ತ ನಾಗರಿಕರಿಗೆ ಶುಭಾಶಗಳನ್ನು ವಿಸ್ತರಿಸುತ್ತೇನೆ" ಎಂದು ಮುಖರ್ಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
"ಹೋಳಿ ವಸಂತವನ್ನು ಸಂಭ್ರಮಿಸುತ್ತದೆ ಮತ್ತು ಇದು ನಮ್ಮ ಜೀವನಗಳಲ್ಲಿ ಭರವಸೆ ಮತ್ತು ಸಂತೃಪ್ತಿಯ ಸೇತುವೆ. ಈ ಬಣ್ಣಗಳ ಹಬ್ಬ ದೇಶದ ವೈವಿಧ್ಯ ಸಂಸ್ಕೃತಿಗಳ ಬಣ್ಣಗಳ ನಡುವೆ ಒಗ್ಗಟಿನ ಕಾಮನಬಿಲ್ಲನ್ನು ಸೃಷ್ಟಿಸಲಿ" ಎಂದಿದ್ದಾರೆ. 
"ಈ ದಿನ ನಾವು ದಮನಿತರು ಮತ್ತು ಹಿಂದುಳಿದವರಿಗೆ ಸಂತೋಷ ಮತ್ತು ಖುಷಿಯನ್ನು ಹಂಚೋಣ. ಈ ವಿಶಿಷ್ಟ ಹಬ್ಬ ಭ್ರಾತೃತ್ವವನ್ನು ಬಲಪಡಿಸಿ ನಮ್ಮ ಜನರ ನಡುವೆ ಸಾಮರಸ್ಯ ಮೂಡಿಸಲಿ" ಎಂದು ರಾಷ್ಟ್ರಪತಿ ಹೇಳಿದ್ದಾರೆ. 
"ಈ ವರ್ಷದ ಹೋಳಿ ದೇಶದಲ್ಲಿ ಶಾಂತಿ ಮತ್ತು ವೈಭವದ ಹೊಸ ಪರ್ವವನ್ನು ಪ್ರಾರಂಭಿಸಲಿ" ಎಂದು ಕೂಡ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com