ಇನ್ನು ರಘುಮೂರ್ತಿ ಅವರ ರಾಮನಗರದ ಕಚೇರಿ, ನಾಗರಬಾವಿಯ ವಿನಾಯಕ ಬಡಾವಣೆಯ ಮನೆ, ಯತೀಶ್ ಕುಮಾರ್ ಅವರ ಮೇಯೋಹಾಲ್‌ನ ಕಚೇರಿ, ನಾಗರಬಾವಿಯ ೧೦ನೇ ಬ್ಲಾಕ್‌ನ ಮನೆ, ನಾಗೇಶ್ ಅವರ ಕಾವೇರಿ ಭವನದ ಕಚೇರಿ, ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ಬಳಿ ಇರುವ ಮನೆ ಹಾಗೂ ರಾಮಕೃಷ್ಣ ರೆಡ್ಡಿ ಅವರ ತಾಂತ್ರಿಕ ಶಿಕ್ಷಣ ಮಂಡಳಿಯ ಕಚೇರಿ, ಬ್ಯಾಟರಾಯನಪುರದ ವಿನಾಯಕ ಬಡಾವಣೆಯ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಪಾಸ್ತಿಯನ್ನು ಪರಿಶೀಲನೆ ನಡೆಸಿದ್ದಾರೆ.