ಪ್ರಧಾನ ಸುದ್ದಿ

ವಾರಣಾಸಿ-ಕೊಲಂಬೋಗೆ ನೇರ ವಿಮಾನ ಆಗಸ್ಟ್ ನಿಂದ ಆರಂಭ: ಪ್ರಧಾನಿ ಮೋದಿ

ಇದೇ ಆಗಸ್ಟ್ ತಿಂಗಳಿನಿಂದ ಭಾರತದ ವಾರಣಾಸಿಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೋಗೆ ನೇರ ವಿಮಾನ ಹಾರಾಟ ಆರಂಭಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ವಾರಣಾಸಿ-ಕೊಲಂಬೋಗೆ ನೇರ ವಿಮಾನ ಆಗಸ್ಟ್ ನಿಂದ ಆರಂಭ: ಪ್ರಧಾನಿ ಮೋದಿ
ಪ್ರಧಾನಿ ಮೋದಿ
Published On :

ಕೊಲಂಬೋ: ಇದೇ ಆಗಸ್ಟ್ ತಿಂಗಳಿನಿಂದ ಭಾರತದ ವಾರಣಾಸಿಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೋಗೆ ನೇರ ವಿಮಾನ ಹಾರಾಟ ಆರಂಭಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಶ್ರೀಲಂಕಾದ ಕೊಲಂಬೋದಲ್ಲಿ ನಡೆಯುತ್ತಿರುವ ಬೌದ್ಧ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಾರಣಾಸಿಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೋಗೆ ನೇರ ವಿಮಾನ ಹಾರಾಟ  ಆರಂಭಿಸಲಾಗುತ್ತದೆ. ಆ ಮೂಲಕ ಶ್ರೀಲಂಕಾದಲ್ಲಿರುವ ನಮ್ಮ ತಮಿಳು ಸಹೋದರ ಹಾಗೂ ಸಹೋದರಿಯರು ನೇರವಾಗಿ ವಾರಣಾಸಿಗೆ ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಮಾಡುವಂತಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಬುದ್ಧ ಹುಟ್ಟಿದ ದೇಶ ಭಾರತ. ಹೀಗಾಗಿ ಬುದ್ಧ ಹುಟ್ಟಿದ ನಾಡಿನಿಂದ ಬುದ್ಧ ನೆಲೆಸಿದ್ದ ನಾಡಿಗೆ ವಿಮಾನ ಹಾರಾಟ ನಡೆಸಲಾಗುತ್ತದೆ. ಶಾಂತಿ ಸ್ಥಾಪನೆಗಾಗಿ ಬೌದ್ಧ ಧರ್ಮ ನೀಡಿರುವ ಸಂದೇಶಗಳನ್ನು ನಾನು  ನಂಬುತ್ತೇನೆ. ವಿಶ್ವಾದ್ಯಂತ ವ್ಯಾಪಕವಾಗಿರುವ ಹಿಂಸಾಚಾರಕ್ಕೆ ಬೌದ್ಧ ಧರ್ಮದ ಸಂದೇಶಗಳು ಉಪಶಮನಕಾರಿಯಾಗಬಹುದು. ದುರಂತವೆಂದರೆ ಶಾಂತಿ ಸ್ಥಾಪನೆಗೆ ಅಡ್ಡಿಯಾಗಿರುವ ಭಯೋತ್ಪಾದನೆ ಕುರಿತು ನಾವು  ಸಾವು-ನೋವು ಸಂಭವಿಸಿದಾಗ ಮಾತ್ರ ಮಾತನಾಡುತ್ತೇವೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ವಿಶ್ವ ಸಮುದಾಯ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಮೋದಿ ಹೇಳಿದರು.

ಅಂತೆಯೇ ತಮ್ಮನ್ನು ಬೌದ್ಧ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕಾಗಿ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಹಾಗೂ ಪ್ರಧಾನಿ ವಿಕ್ರಮೆಸಿಂಘೆ ಹಾಗೂ ಶ್ರೀಲಂಕಾ ಪ್ರಜೆಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿ  ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.