ದೇಶಲಾಕ್ ಡೌನ್ ತೆರವುಗೊಳಿಸಲು ಸಿದ್ಧ, ಕೊರೋನಾ ಜತೆ ಜೀವಿಸಲು ಸಿದ್ಧರಾಗಿ: ಕೇಜ್ರಿವಾಲ್
ಒಂದು ಕಡೆ ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 40 ಸಾವಿರ ಗಡಿ ದಾಟಿದೆ. ಮತ್ತೊಂದು ಕಡೆ ದೆಹಲಿಯನ್ನು ಪುನಃ ಆರಂಭಿಸಬೇಕಾಗಿದೆ ಎಂದಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾವು ಕೊರೋನಾ ವೈರಸ್ ಜೊತೆಯೇ ಜೀವನ ಕಟ್ಟಿಕೊಳ್ಳಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.