ಸಿನಿಮಾ ಸುದ್ದಿ'ಶಾಲಿವಾಹನ ಶಕೆ' ಹಳ್ಳಿಯಲ್ಲಿ ನಡೆಯುವ ಟೈಮ್ ಲೂಪ್ ಚಿತ್ರವಾಗಿದೆ: ನಿರ್ದೇಶಕ ಗಿರೀಶ್
ಇಂಜಿನಿಯರ್ ಆಗಿದ್ದು, ನಿರ್ದೇಶಕ್ಕೆ ಇಳಿದಿರುವ ಗಿರೀಶ್, ಕಿರುಚಿತ್ರಗಳ ನಿರ್ದೇಶನದ ಮೂಲಕ ವೃತ್ತಿ ಜೀವನ ಆರಂಭಿಸಿದರು ಮತ್ತು ಅವರ ನಿರ್ದೇಶನದ ಚೊಚ್ಚಲ ಚಿತ್ರ, 'ಒಂದ್ ಕಥೆ ಹೇಳ್ಳಾ' ಮೂಲಕ ಮೆಚ್ಚುಗೆ ಪಡೆದರು. ಈ ಚಿತ್ರದ ನಂತರ, Wow ಚಿತ್ರವನ್ನು ನಿರ್ದೇಶಿಸಿದರು. ಇದೀಗ ಅವರು ತಮ್ಮ ಮೂರನೇ ಚಿತ್ರವಾದ 'ಶಾಲಿವಾಹನ ಶಕೆ' ಬಿಡುಗಡೆಗೆ ಕಾಯುತ್ತಿದ್ದಾರೆ.