ರಾಜ್ಯಬೆಂಗಳೂರು ಟರ್ಫ್ ಕ್ಲಬ್ ಗೆ ನೇಮಕಾತಿ ವಿಚಾರದಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ: ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್
ಬೆಂಗಳೂರು ಟರ್ಫ್ ಕ್ಲಬ್ (BTC) ವ್ಯವಸ್ಥಾಪಕ ಸಮಿತಿಯ ಸ್ಟೀವರ್ಡ್ ಹುದ್ದೆಗೆ ಆಪ್ತರ ನಾಮನಿರ್ದೇಶನ ಮಾಡಲು 1.30 ಕೋಟಿ ರೂಪಾಯಿ ಪಡೆದ ಆರೋಪ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ಪ್ರತಿಫಲಾಪೇಕ್ಷೆ ಪಡೆದ ಸಾಕ್ಷಿಗಳು ಕಂಡುಬರುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.