ರಾಜ್ಯಭಾಗವ ಧ್ವಜ ಪ್ರಕರಣ: ಪುಂಡರಿಗೆ ಕಡಿವಾಣ ಹಾಕದಿದ್ದರೆ, ದೇಶಕ್ಕೇ ಬೆಂಕಿ ಹಚ್ಚುತ್ತಾರೆ; ಹೈಕೋರ್ಟ್ ಕಿಡಿ
ಪ್ರತಿ ಸಮುದಾಯದಲ್ಲಿ ಕೆಲವರು ಪುಂಡ ಸಂಸ್ಕೃತಿಯುಳ್ಳವರು ಇರುತ್ತಾರೆ. ಅವರನ್ನು ಗುರುತಿಸಿ ಬುದ್ದಿಹೇಳಿ ನಿಯಂತ್ರಣ ಮಾಡಿದರೆ ಎಲ್ಲವೂ ನೆಟ್ಟಗಾಗುತ್ತೆ. ಇಲ್ಲವೆಂದರೆ ಇವತ್ತು ಭಗವಾ ಧ್ವಜ ಇಳಿಸುತ್ತಾರೆ, ನಾಳೆ ರಾಷ್ಟ್ರಧ್ವಜ ಇಳಿಸುತ್ತಾರೆ, ದೇಶಕ್ಕೇ ಬೆಂಕಿ ಹಚ್ಚುತ್ತಾರೆ ಎಂದು ಹೈಕೋರ್ಟ್ ಮೌಖಿಕವಾಗಿ ಕಿಡಿಕಾರಿದೆ.