ದೇಶಕೊರೋನಾ ಗೆದ್ದ 110 ವರ್ಷದ ವೃದ್ಧೆ, ಆದರೂ ಕುಟುಂಬಸ್ಥರನ್ನು ಅಸ್ಪೃಶ್ಯರಂತೆ ನೋಡುವ ನೆರೆಹೊರೆ!
ತಮಿಳುನಾಡಿನ 110 ವರ್ಷದ ವೃದ್ಧ ಮಹಿಳೆಯೊಬ್ಬರು ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಿ ವೈರಸ್ ನಿಂದ ಗುಣಮುಖರಾಗಿದ್ದು, ಈ ಮೂಲಕ ಕೊರೋನಾದಿಂದ ಗುಣಮುಖರಾದವರ ದೇಶದ ಹಿರಿಯ ಮಹಿಳೆ ಎನಿಸಿಕೊಂಡಿದ್ದಾರೆ. ಆದರೆ, ಕೊರೋನಾದಿಂದ ವೃದ್ಧ ಮಹಿಳೆ ಗುಣಮುಖರಾಗಿದ್ದರೂ ಕೂಡ ಕುಟುಂಬಸ್ಥರನ್ನು ಜನರು ಅಸ್ಪೃಶ್ಯರಂತೆ ನೋಡುತ್ತಿದ್ದಾರೆಂದು ಹೇಳಲಾಗುತ್ತಿದೆ.