ಕೊರೋನಾ ಗೆದ್ದ 110 ವರ್ಷದ ವೃದ್ಧೆ, ಆದರೂ ಕುಟುಂಬಸ್ಥರನ್ನು ಅಸ್ಪೃಶ್ಯರಂತೆ ನೋಡುವ ನೆರೆಹೊರೆ!

ತಮಿಳುನಾಡಿನ 110 ವರ್ಷದ ವೃದ್ಧ ಮಹಿಳೆಯೊಬ್ಬರು ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಿ ವೈರಸ್ ನಿಂದ ಗುಣಮುಖರಾಗಿದ್ದು, ಈ ಮೂಲಕ ಕೊರೋನಾದಿಂದ ಗುಣಮುಖರಾದವರ ದೇಶದ ಹಿರಿಯ ಮಹಿಳೆ ಎನಿಸಿಕೊಂಡಿದ್ದಾರೆ. ಆದರೆ, ಕೊರೋನಾದಿಂದ ವೃದ್ಧ ಮಹಿಳೆ ಗುಣಮುಖರಾಗಿದ್ದರೂ ಕೂಡ ಕುಟುಂಬಸ್ಥರನ್ನು ಜನರು ಅಸ್ಪೃಶ್ಯರಂತೆ ನೋಡುತ್ತಿದ್ದಾರೆಂದು ಹೇಳಲಾಗುತ್ತಿದೆ. 
ವೃದ್ಧ ಮಹಿಳೆಗೆ ಸಹಾಯಹಸ್ತ ಚಾಚಿದ ಶಾಸಕ
ವೃದ್ಧ ಮಹಿಳೆಗೆ ಸಹಾಯಹಸ್ತ ಚಾಚಿದ ಶಾಸಕ

ಚೆನ್ನೈ: ತಮಿಳುನಾಡಿನ 110 ವರ್ಷದ ವೃದ್ಧ ಮಹಿಳೆಯೊಬ್ಬರು ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಿ ವೈರಸ್ ನಿಂದ ಗುಣಮುಖರಾಗಿದ್ದು, ಈ ಮೂಲಕ ಕೊರೋನಾದಿಂದ ಗುಣಮುಖರಾದವರ ದೇಶದ ಹಿರಿಯ ಮಹಿಳೆ ಎನಿಸಿಕೊಂಡಿದ್ದಾರೆ. ಆದರೆ, ಕೊರೋನಾದಿಂದ ವೃದ್ಧ ಮಹಿಳೆ ಗುಣಮುಖರಾಗಿದ್ದರೂ ಕೂಡ ಕುಟುಂಬಸ್ಥರನ್ನು ಜನರು ಅಸ್ಪೃಶ್ಯರಂತೆ ನೋಡುತ್ತಿದ್ದಾರೆಂದು ಹೇಳಲಾಗುತ್ತಿದೆ. 

ಆಂಬೂರಿನ ಪೆರಿಯಾವಾರಿಕ್ಕಮ್ ನಿವಾಸಿಯಾಗಿರುವ ಹಮಿದಾಬಿ ಎಂಬುವವರು ಎರಡು ವಾರಗಳ ಹಿಂದೆ ಅತೀವ್ರ ಜ್ವರದಿಂದ ಬಳಲುತ್ತಿದ್ದರು. ಕೂಡಲೇ ಅವರ ಪುತ್ರಿ ಮುಬಾರಕ್ ಹಾಗೂ ಮೊಮ್ಮಗಳು ಸಮಾ ಅವರು ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಪರೀಕ್ಷೆ ಬಳಿಕ ವೃದ್ಧೆಯಲ್ಲಿ ವೈರಸ್ ದೃಢಪಟ್ಟಿತ್ತು. 

ಬಳಿಕ ಆಂಬೂರಿನ ಜು.1ರಂದು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಪೂರ್ಣ ಪ್ರಮಾಣದಲ್ಲಿ ಸ್ಪಂದನೆ ನೀಡಿದ್ದ ಮಹಿಳೆ, ನಂತರ ಕ್ವಾರಂಟೈನ್'ಗೆ ಒಳಗಾಗಿದ್ದರು. ಇದೀಗ ಮಹಳೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ಅರೋಗ್ಯ ಇನ್ಸ್ ಪೆಕ್ಟರ್ ಡಿ.ಪ್ರೇಮ್ ಕುಮಾರ್ ಅವರು ಹೇಳಿದ್ದಾರೆ. 

ಮಹಿಳೆಗೆ 110 ವರ್ಷ ವಯಸ್ಸಾಗಿರಬಹುದು. ಆದರೆ, ಅವರ ಕುಟುಂಬಸ್ಥರು 130 ವರ್ಷ ಎಂದು ಹೇಳುತ್ತಿದ್ದಾರೆ. ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಬಳಿಕ ಜು.12ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಸೋಂಕಿನಿಂದ ಗುಣಮುಖರಾದರೂ ಗ್ರಾಮಸ್ಥರು ವೃದ್ಧ ಮಹಿಳೆ ಹಾಗೂ ಕುಟುಂಬಸ್ಥರನ್ನು ಅಸ್ಪೃಶ್ಯರಂತೆ ನೋಡುತ್ತಿದ್ದಾರೆಂದು ಹೇಳಲಾಗುತ್ತಿದೆ. 

ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳೀಯರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಆ ಬಳಿಕ ಕೆಲ ದಿನಗಳ ಕಾಲ ಮೌನವಾಗಿದ್ದ ಜನರು ಇದೀಗ ಮತ್ತೆ ಮಹಿಳೆಯ ಕುಟುಂಬಸ್ಥರನ್ನು ಕೀಳಾಗಿ ನ ೋಡಲು ಆರಂಭಿಸಿದ್ದಾರೆನ್ನಲಾಗಿದೆ. ಮನೆ ಖಾಲಿ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆಂದು ವೃದ್ಧ ಮಹಿಳೆಯ ಮೊಮ್ಮಗಳು ಹೇಳಿದ್ದಾರೆ. 

ಮನೆಯಲ್ಲಿ ದುಡಿಯುವ ಕೈ ಎಂದರೆ ಅದು ನಾನು. ಲಾಕ್'ಡೌನ್ ಹಿನ್ನೆಲೆಯಲ್ಲಿ ಕೆಲಸಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಶೂ ಕಂಪನಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಲಾಕ್'ಡೌನ್ ಘೋಷಣೆಯಾದ ಬಳಿಕ ನಾನು ಕೆಲಸ ಕಳೆದುಕೊಂಡಿದ್ದೇನೆ. ಇದೀಗ ಕುಟುಂಬ ನಿರ್ವಹಣೆ ಬಹಳ ಕಷ್ಟವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಈ ನಡುವೆ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಶಾಸಕ ಎಸಿ.ವಿಲ್ವನಾಥನ್ ಅವರು ಸಹಾಯ ಹಸ್ತ ಚಾಚಿದ್ದು, ರೂ.5000 ಹಾಗೂ ತರಕಾರಿ, ದನಸಿ ಸಾಮಾಗ್ರಿಗಳನ್ನು ವಿತರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com