ಕ್ರೀಡೆಬಾಕ್ಸರ್ ಮೇರಿಗೆ ಪದ್ಮವಿಭೂಷಣ, ಸಿಂಧುಗೆ ಪದ್ಮಭೂಷಣ: ಪದ್ಮ ಪ್ರಶಸ್ತಿಗಾಗಿ 9 ಮಹಿಳಾ ಸಾಧಕಿಯರ ಹೆಸರು ಶಿಫಾರಸು
ಕ್ರೀಡಾಕ್ಷೇತ್ರದಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳ ಅತ್ಯುನ್ನತ ಸಾಧನೆಯನ್ನು ಪರಿಗಣಿಸಲು ಹಾಗೂ ಸಂಭ್ರಮಿಸಲು ಕ್ರೀಡಾ ಸಚಿವಾಲಯ ಸಜ್ಜಾಗಿದೆ. ಇದಕ್ಕಾಗಿ ಇದೇ ಮೊದಲ ಬಾರಿಗೆ ದೇಶದ ಪ್ರತಿಷ್ಠಿತ ನಾಗರಿಕ ಪುರಸ್ಕಾರವಾಗಿರುವ ಪದ್ಮ ಪ್ರಶಸ್ತಿಗಳಿಗಾಗಿ ಸಂಪೂರ್ಣ ಮಹಿಳಾ ಕ್ರಿಡಾತಾರೆಯರ ಪಟ್ಟಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದೆ.