ವಾಣಿಜ್ಯಕೊವಿಡ್-19 ನಿಂದ 30.3 ಲಕ್ಷ ಕೋಟಿ ರೂ. ಆರ್ಥಿಕ ನಷ್ಟ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಹೆಚ್ಚು ಹಾನಿ: ವರದಿ
ಮಹಾಮಾರಿ ಕೊರೋನಾ ವೈರಸ್ ನಿಂದಾಗಿ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿದ್ದು, ಭಾರತ ಬರೋಬ್ಬರಿ 30.3 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು, ಇದು ಕೇಂದ್ರ ಸರ್ಕಾರ ಘೋಷಿಸಿದ ಕೊವಿಡ್-19 ಪರಿಹಾರ ಪ್ಯಾಕೇಜ್(20 ಲಕ್ಷ ಕೋಟಿ) ನ ಶೇ. 50ಕ್ಕಿಂತಲೂ ಹೆಚ್ಚು ಎಂದು ಎಸ್ಬಿಐ ಇಕೋವ್ರಾಪ್ ನ ಇತ್ತೀಚಿನ ವರದಿ ಹೇಳಿದೆ.