• Tag results for Aravind Kejriwal

ದೇಶದ ಶೇ.42 ರಷ್ಟು ಜನರಿಗೆ ಕೇಜ್ರಿವಾಲ್ ಮುಂದಿನ ಪ್ರಧಾನಿಯಾಗಬೇಕೆಂಬ ಬಯಕೆ: ಭಾಸ್ಕರ್ ರಾವ್

"ಭಾರತದ ಶೇಕಡಾ 42 ರಷ್ಟು ಜನರು ಕೇಜ್ರಿವಾಲ್ ಮುಂದಿನ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ" ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

published on : 30th May 2022

'ಈ ಕ್ರಾಂತಿಗೆ' ಪಂಜಾಬ್ ಜನತೆಗೆ ಅಭಿನಂದನೆಗಳು: ಆಪ್ ಗೆಲುವಿನ ಸಂಭ್ರಮವನ್ನು ಬಣ್ಣಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೇಶದಲ್ಲಿ ಪೊರಕೆ ಗುರುತಿನ ಆಪ್ ಪಕ್ಷ ಭಾರೀ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ ಪಂಜಾಬ್ ನಲ್ಲಿ ಇಂದು ನಿರ್ಮಿಸಿದ ಇತಿಹಾಸ. ಕಾಂಗ್ರೆಸ್ ನ ನಾಯಕರಿಗೆಲ್ಲಾ ಸೋಲಿನ ರುಚಿ ತೋರಿಸಿ ಆಪ್ ಸರ್ಕಾರ ರಚಿಸುವತ್ತ ಹೆಜ್ಜೆ ಇಡುತ್ತಿದೆ. 

published on : 10th March 2022

ಪಂಜಾಬ್ ವಿಧಾನಸಭೆ ಚುನಾವಣೆ: ಭಗವಂತ್ ಮನ್ ಆಮ್ ಆದ್ಮಿ ಪಾರ್ಟಿಯ ಸಿಎಂ ಅಭ್ಯರ್ಥಿ

ಪಂಜಾಬ್ ನ ಸಂಗ್ರೂರು ಕ್ಷೇತ್ರದ ಆಮ್ ಆದ್ಮಿ ಪಕ್ಷದ ಲೋಕಸಭಾ ಸದಸ್ಯ ಭಗವಂತ್ ಮನ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದಾರೆ ಎಂದು ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ( Aam Aadmi Party) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

published on : 18th January 2022

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕೊರೋನಾ ಪಾಸಿಟಿವ್

ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಕಳೆದ 10 ದಿನಗಳಿಂದ ಕೋವಿಡ್-19(Covid-19) ಮತ್ತು ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

published on : 4th January 2022

ಪಂಜಾಬ್​ನಲ್ಲಿ ಆಪ್ ಆಧಿಕಾರಕ್ಕೆ ಬಂದರೆ 18 ತುಂಬಿದ ಮಹಿಳೆಯರಿಗೆ ತಿಂಗಳಿಗೆ ಸಾವಿರ ರೂ: ದೆಹಲಿ ಸಿಎಂ ಕೇಜ್ರಿವಾಲ್

ಪಂಜಾಬ್​ನಲ್ಲಿ ಆಮ್​​ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡಿದರೆ, 18 ವರ್ಷ ತುಂಬಿದ ಎಲ್ಲಾ ಯುವತಿಯರಿಗೂ ಪ್ರತಿ ತಿಂಗಳು 1 ಸಾವಿರ ರೂ. ಸಹಾಯಧನ ನೀಡುವುದಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

published on : 22nd November 2021

ದೆಹಲಿ ಆಪ್ ಸರ್ಕಾರದಿಂದ ಶಾಲಾಮಕ್ಕಳಿಗೆ 'ದೇಶಭಕ್ತಿ ಧ್ಯಾನ್' ಪಠ್ಯ ಪುಸ್ತಕ ಬಿಡುಗಡೆ: ಮಕ್ಕಳಲ್ಲಿ ದೇಶಭಕ್ತಿ ಬೆಳೆಸಲು ಕ್ರಮ

ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 'ದೇಶಭಕ್ತಿ ಧ್ಯಾನ್' ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ. ಪ್ರತಿದಿನ ಬೆಳಿಗ್ಗೆ ತರಗತಿ ಶುರುವಿನಲ್ಲಿ ವಿದ್ಯಾರ್ಥಿಗಳು ನಾನು ಭಾರತ ದೇಶವನ್ನು ಗೌರವಿಸುತ್ತೇನೆ ಎಂದು ಜೋರಾಗಿ ಪಠಿಸಬೇಕು.

published on : 30th September 2021

ರಾಜಕಾರಣ ಹೀಗಾಗಲು ರಾಜಿಯೇ-ಕಾರಣ! (ಅಂತಃಪುರದ ಸುದ್ದಿಗಳು)

- ಸ್ವಾತಿ ಚಂದ್ರಶೇಖರ್ ಪ್ರತಿ ನಾಯಕನ ರಾಜಕಾರಣ ಕೇವಲ ರಾಜಕೀಯ ಮೌಲ್ಯಗಳಲ್ಲಿ, ಪಕ್ಷ ಸಿದ್ಧಾಂತಗಳಲ್ಲಿ ಮಾತ್ರ ಅಡಗಿದೆಯ ಅಥವಾ ಮಾನವೀಯ, ನೈತಿಕ ಮೌಲ್ಯಗಳ ಮೇಲೆಯೂ ಆಧಾರಿತವಾಗಿದೆಯೇ ಎಂಬ ಪ್ರಶ್ನೆಗಳು ಕಳೆದ ದಶಕದಿಂದ ದೇಶವ್ಯಾಪಿ ಚರ್ಚೆಯಲ್ಲಿದೆ.

published on : 22nd September 2021

ದೆಹಲಿಯಲ್ಲಿ ವಾಯು ಮಾಲೀನ್ಯ ಭೀತಿ: ಈ ವರ್ಷವೂ ಪಟಾಕಿ ಬಳಕೆ, ಮಾರಾಟ ನಿಷೇಧಿಸಿದ ಕೇಜ್ರಿವಾಲ್ ಸರ್ಕಾರ!

ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗಳಿಗೆ ಈ ವರ್ಷವೂ ದೀಪಾವಳಿ ಸಂಭ್ರಮ ದೂರವಾಗಿದ್ದು, ವಾಯುಮಾಲೀನ್ಯ ಹಿನ್ನಲೆಯಲ್ಲಿ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಪಟಾಕಿ ಬಳಕೆ, ಮಾರಾಟಕ್ಕೆ ನಿಷೇಧ ಹೇರಿದೆ.

published on : 15th September 2021

ಸಿಸಿಟಿವಿ ಅಳವಡಿಕೆಯಲ್ಲಿ ನ್ಯೂಯಾರ್ಕ್, ಲಂಡನ್‌ ಅನ್ನೂ ಮೀರಿಸಿದ ದೆಹಲಿ

ನಗರಗಳಲ್ಲಿ ಸಿಸಿಟಿವಿ ಅಳವಡಿಕೆಯಲ್ಲಿ ರಾಜಧಾನಿ ದೆಹಲಿ ಈಗ ಲಂಡನ್, ಶಾಂಘೈ, ನ್ಯೂಯಾರ್ಕ್ ಮತ್ತು ಸಿಂಗಾಪುರದಂತಹ ನಗರಗಳನ್ನು ಮೀರಿಸಿದ್ದು, ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ..

published on : 26th August 2021

ದೆಹಲಿಯ ಎಲ್ಲಾ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ನಿರ್ದಿಷ್ಟ ಮತಗಟ್ಟೆಗಳಲ್ಲಿ ಕೋವಿಡ್-19 ಲಸಿಕೆ: ಅರವಿಂದ್ ಕೇಜ್ರಿವಾಲ್ 

ದೆಹಲಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ 'ಜಹನ್ ವೋಟ್, ವಹನ್ ವ್ಯಾಕ್ಸಿನೇಷನ್ ಕ್ಯಾಂಪೈನ್' ಅಡಿಯಲ್ಲಿ ಲಸಿಕೆ ನೀಡಲು ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗಳಿಗೆ ಭೇಟಿ ನೀಡಿ ಲಸಿಕೆ ದಿನಾಂಕಗಳನ್ನು ನಿಗದಿಪಡಿಸಲಾಗುವುದು, ಇದಕ್ಕೆ ಮತಗಟ್ಟೆಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಬದಲಾಯಿಸಲಾಗುವುದು.

published on : 7th June 2021

ದೆಹಲಿಯಲ್ಲಿ 944 ಬ್ಲ್ಯಾಕ್ ಫಂಗಸ್ ಪ್ರಕರಣ, 59 ಸಾವು, 41 ಮಂದಿ ಗುಣಮುಖ: ಮುಖ್ಯಮಂತ್ರಿ ಕೇಜ್ರಿವಾಲ್

ದೆಹಲಿಯಲ್ಲಿ 944 ಕಪ್ಪು ಶಿಲೀಂಧ್ರ ಪ್ರಕರಣಗಳಿದ್ದು, 59 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

published on : 1st June 2021

ಹೊಸ ಕೊರೋನಾ ರೂಪಾಂತರಿ ಪತ್ತೆ ಎಂದಿದ್ದ ದೆಹಲಿ ಸಿಎಂ ಕೇಜ್ರಿವಾಲ್: ಸುಳ್ಳು ವದಂತಿ ಎಂದ ಸಿಂಗಾಪುರ ಸರ್ಕಾರ!

ಸಿಂಗಾಪುರದ ಕೋವಿಡ್-19 ಹೊಸ ತಳಿ ಕಂಡುಬಂದಿದೆ ಎಂಬ ವದಂತಿಯನ್ನು ಸಿಂಗಾಪುರ ಆರೋಗ್ಯ ಸಚಿವಾಲಯ ತಳ್ಳಿಹಾಕಿದೆ.

published on : 19th May 2021

ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ: ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ

18 ವರ್ಷ ಮೇಲ್ಪಟ್ಟವರಿಗೆ ಶನಿವಾರದಿಂದ ಉಚಿತ ಲಸಿಕೆ ನೀಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

published on : 26th April 2021

ದೆಹಲಿ ಇನ್ನು 6 ದಿನ ಸ್ತಬ್ಧ: ಇಂದು ರಾತ್ರಿ 10 ಗಂಟೆಯಿಂದ ಬರುವ ಸೋಮವಾರ ಮುಂಜಾನೆ 6 ರವರೆಗೆ ಲಾಕ್ ಡೌನ್!

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ಪ್ರಕರಣ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸೋಮವಾರ ಲಾಕ್ ಡೌನ್ ಘೋಷಿಸಿದೆ. ಇದು ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. 

published on : 19th April 2021

ದೆಹಲಿಯಲ್ಲಿ ಕೊರೋನಾ ದಾಖಲೆ: ಒಂದೇ ದಿನ 25 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ದಾಖಲು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ತನ್ನ ಅಬ್ಬರ ಮುಂದುವರೆಸಿದ್ದು, ಒಂದೇ ದಿನದಲ್ಲಿ ದಾಖಲೆಯ 25 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿದೆ.

published on : 19th April 2021
1 2 > 

ರಾಶಿ ಭವಿಷ್ಯ