• Tag results for CM Basavaraja Bommai

ವಲಯಕ್ಕೊಂದು ಟಾಸ್ಕ್ ಫೋರ್ಸ್: 3ನೇ ದಿನ ಬೆಂಗಳೂರು ಸಿಟಿ ರೌಂಡ್ಸ್ ಬಳಿಕ ಸಿಎಂ ಬೊಮ್ಮಾಯಿ ಘೋಷಣೆ

ಸತತ ಮಳೆ ಸುರಿದು ಹಲವು ಮನೆಗಳಿಗೆ ನೀರು ನುಗ್ಗಿ ಇನ್ನಷ್ಟು ಅವಾಂತರಗಳು ಸೃಷ್ಟಿಯಾಗಿರುವ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮೂರನೇ ದಿನವಾದ ಶುಕ್ರವಾರವೂ ಸಿಟಿ ರೌಂಡ್ಸ್ ನಡೆಸಿದ್ದಾರೆ.

published on : 20th May 2022

ಬಸವರಾಜ​ ಹೊರಟ್ಟಿ ಇಂದು ಬಿಜೆಪಿಗೆ ಅಧಿಕೃತ ಸೇರ್ಪಡೆ; ಹೊರಟ್ಟಿ ಸೇರ್ಪಡೆ ಬಿಜೆಪಿಗೆ ಆನೆ ಬಲ ಎಂದ ಸಿಎಂ ಬೊಮ್ಮಾಯಿ

ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಅವರ ಅನುಭವಕ್ಕೆ ತಕ್ಕುದಾದ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಲು ನಮ್ಮ ಹಿರಿಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 18th May 2022

ಬೆಂಗಳೂರು ಮಳೆಗೆ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಪ್ರಕಟ

ನಿನ್ನೆಯ ಮಳೆಗೆ ಉಲ್ಲಾಳ ಸಮೀಪ ಪೈಪ್ ಲೈನ್ ನಲ್ಲಿ ಸಿಲುಕಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

published on : 18th May 2022

ರಾಜಕಾಲುವೆ ಒತ್ತುವರಿಯಿಂದ ಮಳೆ ಅನಾಹುತ, ಮನೆಗೆ ನೀರು ನುಗ್ಗಿ ಹಾನಿಯಾದವರಿಗೆ 25 ಸಾವಿರ ರೂ. ಪರಿಹಾರ: ಸಿಎಂ ಬೊಮ್ಮಾಯಿ

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರ ಸಾಯಂಕಾಲ ಗಂಟೆಗಳ ಕಾಲ ಸುರಿದ 100 ಮಿಲಿ ಮೀಟರ್ ಗೂ ಅಧಿಕ ಮಳೆಯಿಂದ ಆದ ಅವಾಂತರಗಳು ಅಷ್ಟಿಷ್ಟಲ್ಲ, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮನೆಗಳಿಗೆ ನೀರು ನುಗ್ಗಿದೆ.

published on : 18th May 2022

ಬೆಂಗಳೂರಿನ ಮಳೆ ಅವಾಂತರ ಸ್ಥಿತಿಗತಿ ಅರಿಯಲು ಖುದ್ದು ಭೇಟಿ ನೀಡುತ್ತೇನೆ, ಬಿಬಿಎಂಪಿ ಕಂಟ್ರೋಲ್ ರೂಂ ಸ್ಥಾಪನೆ: ಸಿಎಂ ಬೊಮ್ಮಾಯಿ

ರಾಜಧಾನಿ ಬೆಂಗಳೂರಿನ ಹಲವಾರು ಕಡೆಗಳಲ್ಲಿ 100 ಮಿಲಿ ಮೀಟರ್ ಗಿಂತ ಜಾಸ್ತಿ ಮಳೆ ಸುರಿದಿದೆ. 90 ಮಿಲಿ ಮೀಟರ್ ಮಳೆ ಬಿದ್ದಾಗಲೇ ಬೆಂಗಳೂರಿಗೆ ಆತಂಕವಾಗುತ್ತದೆ. ಅಂತಹುದರಲ್ಲಿ ನಿನ್ನೆ 100 ಮಿಲಿ ಮೀಟರ್ ಗಿಂತ ಹೆಚ್ಚು ಬಿದ್ದಿರುವುದು ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

published on : 18th May 2022

ರಾಜ್ಯ ಸರ್ಕಾರದಿಂದ ಇ-ಕನ್ನಡ ಯೋಜನೆ ಲೋಕಾರ್ಪಣೆ: ಮುಖ್ಯಮಂತ್ರಿಗಳಿಂದ ಇಂದು ಚಾಲನೆ

ಶೀಘ್ರದಲ್ಲೇ, ಹಲವಾರು ರಾಜ್ಯ ಸರ್ಕಾರದ ಇಲಾಖೆಗಳಿಗೆ ಲಗತ್ತಿಸಲಾದ ವೆಬ್‌ಸೈಟ್‌ಗಳ ಯುಆರ್‌ಎಲ್‌ಗಳು (ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್‌ಗಳು) ಅಸ್ತಿತ್ವದಲ್ಲಿರುವ ಇಂಗ್ಲಿಷ್ ಲಿಂಕ್‌ಗಳೊಂದಿಗೆ ಕನ್ನಡದಲ್ಲಿ ಕೂಡ ಲಭ್ಯವಾಗುತ್ತವೆ. 

published on : 17th May 2022

ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಜಾರಿ, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಇಂದು ಗುರುವಾರ ವಿಧಾನಸೌಧದಲ್ಲಿ ಮಧ್ಯಾಹ್ನ 12 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. 

published on : 12th May 2022

ಆಜಾನ್-ಸುಪ್ರಭಾತ ಅಭಿಯಾನ: ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ ಮತ್ತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ರಾಜ್ಯದಾದ್ಯಂತ ಇಂದು ಸೋಮವಾರ ಆಜಾನ್​ v/s ಸುಪ್ರಭಾತ ಸಂಘರ್ಷ ಹೊತ್ತಲ್ಲಿ ಕಾಂಗ್ರೆಸ್​ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ.

published on : 9th May 2022

ಬೊಮ್ಮಾಯಿ ಅಲ್ಲಿ ದುಡ್ಡು ಕೊಟ್ಟು ಬಂದು ಇಲ್ಲಿ ಸಿಎಂ ಆಗಿದ್ದಾರೆ, ಕೈಮುಗಿದು ಕೇಳಿಕೊಳ್ಳುತ್ತೇನೆ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ: ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ.

published on : 8th May 2022

ವಿಶ್ವ ತಾಯಂದಿರ ದಿನ: ಮನೆ, ಮಕ್ಕಳು, ಜಗವನ್ನು ಪೊರೆವ ಮಾತೆಯಂದಿರ ದಿನ

ಇಂದು ಮೇ 8, ವಿಶ್ವ ಅಮ್ಮಂದಿರ ದಿನ. ಎಲ್ಲಾ ತಾಯಂದಿರಿಗೂ ಶುಭಾಶಯಗಳು. 9 ತಿಂಗಳು ತನ್ನ ಮಗುವನ್ನು ಗರ್ಭದಲ್ಲಿಟ್ಟುಕೊಂಡು ಸಾಕಿ ಸಲಹಿ ಪೋಷಿಸಿ ಜನ್ಮನೀಡಿ ವ್ಯಕ್ತಿಗಳನ್ನಾಗಿ ರೂಪಿಸುವ ತಾಯಂದಿರು ಅಥವಾ ಮಾತೆಯರನ್ನು ಸ್ಮರಿಸುವ ಅವರಿಗಾಗಿ ಮೀಸಲಿಡುವ ದಿನ ಇದಾಗಿದೆ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತಿದೆ. 

published on : 8th May 2022

ಅಕ್ರಮದ ಬಗ್ಗೆ ಯಾರ ಬಳಿ ದಾಖಲೆ ಇದ್ದರೂ ನೀಡಲಿ, ತನಿಖೆ ಮಾಡಿಸುತ್ತೇವೆ; ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ: ಸಿಎಂ ಬೊಮ್ಮಾಯಿ

ಎಸ್ಐ ನೇಮಕಾತಿ ಹಗರಣ ಸೇರಿದಂತೆ ಯಾವುದೇ ಭ್ರಷ್ಟಾಚಾರ, ಅಕ್ರಮಗಳ ಕುರಿತು ಹೇಳಿಕೆ ನೀಡುವವರು ಅದಕ್ಕೆ ಪೂರಕವಾದ ದಾಖಲೆಗಳನ್ನು ಸಾಕ್ಷ್ಯಗಳನ್ನು ಒದಗಿಸುವುದು ಅವರ ಕರ್ತವ್ಯ ಕೂಡ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಛರಿಸಿದ್ದಾರೆ.

published on : 7th May 2022

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ: ಸಿಎಂ ಬೊಮ್ಮಾಯಿಗೆ ಶಾಸಕ ಯತ್ನಾಳ್ ಎಚ್ಚರಿಕೆ 

ಸ್ವಪಕ್ಷ ವಿರುದ್ಧವೇ ಟೀಕೆಗಳನ್ನು ಮಾಡುತ್ತಾ, ಮನಸ್ಸಿಗೆ ಕಂಡಿದ್ದನ್ನು ನೇರವಾಗಿ ಹೇಳಿ ವಿವಾದಕ್ಕೀಡಾಗುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸರ್ಕಾರ ವಿರುದ್ಧ ಚಾಟಿ ಬೀಸಿದ್ದಾರೆ.ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಕುರಿತು ಮತ್ತೆ ಸರ್ಕಾರ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದ್ದಾರೆ.

published on : 6th May 2022

ಕಾಂಗ್ರೆಸ್ ನಾಯಕರು ಸಚಿವ ಅಶ್ವಥ್ ನಾರಾಯಣ ವಿರುದ್ಧ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ, ಅವರ ಆರೋಪಕ್ಕೆ ಕಿಂಚಿತ್ತು ಬೆಲೆ ಇಲ್ಲ: ಸಿಎಂ ಬೊಮ್ಮಾಯಿ

ಪಿಎಸ್ಐ ನೇಮಕಾತಿ ಹಗರಣಕ್ಕೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ, ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ, ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯುತ್ತಿದೆ, ಪ್ರತಿದಿನ ಆರೋಪಿಗಳು ಬಂಧನವಾಗುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 5th May 2022

ಅಮಿತ್ ಶಾ ದೆಹಲಿಗೆ ಹೋದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲಿದ್ದಾರೆ: ಸಿಎಂ ಬೊಮ್ಮಾಯಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದು ಹೋಗಿ ಆಗಿದೆ. ಈಗ ಎಲ್ಲರ ಚಿತ್ತ ದೆಹಲಿಯತ್ತವಿದ್ದು, ನಾಯಕತ್ವ ಬದಲಾವಣೆ ಮಾಡುತ್ತಾರೆಯೇ, ಸಂಪುಟ ಪುನರ್ರಚನೆಯೇ, ಸಂಪುಟ ವಿಸ್ತರಣೆಯೇ ಎಂಬ ಚರ್ಚೆ, ಕುತೂಹಲ ಉಂಟಾಗಿದೆ. 

published on : 4th May 2022

ಸಿಎಂ ಬೊಮ್ಮಾಯಿ ಅಧಿಕೃತ ನಿವಾಸದಲ್ಲಿ ಅಮಿತ್ ಶಾಗೆ ಭೋಜನ ಕೂಟ: ಸಂಭಾವ್ಯ ಸಚಿವರ ದಂಡೇ ಆಗಮನ

ಬಿಜೆಪಿಯಲ್ಲಿ ಪ್ರಮುಖ ಬದಲಾವಣೆಯಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಹೇಳಿಕೆ ನೀಡಿದ ನಂತರ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಹೋದ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 

published on : 4th May 2022
1 2 3 4 5 6 > 

ರಾಶಿ ಭವಿಷ್ಯ