• Tag results for Chennai

ವಿಜಯ ಸೇತುಪತಿ ನಟನೆಯ ಸಿನಿಮಾ ಶೂಟಿಂಗ್ ವೇಳೆ ದುರಂತ: ಸ್ಟಂಟ್ ಮಾಸ್ಟರ್ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

ಸಿನಿಮಾದ ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಆದ ಅವಘಡದಲ್ಲಿ ಸ್ಟಂಟ್‌ ಮ್ಯಾನ್‌ ಮಾಸ್ಟರ್ ಸಾವನ್ನಪ್ಪಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ

published on : 5th December 2022

ಬೇರೊಂದು ಧರ್ಮಕ್ಕೆ ಮತಾಂತರಗೊಂಡ ಬಳಿಕ ಜಾತಿಯಾಧಾರಿತ ಮೀಸಲಾತಿ ಬಯಸುವಂತಿಲ್ಲ: ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು

ಮತಾಂತರದೊಂದಿಗೆ ಜಾತಿ ಮುಂದುವರಿಯುವುದಿಲ್ಲ ಎಂದು ಹೇಳುವ ಮೂಲಕ ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವಕನ ಹಿಂದುಳಿದ ಕೋಟಾ ಹಕ್ಕನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.

published on : 3rd December 2022

ಚೆನ್ನೈ: ನಟ ಕಮಲ್ ಹಾಸನ್ ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

ತಮಿಳಿನ ಜನಪ್ರಿಯ ನಟ  ಕಮಲ್ ಹಾಸನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳ್ ನಿಧಿ ಮೈಯಂ ಪಕ್ಷದ  ಮುಖ್ಯಸ್ಥರು ಆಗಿರುವ ಕಮಲ್ ಹಾಸನ್ ಜ್ವರ, ಕೆಮ್ಮು ಮತ್ತು ಶೀತದಿಂದಾಗಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿರುವುದಾಗಿ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. 

published on : 25th November 2022

ಚೆನ್ನೈ: ಕೌನ್ಸೆಲಿಂಗ್ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಶಾಲಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಶಾಲೆಯಲ್ಲಿ ಅನೇಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಪನಗರದಲ್ಲಿರುವ ಖಾಸಗಿ ಶಾಲೆಯೊಂದರ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

published on : 24th November 2022

ಕೊಳಕು ಹೊದಿಕೆ-ದಿಂಬು; ವಾಸನೆ ತಡೆಯಲಾಗದೆ ಸೂಪರ್ ಫಾಸ್ಟ್ ರೈಲಿನ ತುರ್ತು ಸರಪಳಿ ಎಳೆದ ಪ್ರಯಾಣಿಕರು!

ಚೆನ್ನೈ ಸೆಂಟ್ರಲ್- ಏಕ್ತಾ ನಗರ (ಕೆವಾಡಿಯಾ) ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಒಂದು ಗಂಟೆಯ ನಂತರ, ಭಾನುವಾರ ಅರಕ್ಕೋಣಂ ಜಂಕ್ಷನ್‌ನಲ್ಲಿ 20 ನಿಮಿಷಗಳ ಕಾಲ ನಿಂತಿತು. ಕೊಳಕಾದ ಹೊದಿಕೆಗಳು ಮತ್ತು ದಿಂಬುಗಳ ದುರ್ವಾಸನೆಯನ್ನು ಸಹಿಸಲಾಗದೆ ಎಸಿ ಕೋಚ್‌ನಲ್ಲಿದ್ದ ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದಿದ್ದಾರೆ.

published on : 22nd November 2022

ಚೆನ್ನೈ: ವೈದ್ಯಕೀಯ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡಿದ್ದ 17 ವರ್ಷದ ಫುಟ್ಬಾಲ್ ಆಟಗಾರ್ತಿ ಸಾವು

ಬಾಚ್ಡ್ (Botched surgery) ಶಸ್ತ್ರಚಿಕಿತ್ಸೆಯಿಂದ ಬಲಗಾಲನ್ನು ಕಳೆದುಕೊಂಡಿದ್ದ 17 ವರ್ಷದ ಫುಟ್ಬಾಲ್ ಆಟಗಾರ್ತಿ ಇಂದು ಬೆಳಗ್ಗೆ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

published on : 15th November 2022

ಪತಿಯನ್ನು ಇಂಗ್ಲೆಂಡ್ ಗೆ ಕಳುಹಿಸಲು ನೆರವಾಗುವಂತೆ ತಮಿಳುನಾಡು ಸರ್ಕಾರಕ್ಕೆ ನಳಿನಿ ಶ್ರೀಹರನ್ ಮನವಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ನಳಿನಿ ಶ್ರೀಹರನ್ ವೆಲ್ಲೂರು ಜೈಲಿನಿಂದ ಬಿಡುಗಡೆಯಾದ ಬಳಿಕ ಚೆನ್ನೈ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

published on : 14th November 2022

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ತಮಿಳುನಾಡಿನಲ್ಲಿ ಭಾರೀ ಮಳೆ, ಶಾಲಾ-ಕಾಲೇಜುಗಳಿಗೆ ರಜೆ

ತಮಿಳುನಾಡಿನಾದ್ಯಂತ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿನ ವಾಯು ಭಾರ ಕುಸಿತದ ಪ್ರಭಾವದಿಂದ ಚೆನ್ನೈನ ಹಲವಾರು ಭಾಗಗಳು ಮತ್ತು ನೆರೆಯ ಜಿಲ್ಲೆಗಳಾದ ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್‌ಪೇಟ್‌ನಲ್ಲಿ ಭಾರೀ ಮಳೆಯಾಗುತ್ತಿದೆ.

published on : 11th November 2022

ತಿನ್ನುತ್ತಿದ್ದ ಬಿರಿಯಾನಿ ಕೇಳಿದ ಪತ್ನಿಗೆ ಬೆಂಕಿ ಹಚ್ಚಿದ ಗಂಡ: ಪತಿಯನ್ನು ತಬ್ಬಿಕೊಂಡ ಹೆಂಡತಿ; ಮುಂದಾಗಿದ್ದು ಅನಾಹುತ

ತಮಿಳುನಾಡಿನ ರಾಜಧಾನಿ ಚೆನ್ನೈನಿಂದ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಿರಿಯಾನಿ ವಿವಾದದಲ್ಲಿ 74 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಜೀವಂತ ಸುಟ್ಟು ಹಾಕಿದ್ದಾನೆ. 

published on : 10th November 2022

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪ್ರಾಯೋಗಿಕ ಓಡಾಟ ಆರಂಭ, ನ.11ಕ್ಕೆ ಪ್ರಧಾನಿ ಚಾಲನೆ

ಚೆನ್ನೈ - ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲು ಇಂದು ಮುಂಜಾನೆ 5.50ರ ಸಮಯದಲ್ಲಿ ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿತು.  

published on : 7th November 2022

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ; ಚೆನ್ನೈನಲ್ಲಿ ಮಳೆ ಅವಘಡಗಳಲ್ಲಿ ಇಬ್ಬರು ಸಾವು; ಆರೆಂಜ್ ಅಲರ್ಟ್ ಘೋಷಣೆ

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚೆನ್ನೈನಲ್ಲಿ ಮಳೆ ಸಂಬಂಧಿತ ಘಟನೆಗಳಿಂದ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

published on : 1st November 2022

ಮುಂಗಾರುಮಳೆ: ತಮಿಳುನಾಡಿನ 15 ಜಿಲ್ಲೆಗಳಲ್ಲಿ ನಾಳೆಯಿಂದ ನ.5ರವರೆಗೆ ಭಾರಿ ಮಳೆ

ಈಶಾನ್ಯ ಮುಂಗಾರು ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆಯಿದ್ದು, ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ನವೆಂಬರ್ 5ರವರೆಗೆ ಭಾರಿ ಮಳೆಯಾಗಲಿದೆ.

published on : 1st November 2022

ಡಿಎಂಕೆ ನಾಯಕನ ಅವಹೇಳನಕಾರಿ ಹೇಳಿಕೆ: ಕ್ಷಮೆ ಕೇಳಿದ್ರು ಒಪ್ಪಲ್ಲ- ಖುಷ್ಬು

ಖುಷ್ಬು ಮತ್ತು ಬಿಜೆಪಿಯ ಇತರ ಮಹಿಳೆಯರನ್ನು ಐಟಂ ಎಂದು ಟೀಕಿಸಿದ್ದ ಡಿಎಂಕೆ ನಾಯಕ ಸೈದಾಯಿ ಸಿದ್ದಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

published on : 29th October 2022

ಚೆನ್ನೈ: ಗೃಹ ಪ್ರವೇಶಕ್ಕೆ ಪ್ರಾಣಿ ಬಲಿ ವೇಳೆ ದುರಂತ; ಕೋಳಿ ಬಚಾವ್, ವ್ಯಕ್ತಿ ಸಾವು!

ಇದನ್ನು ವಿಧಿಯ ಆಟವೆನ್ನಬೇಕೋ ಗೊತ್ತಿಲ್ಲ. ಹೊಸದಾಗಿ ಕಟ್ಟಿಸಿದ ಮನೆಯನ್ನು ದುಷ್ಟಶಕ್ತಿಗಳಿಂದ ದೂರವಿಡಲು ಬಯಸಿದ 70 ವರ್ಷದ ವೃದ್ಧರೊಬ್ಬರು ಗಂಡು ಕೋಳಿ(ಹುಂಜ)ಯನ್ನು ಬಲಿ ಕೊಡಲು ನಿರ್ಧರಿಸಿ ಮನೆಯ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಅಚ್ಚರಿಯೆಂಬಂತೆ ಅವರ ಮೇಲೆ ಬಿದ್ದ ಹುಂಜ ಮಾತ್ರ ಸ್ವಲ್ಪವೂ ಗಾಯವಿಲ್ಲದೆ ಬದುಕುಳಿದಿದೆ. 

published on : 28th October 2022

ಪ.ರಂಜಿತ್, ಚಿಯಾನ್ ವಿಕ್ರಂ ಜೋಡಿಯ 'ತಂಗಲಾನ್' ಕಿರು ಟೀಸರ್ ಔಟ್

ಪ. ರಂಜಿತ್, ಚಿಯಾನ್ ವಿಕ್ರಂ ಜೋಡಿಯ ಬಹು ನಿರೀಕ್ಷಿತ ಚಿತ್ರದ ಟೈಟಲ್ ಹೊರಬಂದಿದೆ. ಕಿರು ಟೀಸರ್ ನೊಂದಿಗೆ ಟೈಟಲ್ ನ್ನು ಚಿತ್ರ ತಂಡ ಅಧಿಕೃತವಾಗಿ ಘೋಷಿಸಿದೆ.

published on : 24th October 2022
1 2 3 4 5 6 > 

ರಾಶಿ ಭವಿಷ್ಯ