• Tag results for Letter

'ಜೀವನದಲ್ಲಿ ಗುರಿ ತಲುಪಲು ಹತ್ತಿದ ಏಣಿಯನ್ನೇ ಒದೆಯುವುದು ನ್ಯಾಯವೇ?: ಅತೃಪ್ತ ಕಾಂಗ್ರೆಸ್ ನಾಯಕರಿಗೆ ಸಲ್ಮಾನ್ ಖುರ್ಷಿದ್ ಪ್ರಶ್ನೆ 

ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ, ಭಿನ್ನಮತೀಯ ನಿಲುವು ಭುಗಿಲೆದ್ದಿದೆ. 23 ನಾಯಕರು ಪ್ರತ್ಯೇಕ ಸಭೆ ನಡೆಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಬಹಿರಂಗವಾಗಿ ಪತ್ರ ಬರೆದಿದ್ದು ಎಲ್ಲವೂ ಬಹಳ ಚರ್ಚೆಯಾಗುತ್ತಿದೆ.

published on : 4th March 2021

ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಕಾರಿನ ಜವಾಬ್ದಾರಿ ಹೊತ್ತ ಸಂಘಟನೆಯ ಪತ್ರ ಸುಳ್ಳು: ಮುಂಬೈ ಪೊಲೀಸ್

ಕೆಲ ದಿನಗಳ ಹಿಂದೆ ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ ವಾಹನ ನಿಲ್ಲಿಸಿದ ಹೊಣೆ ಹೊತ್ತುಕೊಂಡು ಜೈಶ್ ಉಲ್ ಹಿಂದ್ ಹೆಸರಿನಲ್ಲಿ ಪತ್ರ ಸುಳ್ಳು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

published on : 3rd March 2021

ಜಾತಿ ಪರಿಶೀಲನೆ ಪ್ರಮಾಣಪತ್ರ ಆದೇಶ ಹಿಂಪಡೆಯಿರಿ: ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ 

ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾಗಿರುವ ಕೆಲವು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಜಾತಿ ಪರಿಶೀಲನೆ ಪ್ರಮಾಣಪತ್ರ ನೀಡುವ ಮೊದಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಜಾಗೃತ ಘಟಕದಿಂದ ವರದಿ ಕೇಳುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೊರಡಿಸಿರುವ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

published on : 7th February 2021

ಅಡುಗೆ ಅನಿಲ ದರ ನಿಯಂತ್ರಣದಲ್ಲಿಲ್ಲ. ಪೆಟ್ರೋಲ್ ದರ ಗಗನಕ್ಕೇರಿದೆ: ಜನರಿಗೆ ಸಿದ್ದರಾಮಯ್ಯ ಬಹಿರಂಗ ಪತ್ರ

ಕೇಂದ್ರದ ಬಿಜೆಪಿ ಸರ್ಕಾರ ಜನಪರವಾಗಿಲ್ಲ. ಅಡುಗೆ ಅನಿಲ ದರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ ಏರಿದೆ. ರೈತರು ಮತ್ತು ಜನಪರ ಸಮಸ್ಯೆಗಳಿಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ...

published on : 31st January 2021

ಕೃಷಿ ಕಾಯ್ದೆ: ಪ್ರಧಾನಿ ಮೋದಿ ತಾಯಿಗೆ ಪತ್ರ ಬರೆದ ಪಂಜಾಬ್ ರೈತ!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಶಿಮ್ಲಾದಲ್ಲಿ ಬಂಧನಕ್ಕೊಳಗಾಗಿದ್ದ ಫಿರೋಜ್ ಪುರದ ರೈತ, ತಾನು ಈ ಹಿಂದೆ ಮೋದಿ ಅವರ ತಾಯಿಗೆ ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ.

published on : 23rd January 2021

ಹಿಂದು ದೇವಾಲಯಗಳ ಮೇಲೆ ದೌರ್ಜನ್ಯ: ಅಮಿತ್ ಶಾಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮಿ ಪತ್ರ

ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯನ್ನ ಖಂಡಿಸಿ ಪೇಜಾವರ ಮಠದ ಸ್ವಾಮಿಜಿ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಪತ್ರ ಬರೆದಿದ್ದಾರೆ.

published on : 18th January 2021

ಪಿಎಂ ಕೇರ್ಸ್ ಫಂಡ್: ಪಾರದರ್ಶಕತೆ ಪ್ರಶ್ನಿಸಿ ಮಾಜಿ ಐಎಎಸ್ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ

ಪಿಎಂ ಕೇರ್ಸ್ ಫಂಡ್ ನ ಪಾರದರ್ಶಕತೆಯನ್ನು ಪ್ರಶ್ನಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ 100 ಮಾಜಿ ಐಎಎಸ್ ಅಧಿಕಾರಿಗಳ ತಂಡ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದೆ. 

published on : 17th January 2021

ಭಾರತದಲ್ಲಿನ ರೈತರ ಹೋರಾಟದ ಬಗ್ಗೆ ಪ್ರಧಾನಿ ಬೋರಿಸ್ ಜಾನ್ಸನ್ ಗೆ 100 ಬ್ರಿಟಿಷ್ ಸಂಸತ್ ಸದಸ್ಯರ ಪತ್ರ!

ಭಾರತದಲ್ಲಿನ ರೈತರ ಹೋರಾಟ ಸಮಸ್ಯೆಯನ್ನು ಪರಿಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುವಂತೆ ಸುಮಾರು 100 ಬ್ರಿಟಿಷ್ ಸಂಸತ್ತಿನ ಸದಸ್ಯರು ಆ ರಾಷ್ಟ್ರದ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಪತ್ರ ಬರೆದಿದ್ದಾರೆ.

published on : 9th January 2021

ಪರಿಷತ್‌ ಗದ್ದಲ: ಸದನ ಸಮಿತಿ ರಚನೆ ನಿಯಮ ಬಾಹಿರ; ಸಮಿತಿ ರದ್ದತಿಗೆ ಆಯನೂರು ಆಗ್ರಹ

ವಿಧಾನಪರಿಷತ್‌ನಲ್ಲಿ ಡಿ. 15ರಂದು ನಡೆದ ಅಹಿತಕರ ಘಟನೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸದನ ಸಮಿತಿ ರಚಿಸುವ ವೇಳೆ ನಿಯಮಬಾಹಿರ ಹಾಗೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ

published on : 8th January 2021

ಮೂರು ಹೊಸ ಕೃಷಿ ಕಾನೂನು ಬೆಂಬಲಿಸಿ ಬಹಿರಂಗ ಪತ್ರ, 850ಕ್ಕೂ ಹೆಚ್ಚು ಬೋಧಕವರ್ಗದಿಂದ ಸಹಿ

ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಬೆಂಬಲಿಸಿ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳ 850ಕ್ಕೂ ಹೆಚ್ಚು ಬೋಧಕವರ್ಗದ ಸದಸ್ಯರು ಸಹಿ ಅಭಿಯಾನ ಆರಂಭಿಸಿದ್ದಾರೆ.

published on : 1st January 2021

ಅಂಚೆ ಕಚೇರಿಯ ಕೆಂಪು ಪೆಟ್ಟಿಗೆಯಿಂದ ಮನೆ ಬಾಗಿಲಿಗೆ: ಪತ್ರಗಳ ಇ-ಕ್ಲಿಯರೆನ್ಸ್ ವಿಲೇವಾರಿ 

ರಾಜ್ಯದ ಅಂಚೆ ಕಚೇರಿಗಳ ಕೆಂಪು ಬಾಕ್ಸ್ ಗಳಲ್ಲಿ ಹಾಕಿದ ಪತ್ರಗಳನ್ನು ಇ ವಿಲೇವಾರಿ ಮಾಡಲು ಅಂಚೆ ಕಚೇರಿ ಸಿಬ್ಬಂದಿ ಪ್ರಕ್ರಿಯೆ ಆರಂಭಿಸಿದ್ದಾರೆ.

published on : 30th December 2020

ಕೃಷಿ ಕಾಯ್ದೆ ಹಿಂಪಡೆಯಿರಿ: ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ರೈತ ಮುಖಂಡ

ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಯೂನಿಯನ್ (ಲೋಕಶಕ್ತಿ)ಮುಖ್ಯಸ್ಥ ಶಿಯೋರಾಜ್ ಸಿಂಗ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

published on : 23rd December 2020

ಎಸ್ಸಿ/ಎಸ್ ಟಿ ನೌಕರರ ಬಡ್ತಿ, ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಒತ್ತಾಯ: ಸಮಿತಿ ರಚಿಸಲು ಸಿದ್ದರಾಮಯ್ಯ ಆಗ್ರಹ

ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ನೀಡುವ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ವಿಷಯದಲ್ಲಿ ಉಂಟಾಗಿರುವ ಸಮಸ್ಯೆಗಳ ನಿವಾರಣೆಗೆ ಹಿರಿಯ ಸಚಿವರ ನೇತೃತ್ವದಲ್ಲಿ ಶಾಶ್ವತ ಸಮಿತಿ ರಚಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

published on : 22nd December 2020

ಸರ್ಕಾರದ ಪತ್ರದಲ್ಲಿ ಹೊಸತೇನೂ ಇಲ್ಲ, ನಾವು ಮಾತುಕತೆಗೆ ಸಿದ್ಧ, ಕೇಂದ್ರ ನಿರ್ದಿಷ್ಟ ಪರಿಹಾರ ನೀಡಬೇಕು: ರೈತ ಮುಖಂಡರು

ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿ ಕೋರಿ ಕೇಂದ್ರ ಸರ್ಕಾರ ಬರೆದ ಪತ್ರದಲ್ಲಿ ಹೊಸತೇನೂ ಇಲ್ಲ. ನಾವು ಮಾತುಕತೆಗೆ ಯಾವಾಗಲೂ ಸಿದ್ಧರಿದ್ದೇವೆ. ಆದರೆ ಸರ್ಕಾರ ನಿರ್ದಿಷ್ಟ ಪರಿಹಾರ ನೀಡಬೇಕು..

published on : 21st December 2020

ರೈತರು, ಕಾರ್ಮಿಕರ ಪ್ರತಿಭಟನೆ: ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಸಿದ್ದರಾಮಯ್ಯ ಆಗ್ರಹ

ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಚಳವಳಿ, ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನೆಯಲ್ಲಿ‌ ನಿರತರಾಗಿರುವ ರೈತರು, ಕಾರ್ಮಿಕರನ್ನು‌ ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

published on : 20th December 2020
1 2 3 4 >