• Tag results for Mamata Banerjee

ಮಹಾಮಾರಿ ಕೊರೋನಾಗೆ ಟಿಎಂಸಿ ಶಾಸಕ ಬಲಿ: ಸಿಎಂ ಮಮತಾ ಬ್ಯಾನರ್ಜಿ ಸಂತಾಪ

ಕೊರೋನಾ ಮಹಾಮಾರಿ ವೈರಸ್'ಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ತಮೋನಾಶ್ ಘೋಷ್ (60) ಬಲಿಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ಸಂತಾಪ ಸೂಚಿಸಿದ್ದಾರೆ. 

published on : 24th June 2020

ಕರ್ನಾಟಕ ಸೇರಿ ಹಲವು ರಾಜ್ಯಗಳ ಸಿಎಂ ಜೊತೆ ಇಂದು ಪ್ರಧಾನಿ ವಿಡಿಯೊ ಸಂವಾದ: ಕೊರೋನಾ ಚರ್ಚೆ, ಮಮತಾ ಗೈರು?

ದೇಶದಲ್ಲಿ ಕೊರೋನಾ ವೈರಸ್ ಸ್ಥಿತಿಗತಿ, ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳು, ಮುಂದಿನ ದಿನಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ನಿರ್ಧಾರಗಳ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿ ನಡೆಸುತ್ತಿರುವ ಎರಡನೇ ದಿನದ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಬುಧವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ.

published on : 17th June 2020

ಇಡೀ ದೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂಸಾತ್ಮಕ ರಾಜಕೀಯಕ್ಕೆ ಪ್ರಚೋದನೆ: ಅಮಿತ್ ಶಾ

ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ರಾಜಕೀಯದ ಸಂಸ್ಕೃತಿ ಇದೆ ಎಂಬ ಆರೋಪದೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಆದಾಗ್ಯೂ, ಉಗ್ರರ ವಾತವಾರಣವಿರುವ ಟಿಎಂಸಿ ಆಡಳಿತದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ವಿಸ್ತರಿಸಲು ಬಯಸುವುದಾಗಿ ಅವರು ಹೇಳಿದ್ದಾರೆ.

published on : 9th June 2020

ಶ್ರಮಿಕ್ ರೈಲುಗಳ ಹೆಸರಿನಲ್ಲಿ ಕೊರೊನಾ ಎಕ್ಸ್ ಪ್ರೆಸ್ಗಳನ್ನು ಓಡಿಸುತ್ತಿದೆ: ಮಮತಾ ಬ್ಯಾನರ್ಜಿ ಆಕ್ರೋಶ

ರೈಲ್ವೆ ಇಲಾಖೆ ದೇಶಾದ್ಯಂತ ಶ್ರಮಿಕ್ ವಿಶೇಷ ರೈಲುಗಳ ಹೆಸರಿನಲ್ಲಿ ಕೊರೊನಾ ಎಕ್ಸ್ ಪ್ರೆಸ್ ಗಳನ್ನು ಓಡಿಸುತ್ತಿದೆ ಎಂದು  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 30th May 2020

ನಾವು ಕೊರೋನಾ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎನ್ನುವುದಾದರೆ ಅವರೇ ಮಾಡಲಿ: ಅಮಿತ್ ಶಾಗೆ ಮಮತಾ ತಿರುಗೇಟು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವೆ ವಾಗ್ಯುದ್ಧ ಮುಂದುವರಿದಿದೆ. ಕೊರೋನಾ ವೈರಸ್ ಬಿಕ್ಕಟ್ಟನ್ನು ನಿಭಾಯಿಸುವ ವಿಚಾರದಲ್ಲಿ ಆರಂಭದಿಂದಲೂ ಟೀಕೆ ಪ್ರತಿಟೀಕೆಗಳನ್ನು ಎದುರಿಸುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.

published on : 28th May 2020

''ನನ್ನ ತಲೆ ಕತ್ತರಿಸಿ'' ಕೋಲ್ಕತ್ತಾದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದವರ ವಿರುದ್ಧ ಮಮತಾ ಬ್ಯಾನರ್ಜಿ ಅಸಹನೆ

ಆಂಫಾನ್ ಚಂಡಮಾರುತ ಅಪ್ಪಳಿಸಿ ಬೃಹತ್ ಪ್ರಮಾಣದಲ್ಲಿ ನಷ್ಟವುಂಟಾದ ನಂತರ ವಿದ್ಯುತ್ ಸೇರಿದಂತೆ ಇತರ ಅಗತ್ಯ ಸೇವೆಗಳ ಪುನರ್ ಸ್ಥಾಪನೆಗೆ ಇನ್ನು ಸ್ವಲ್ಪ ದಿನಗಳ ಕಾಲಾವಕಾಶ ಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಳಿದ್ದಾರೆ.

published on : 24th May 2020

ಅಂಫಾನ್ ಚಂಡಮಾರುತದಿಂದ 1 ಲಕ್ಷ ಕೋಟಿ ರೂ. ನಷ್ಟ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಅಂಫಾನ್ ಚಂಡಮಾರುತದಿಂದ ಪಶ್ಚಿಮ ಬಂಗಾಳಕ್ಕೆ 1 ಲಕ್ಷ ಕೋಟಿ ನಷ್ಟವಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

published on : 22nd May 2020

ಅಂಫಾನ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ, ಪ್ರಧಾನಿಗೆ ಮಮತಾ ಬ್ಯಾನರ್ಜಿ ಸಾಥ್

ಅಂಫಾನ್ ಚಂಡಮಾರುತಕ್ಕೆ ಕಂಗಾಲಾಗಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕನ ನಡೆಸುತ್ತಿದ್ದಾರೆಂದು ವರದಿಗಳಿಂದ ಶುಕ್ರವಾರ ತಿಳಿದುಬಂದಿದೆ. 

published on : 22nd May 2020

ಅಂಫಾನ್ ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ 72 ಮಂದಿ ಸಾವು: ಸಿಎಂ ಮಮತಾ

ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಅಂಫಾನ್ ಚಂಡಮಾರುತ ಸಂಬಂಧಿ ಅವಘಡಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72 ಮಂದಿ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಹೇಳಿದ್ದಾರೆ.

published on : 21st May 2020

ಕೇಂದ್ರ ಸುಳ್ಳು ಹೇಳುತ್ತಿದೆ, ಬಂಗಾಳ ಸರ್ಕಾರ ವಲಸಿಗರಿಗಾಗಿ 8 ರೈಲು ಓಡಿಸಲು ಯೋಜಿಸಿದೆ: ಅಮಿತ್ ಶಾಗೆ ಟಿಎಂಸಿ ತಿರುಗೇಟು

ಅವ್ಯವಸ್ಥಿತ ಲಾಕ್ ಡೌನ್ ಹೇರುವ ವಲಸೆ ಕಾರ್ಮಿಕರನ್ನು ನಿರಾಶ್ರಿತಗೊಳಿಸಿದ ಕೇಂದ್ರ ಸರ್ಕಾರಕ್ಕೆ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ, ವಲಸೆ ಕಾರ್ಮಿಕರ ರವಾನೆಗಾಗಿ ಬಂಗಾಳ ಸರ್ಕಾರ 8 ರೈಲುಗಳ ಓಡಿಸಲು ಯೋಜನೆ ರೂಪಿಸಿದೆ ಎಂದು ಆಡಳಿತಾ ರೂಢ  ತೃಣಮೂಲ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದೆ.

published on : 9th May 2020

ಪಶ್ಚಿಮ ಬಂಗಾಳಕ್ಕೆ ರೈಲು ಹೋಗಲು ಬಿಡುತ್ತಿಲ್ಲ, ಇದು ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯ: ಅಮಿತ್ ಶಾ ಆರೋಪ

ವಲಸೆ ಕಾರ್ಮಿಕರನ್ನು ಕರೆದೊಯ್ಯುವ ಶ್ರಮಿಕ ವಿಶೇಷ ರೈಲನ್ನು ಪಶ್ಚಿಮ ಬಂಗಾಳ ರಾಜ್ಯದೊಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಇದರಿಂದ ವಲಸೆ ಕಾರ್ಮಿಕರಿಗೆ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

published on : 9th May 2020

ಬಿಕ್ಕಟ್ಟಿನಲ್ಲೂ ಅಧಿಕಾರ ಕಿತ್ತಿಕೊಳ್ಳಲು ಯತ್ನಿಸಬೇಡಿ: ರಾಜ್ಯಪಾಲ ಧಂಖರ್ ಗೆ ಮಮತಾ ತಿರುಗೇಟು

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೊರೋನಾ ವೈರಸ್ ಬಿಕ್ಕಟ್ಟಿನಲ್ಲೂ ರಾಜ್ಯಪಾಲರು ಅಧಿಕಾರ ಕಿತ್ತಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

published on : 2nd May 2020

ದೀಪ ಬೆಳಗಲು ಕರೆ ನೀಡಿದ ಪ್ರಧಾನಿ: ಅದು ನನ್ನಿಷ್ಟ, ಬೇಕೆಂದರೆ ನಾನು ನಿದ್ರಿಸುತ್ತೇನೆ ಎಂದ ಮಮತಾ ಬ್ಯಾನರ್ಜಿ!

ಏಪ್ರಿಲ್ 5 ರಂದು ಪ್ರಧಾನಿ ನರೇಂದ್ರ ಮೋದಿ ಹಣತೆ, ಮೇಣದ ಬತ್ತಿಗಳನ್ನು ಹತ್ತಿಸುವ ಮೂಲಕ ಕೊರೋನಾ ವಿರುದ್ಧ ದೇಶದ ಒಗ್ಗಟ್ಟಿನ ಪ್ರದರ್ಶನಕ್ಕೆ ಕರೆ ಕೊಟ್ಟಿದ್ದಾರೆ. ಇದರ ಕುರಿತು ಪ್ರತಿಕ್ರಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ನಾನಿದನ್ನು ರಾಜಕೀಯಗೊಳಿಸುವುದಿಲ್ಲ, ನನ್ನ ವೈಯುಕ್ತಿಕ ಇಚ್ಚೆಯಂತಿರುತ್ತೇನೆ. ಇಷ್ಟವಾದರೆ ಆ ಸಮಯದಲ್ಲಿ ನಿದ್ರಿಸುತ್ತೇ

published on : 4th April 2020

ಬಂಗಾಳದಲ್ಲಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ.. ಎಲ್ಲರಿಗೂ ಭಾರತೀಯ ಪೌರತ್ವ ನೀಡಲಾಗಿದೆ: ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಎಲ್ಲ ಬಾಂಗ್ಲಾದೇಶಿಗರೂ ಭಾರತೀಯರೇ ಆಗಿದ್ದು, ಅವರಿಗೆ ಈಗಾಗಲೇ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

published on : 3rd March 2020

ಕೇಂದ್ರೀಯ ಸಂಸ್ಥೆಗಳಿಂದ ಕಿರುಕುಳ, ಒತ್ತಡ ಸಾಕಷ್ಟು ಜನರನ್ನು ಬಲಿಪಡೆದುಕೊಂಡಿದೆ: ಮಮತಾ ಬ್ಯಾನರ್ಜಿ ಆಕ್ರೋಶ

ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳ ಒತ್ತಡ ಹಾಗೂ ಕಿರುಕುಳದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಜೀವಗಳನ್ನು ಬಲಿಪಡೆದುಕೊಂಡಿದೆ ಎಂದು ತೃಣ ಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ.

published on : 19th February 2020
1 2 3 4 5 6 >