• Tag results for Mangaluru

ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ: ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಹಿಂದೂಗಳ ದಶಕಗಳ ಕನಸು ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

published on : 4th August 2020

ಐವಾನ್ ಡಿಸೋಜಾಗೆ ಕೊರೋನಾ ಸೋಂಕು, ಸ್ವಯಂ ಕ್ವಾರಂಟೈನ್ ಆದ ಯುಟಿ ಖಾದರ್!

ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್‌ ಡಿಸೋಜ ಅವರಿಗೆ ಕೊರೋನಾ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ. ಖಾದರ್‌ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

published on : 2nd August 2020

ಮುಜರಾಯಿ ಸಿಬ್ಬಂದಿಗೆ ವಿಮಾ ಸೌಲಭ್ಯ: ಕೋಟಾ ಶ್ರೀನಿವಾಸ ಪೂಜಾರಿ

ಮಾರಕ ಕೊರೋನಾ ವರೈಸ್ ಸಾಂಕ್ರಾಮಿಕದ ನಡುವೆ ರಾಜ್ಯದ ಸಹಸ್ರಾರು ಮುಜಾರಾಯಿ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಿಮಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

published on : 26th July 2020

ಮಂಗಳೂರು: ಮೀನು ಹಿಡಿಯುವ ದೋಣಿ ಮುಳುಗಡೆ, 6 ಮೀನುಗಾರರು ಪ್ರಾಣಾಪಾಯದಿಂದ ಪಾರು

ದೈತ್ಯ ಅಲೆಗಳಿಗೆ ಸಿಕ್ಕ ಮೀನುಗಾರಿಕಾ ದೋಣಿ ಸಮುದ್ರದಲ್ಲಿ ಮುಳುಗಿದ್ದು ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರು ಅಚ್ಚರಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.   

published on : 25th July 2020

ಮಂಗಳೂರು: ಪ್ರಧಾನ ಅಂಚೆ ಕಚೇರಿಯ ಇಬ್ಬರಿಗೆ ಸೋಂಕು, ಸೋಮವಾರ 13 ಅಂಚೆ ಕಚೇರಿ ಬಂದ್

ಕರಾವಳಿಯಲ್ಲಿ ಕೊರೋನಾ ಸೋಂಕು ತೀವ್ರಗೊಂಡಿದ್ದು, ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಸೋಂಕು ತಗಲಿದೆ. ಹೀಗಾಗಿ ನಗರದ 13 ಅಂಚೆ ಕಚೇರಿಗಳು ಸೋಮವಾರ ಬಂದ್ ಆಗಲಿವೆ.

published on : 19th July 2020

ಮಂಗಳೂರು: ವೃದ್ಧ ತಾಯಿಯ ಮೇಲೆ ಅಮಾನುಷ ಹಲ್ಲೆ ನಡೆಸಿದ ಮಗ, ಮೊಮ್ಮಗನ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಹಲಸಿನಕಟ್ಟೆ ಎಂಬಲ್ಲಿ ವೃದ್ಧ ತಾಯಿ ಮೇಲೆ ಮಗ ಹಾಗೂ ಮೊಮ್ಮಕ್ಕಳು ಅಮಾನುಷವಾಗಿ ಹಲ್ಲೆ ಮಾಡಿದ ಪ್ರಕರಣ ವರದಿಯಾಗಿದೆ.

published on : 17th July 2020

ಮಂಗಳೂರಲ್ಲಿ ಗ್ಯಾಂಗ್ ವಾರ್, ಮೂವರು ಯುವಕರಿಗೆ ಗಂಭೀರ ಗಾಯ

ಜುಲೈ 13 ರ ಸೋಮವಾರ ತಡರಾತ್ರಿ ನಗರದ ಬಜಿಲಕೇರಿಯಲ್ಲಿ ನಡೆದ ಘಟನೆಯಲ್ಲಿ, ಮಾರಕ ಆಯುಧ ಹೊಂದಿದ್ದ ಗ್ಯಾಂಗ್ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದೆ. ಕ್ಷುಲ್ಲಕ ಕಾರಣಗಳಿಂದ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

published on : 14th July 2020

ಮಂಗಳೂರು ನಗರ ಪಾಲಿಕೆ ಆಯುಕ್ತರಿಗೂ ಕೊರೋನಾ ಸೋಂಕು!

 ಮಂಗಳೂರು ನಗರ ಪಾಲಿಕೆಯ ಆಯುಕ್ತರಿಗೆ ಕೊರೋನಾ ಸೋಂಕಿರುವುದು ಖಚಿತವಾಗಿದೆ. ಜುಲೈ 12 ರ ಭಾನುವಾರ ಆಯುಕ್ತರಿಗೆ ಕೊರೋನಾ ಇರುವುದು ದೃಢವಾಗಿದೆ.

published on : 12th July 2020

ಮಂಗಳೂರು: ಎಎಸ್‌ಐ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗಳ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ, ಆರೋಪಿ ಬಂಧನ 

ಜುಲೈ 9 ರ ಗುರುವಾರ ತಡರಾತ್ರಿ ನಡೆದ ಘಟನೆಯಲ್ಲಿ, ಬಂಟ್ವಾಳ ನಗರ ಠಾಣೆ  ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ), ಶೈಲೇಶ್ ಟಿ ಮತ್ತು ಇತರ ಮೂವರು ಪೊಲೀಸರ ಮೇಲೆ ತಾಲೂಕಿನ ಮೇಲ್ಕಾರ್ ಎಂಬಲ್ಲಿ  ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ.

published on : 10th July 2020

ಮಂಗಳೂರು: ಆಶಾ ಕಾರ್ಯಕರ್ತೆ ಮೇಲೆ ದೊಣ್ಣೆಯಿಂದ ಹಲ್ಲೆ, ದೂರು ದಾಖಲು 

ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ನಡೆದಿದೆ.

published on : 9th July 2020

ಗುರುಪುರ ಗುಡ್ಡ ಕುಸಿತ ಪ್ರದೇಶದ ನಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ನೈಋತ್ಯ ಮುಂಗಾರು ಹಿನ್ನೆಲೆಯಲ್ಲಿ ಇತ್ತೀಚೆಗೆ ಗುಡ್ಡ ಕುಸಿದ ಸ್ಥಳದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

published on : 7th July 2020

ಮಂಗಳೂರು ಗುಡ್ಡ ಕುಸಿತ ಪ್ರಕರಣ; ಇಬ್ಬರು ಮಕ್ಕಳ ಸಾವು, 5 ಲಕ್ಷ ರೂ. ಪರಿಹಾರ

ಮಂಗಳೂರಿನ ಗುರುಪುರದ ಬಳಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

published on : 6th July 2020

ಮಂಗಳೂರು ಗುಡ್ಡ ಕುಸಿತ ದುರಂತ: ಮಣ್ಣಿನಡಿ ಸಿಲುಕಿದ್ದ ಬಾಲಕ-ಬಾಲಕಿ ದುರ್ಮರಣ!

ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಂಗ್ಲೆಗುಡ್ಡ ಕುಸಿತ ದುರಂತದಲ್ಲಿ ಓರ್ವ ಬಾಲಕ, ಬಾಲಕಿ ದುರ್ಮರಣ ಹೊಂದಿದ್ದಾರೆ.

published on : 5th July 2020

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಗೆ ಕೊರೋನಾ ವೈರಸ್ ಸೋಂಕು

ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರಿಗೆ ಕೊರೋನಾ ಸೋಂಕು ಒಕ್ಕರಿಸಿದೆ.

published on : 5th July 2020

ಮಂಗಳೂರಿನಲ್ಲಿ ಗುಡ್ಡ ಕುಸಿತ; ಹಲವು ಮನೆಗಳು ನೆಲಸಮ, ಮಣ್ಣಿನಡಿ ಸಿಲುಕಿರುವ ಮಕ್ಕಳಿಗಾಗಿ ರಕ್ಷಣಾ ಕಾರ್ಯಾಚರಣೆ

ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಂಗ್ಲೆಗುಡ್ಡ ಕುಸಿದು ಹಲವು ಮನೆಗಳು ನೆಲಸಮಕೊಂಡಿವೆ. ಇನ್ನು ಮಣ್ಣಿನಡಿಯಲ್ಲಿ ಮಕ್ಕಳಿಬ್ಬರೂ ಸಿಕ್ಕಿ ಹಾಕಿಕೊಂಡಿದ್ದು ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಸ್ಥಳೀಯರು ನಿರತರಾಗಿದ್ದಾರೆ.

published on : 5th July 2020
1 2 3 4 5 6 >