• Tag results for Parking

ಬೆಂಗಳೂರು: ಚಾಕು ತೋರಿಸಿ ನಮ್ಮ ಮೆಟ್ರೋ ಪಾರ್ಕಿಂಗ್ ಗುತ್ತಿಗೆದಾರನ ದರೋಡೆ

ಇತ್ತೀಚಿಗೆ ಸ್ವಾಮಿ ವಿವೇಕಾನಂದ ರಸ್ತೆ ನಮ್ಮ ಮೆಟ್ರೋ ನಿಲ್ದಾಣದಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಚಾಕು ತೋರಿಸಿ ಮೆಟ್ರೋ ಗುತ್ತಿಗೆದಾರರೊಬ್ಬರಿಂದ 16 ಸಾವಿರ ರೂ. ದರೋಡೆ ಮಾಡಿದ್ದಾನೆ.

published on : 24th November 2021

ಬೆಂಗಳೂರು: ಪಾರ್ಕಿಂಗ್ ಗೆ ಹೊಸ ನೀತಿ, ಸಾರ್ವಜನಿಕ ಸಲಹೆಗಳಿಗೆ ಆಯುಕ್ತ ಕಮಲ್ ಪಂತ್ ಆಹ್ವಾನ

ರಾಜ್ಯ ಸರ್ಕಾರ ಪರಿಗಣಿಸುತ್ತಿರುವ ಬೆಂಗಳೂರಿನ ಹೊಸ ಪಾರ್ಕಿಂಗ್ ನೀತಿಗಾಗಿ ಸಾರ್ವಜನಿಕ ಸಲಹೆಗಳಿಗೆ ನಗರ ಆಯುಕ್ತ ಕಮಲ್ ಪಂತ್ ಆಹ್ವಾನ ನೀಡಿದ್ದಾರೆ. 

published on : 23rd November 2021

ರೈಲ್ವೇ ಸ್ಟೇಷನ್ ಪಾರ್ಕಿಂಗ್ ನಲ್ಲಿ ವಿನಾಕಾರಣ 19 ಕಾರು ಗಾಜುಗಳನ್ನು ಪುಡಿ ಮಾಡಿದ್ದ ಕಿಡಿಗೇಡಿ ಬಂಧನ

ಕಾರು ಪುಡಿಗಟ್ಟಿದ್ದ ದಿನ ರಾತ್ರಿ ಆರೋಪಿ ಯುವಕ ಮನೆಯಲ್ಲಿ ಜಗಳವಾಡಿದ್ದ. ಮಧ್ಯರಾತ್ರಿ ಅದೇ ಸಿಟ್ಟಲ್ಲಿ ಮನೆಯಿಂದ ಹೊರಬಿದ್ದಿದ್ದ.

published on : 11th October 2021

ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಹಿಂದೂಯೇತರರಿಗೆ ಪಾರ್ಕಿಂಗ್ ನಿರ್ಬಂಧ!

ವಿವಿಧ ಧರ್ಮಕ್ಕೆ ಸೇರಿದವರೂ ಕೂಡಾ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತಾರೆ, ಪೂಜಿಸುತ್ತಾರೆ. ದೇವಸ್ಥಾನದ ಪಾರ್ಕಿಂಗ್ ಸ್ಥಳ ಎಲ್ಲರಿಗೂ ಸೇರಿದ್ದು ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕಿಡಿ ಕಾರಿದ್ದಾರೆ.

published on : 30th August 2021

ಪಾರ್ಕಿಂಗ್ ವಿಷಯವಾಗಿ ಡಿಸಿಪಿ ಪತ್ನಿ ಮತ್ತು ಎಎಸ್ಐ ಕುಟುಂಬದ ನಡುವೆ ವಾಗ್ವಾದ, ಎಫ್ಐಆರ್ ದಾಖಲು!

ಪಾರ್ಕಿಂಗ್ ವಿಷಯವಾಗಿ ಡಿಸಿಪಿ ಪತ್ನಿ ಹಾಗೂ ಸಬ್ ಇನ್ಸ್ಪೆಕ್ಟರ್ ಕುಟುಂಬದ ನಡುವೆ ವಾಗ್ವಾದ ನಡೆದ ಪರಿಣಾಮ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

published on : 21st July 2021

ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ನಗರದ ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕಱಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ. 

published on : 22nd April 2021

ಬೆಂಗಳೂರು: ಇನ್ನು ಮುಂದೆ ನಗರದಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ!

ರಾಜ್ಯ ರಾಜಧಾನಿಯಲ್ಲಿ ಪ್ರಸ್ತುತ ಇರುವ ಬಹುತೇಕ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ಬದಲಾಯಿಸುವುದು ಸೇರಿದಂತೆ ನಗರ ಭೂ ಸಾರಿಗೆ ನಿರ್ದೇಶನಾಲಯ ಸಿದ್ಧಪಡಿಸಿರುವ ಪರಿಷ್ಕೃತ ಪಾರ್ಕಿಂಗ್ ನೀತಿ 2.0ರ ಅನುಷ್ಟಾನಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

published on : 11th February 2021

ನಮ್ಮ ಮೆಟ್ರೋ: ವಿಸ್ತರಿಸಿದ ಹಸಿರು ಮಾರ್ಗದಲ್ಲಿ ವಾಹನ ನಿಲುಗಡೆಗೆ ಕೊರತೆ, ರೈಲು ಚಾಲನೆಗೆ ಕಳೆಗುಂದಿದ ಉತ್ಸಾಹ!

ಕನಕಪುರ ರಸ್ತೆಯಾದ್ಯಂತ ವಿಸ್ತರಿಸಿದ ಹಸಿರು ಮಾರ್ಗದಲ್ಲಿನ ಐದು ನಿಲ್ದಾಣಗಳಲ್ಲಿ ಎಲ್ಲಿಯೂ ಕಾರು ಪಾರ್ಕಿಂಗ್ ಸೌಲಭ್ಯ ಇಲ್ಲದಿರುವುದು ಮತ್ತು ಈ ಮಾರ್ಗದ ಮೂರು ರೈಲು ನಿಲ್ದಾಣಗಳಲ್ಲಿ ಸಿಮೀತ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಿರುವುದು ಉದ್ಘಾಟನೆ ಬಗೆಗಿನ ಆಸಕ್ತಿಯನ್ನು ಕುಂದಿಸಿದೆ.

published on : 11th January 2021

ಪಾರ್ಕಿಂಗ್ ಗಾರ್ಡ್ ಗಳೇ ಇಲ್ಲ: ಬೈಯಪ್ಪನ ಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೊಸ ಸಮಸ್ಯೆ!

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿನ ಪಾರ್ಕಿಂಗ್ ಗುತ್ತಿಗೆ ಅವಧಿ ಮುಗಿದಿದ್ದು, ಗುತ್ತಿಗೆಯನ್ನು ಹೊಸದಾಗಿ ಇನ್ನೂ ಯಾರಿಗೂ ನೀಡಿಲ್ಲ. ಇದರಿಂದಾಗಿ ಇಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಕೆಲಸಕ್ಕೆ ತೆರಳುವ ನೂರಾರು ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ. 

published on : 12th December 2020

ಕಾರು ಖರೀದಿಸುತ್ತಿದ್ದೀರಾ? ಹಾಗಾದರೆ ನಿಲುಗಡೆಗೆ ಸ್ಥಳಾವಕಾಶ ಇರುವ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಿ!

ರಾಜಧಾನಿ ಬೆಂಗಳೂರಿನಲ್ಲಿ ವಾಹನ ಖರೀದಿ ಮಾಡಲು ಮುಂದಾಗಿರುವವರು ಇನ್ನು ಮುಂದೆ ಈ ಅಂಶಗಳನ್ನು ಗಮನಿಸಲೇಬೇಕಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನುಂದೆ ವಾಹನ ಖರೀದಿಗೆ ಮುಂದಾಗುವವರು ಸ್ವಂತ ಸ್ಥಳಾವಕಾಶ ಹೊಂದಿರುವ ಬಗ್ಗೆ ದೃಢೀಕರಣ ಪತ್ರವನ್ನು ಸಲ್ಲಿಸಬೇಕಿದೆ. 

published on : 2nd December 2020

ಪಾರ್ಕಿಂಗ್ ನೀತಿ 2.0 ಪರಾಮರ್ಶಿಸಿ, ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು ನಗರದಲ್ಲಿ ವಾಹನ ನಿಲುಗಡೆ ಕುರಿತಂತೆ ಪಾರ್ಕಿಂಗ್ ನೀತಿಯನ್ನು ಪರಿಷ್ಕರಿಸಿ, ಪಾರ್ಕಿಂಗ್ ನೀತಿ 2.0 ಯನ್ನು ರೂಪಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

published on : 1st December 2020

ರಾಶಿ ಭವಿಷ್ಯ