- Tag results for Samantha
![]() | ಕೈಗೆ ಗಾಯ: ಶೂಟಿಂಗ್ ವೇಳೆ ನಟಿ ಸಮಂತಾಗೆ ಏನಾಯ್ತು!ಸಮಂತಾ ರುತ್ ಪ್ರಭು ದಕ್ಷಿಣ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿ. ಅಭಿನಯದಿಂದ ಪ್ಯಾನ್ ಇಂಡಿಯಾ ಮಟ್ಟದ ಪ್ರೇಕ್ಷಕರ ಹೃದಯದಲ್ಲಿ ಸಾಕಷ್ಟು ಸ್ಥಾನವನ್ನು ಗಳಿಸಿದ್ದಾರೆ. |
![]() | ಸಮಂತಾ ನಟನೆಯ 'ಶಾಕುಂತಲಂ' ಚಿತ್ರದ 'ಮಲ್ಲಿಕಾ ಮಲ್ಲಿಕಾ...' ಹಾಡು ಬಿಡುಗಡೆನಟಿ ಸಮಂತಾ ನಟಿಸುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ಶಾಕುಂತಲಂ. ಪುರಾಣದ ಹಿನ್ನೆಲೆ ಇರುವ ಈ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದು, ಬುಧವಾರ ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. |
![]() | 'ನನ್ನಂತೆ ನಿಮಗೆ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬರುವುದು ಬೇಡ': ವ್ಯಂಗ್ಯ ಟ್ವೀಟ್ ಗೆ ಸಮಂತಾ ಉತ್ತರನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಕಳೆದೊಂದು ವರ್ಷದಿಂದ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ವೃತ್ತಿಜೀವನ ಇನ್ನೇನು ಏರುಗತಿಯಲ್ಲಿ ಇದೆ ಎನ್ನುವಾಗಲೇ ಅವರಿಗೆ ಆರೋಗ್ಯ ಕೈ ಕೊಟ್ಟಿತು. ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲಿ ಹಲವು ತಿಂಗಳು ಚಿಕಿತ್ಸೆ ಪಡೆದ ನಂತರವೂ ಅವರು ಪೂರ್ಣವಾಗಿ ಗುಣಮುಖವಾಗಿಲ್ಲ. |
![]() | ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತ ಸಮಂತಾ ರುತ್ ಪ್ರಭು, ವಿಡಿಯೋ ವೈರಲ್!ದಕ್ಷಿಣ ಭಾರತದ ನಟಿ ಸಮಂತಾ ರುತ್ ಪ್ರಭು ಕಣ್ಣೀರು ನಿಯಂತ್ರಿಸಲು ಸಾಧ್ಯವಾಗದೇ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಹತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. |
![]() | ಮಹಿಳೆಯರು ಬೀಳಲೆಂದೆ ಮೇಲೇರುತ್ತಾರೆ: ಟ್ರೋಲ್ ಮಾಡಿದವರಿಗೆ ಬಿಸಿಮುಟ್ಟಿಸಿದ ನಟಿ ಸಮಂತಾ ರುತ್ ಪ್ರಭುನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು ಕಡಿಮೆ. ಆದರೆ, ಇದೀಗ ಮತ್ತೆ ಎಚ್ಚೆತ್ತುಕೊಂಡಿರುವ ನಟಿ ತಮ್ಮ ಅಭಿಮಾನಿಗಳೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿರಲು ಮತ್ತೆ ಟ್ವಿಟರ್‌ಗೆ ಮರಳಿದ್ದಾರೆ. |
![]() | ಸಮಂತಾ ಅಭಿನಯದ 'ಶಾಕುಂತಲಂ', ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್; ವಿಶ್ವದಾದ್ಯಂತ ರಿಲೀಸ್!ನಟಿ ಸಮಂತಾ ರುತ್ ಪ್ರಭು ಅಭಿನಯದ ಬಹುನಿರೀಕ್ಷಿತ 'ಶಾಕುಂತಲಂ' ಸಿನಿಮಾ ವಿಶ್ವದಾದ್ಯಂತ ಫೆಬ್ರವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. |
![]() | 2022ರಲ್ಲಿ ತೆಲುಗು ಚಿತ್ರರಂಗವನ್ನು ಆಳಿದ ಟಾಪ್ 3 ನಾಯಕಿಯರಿವರು, ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ತೆಲುಗು ಚಿತ್ರರಂಗವು 2022 ರಲ್ಲಿ ಆರ್‌ಆರ್‌ಆರ್, ಸೀತಾ ರಾಮಂ, ಕಾರ್ತಿಕೇಯ 2, ಬಿಂಬಿಸಾರ ಮತ್ತು ಮೇಜರ್ ಸೇರಿದಂತೆ ಕೆಲವು ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದೆ. ತೆಲುಗು ಚಿತ್ರರಂಗದಲ್ಲಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿರುವ ನಟಿಯರು ಭರ್ಜರಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. |
![]() | ಮತ್ತಷ್ಟು ಬಿಗಡಾಯಿಸಿದ ನಟಿ ಸಮಂತಾ ಆರೋಗ್ಯ ಸಮಸ್ಯೆ: ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಶಿಫ್ಟ್?ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಕೆಲ ದಿನಗಳಿಂದ ಮಯೋಸಿಟಿಸ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಆದರೆ ಇದೀಗ ಸಮಂತಾ ಸ್ಥಿತಿ ಸ್ವಲ್ಪ ಚಿಂತಾಜನಕವಾಗಿದೆ. ಹೀಗಾಗಿ ಉತ್ತಮ ಚಿಕಿತ್ಸೆಗಾಗಿ ಸಮಂತಾ ಅವರನ್ನು ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. |
![]() | ಸಮಂತಾ ನಟನೆಯ ಯಶೋದಾ ಬಾಕ್ಸ್ ಆಫೀಸ್ ಕಲೆಕ್ಷನ್; ಉತ್ತಮ ಆರಂಭ, 8ನೇ ದಿನಕ್ಕೆ ಕೋಟಿ ಗಳಿಸಲು ಹೆಣಗಾಟನಟಿ ಸಮಂತಾ ರುತ್ ಪ್ರಭು ಅಭಿಯನದ ಯಶೋದಾ ಚಿತ್ರವು ಬಿಡುಗಡೆಯಾದಾಗಿನಿಂದಲೂ ಗಲ್ಲಾಪೆಟ್ಟಿಯಲ್ಲಿ ಉತ್ತಮ ಆರಂಭವನ್ನು ಹೊಂದಿತ್ತು. ಹರಿ-ಹರೀಶ್ ಜೋಡಿಯ ನಿರ್ದೇಶನದ ವೈದ್ಯಕೀಯ ಥ್ರಿಲ್ಲರ್, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲಿಯೇ 20 ಕೋಟಿ ರೂ. ಕಲೆಕ್ಷನ್ ಮಾಡಿದೆ. |
![]() | 'ಯಶೋದಾ' ಸಿನಿಮಾ ಯಶಸ್ಸು: ನಾನು ಕ್ಲೌಡ್ ನೈನ್‌ನಲ್ಲಿ ಇದ್ದೇನೆ ಎಂದ ನಟಿ ಸಮಂತಾತಮ್ಮ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾದ 'ಯಶೋದಾ' ಸಿನಿಮಾದ ಯಶಸ್ಸಿನಲ್ಲಿ ಮುಳುಗಿರುವ ನಟಿ ಸಮಂತಾ ರುತ್ ಪ್ರಭು ಅವರು ಅಭಿಮಾನಿಗಳು ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ತಮ್ಮ ಚಿತ್ರಕ್ಕೆ ಲಭ್ಯವಾಗುತ್ತಿರುವ ಪ್ರೀತಿಯಿಂದಾಗಿ ಕ್ಲೌಡ್ ನೈನ್‌ನಲ್ಲಿರುವುದಾಗಿ ಹೇಳಿದ್ದಾರೆ. |
![]() | ನೀವು ಈ ಸವಾಲನ್ನೂ ಜಯಿಸುತ್ತೀರಿ: ಸಂಕಷ್ಟದಲ್ಲಿರುವ ನಟಿ ಸಮಂತಾಗೆ ಮೆಗಾಸ್ಟಾರ್, ಸಾಯಿಪಲ್ಲವಿ ಹಾರೈಕೆನಟಿ ಸಮಂತಾ ಅವರು ಮೈಯೋಸಿಟಿಸ್ ಎಂದು ಕರೆಯಲ್ಪಡುವ ಆಟೋಇಮ್ಯೂನ್ ಡಿಸಾರ್ಡರ್‌ಗೆ ಒಳಗಾಗಿರುವ ಪೋಸ್ಟ್‌ಗೆ ಮೆಗಾ ಸ್ಟಾರ್ ಚಿರಂಜೀವಿ ಭಾನುವಾರ ಪ್ರತಿಕ್ರಿಯಿಸಿದ್ದಾರೆ. ಸಮಂತಾ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಮತ್ತು ಅವರು ಈ ಸವಾಲನ್ನೂ ಸಹ ಜಯಿಸಲಿದ್ದಾರೆ ಎಂದು ಹೇಳಿದ್ದಾರೆ. |
![]() | ಗಾಳಿಸುದ್ದಿಗಳಿಗೆ ತೆರೆ ಎಳೆದ ಸಮಂತಾ ರುತ್ ಪ್ರಭು, ತಾವು ಬಳಲುತ್ತಿರುವ ಕಾಯಿಲೆ ಬಹಿರಂಗಪಡಿಸಿದ ನಟಿನಟಿ ಸಮಂತಾ ರುತ್ ಪ್ರಭು ಅವರು ತಾವು ಅಪರೂಪದ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಶನಿವಾರ ಹೇಳಿದ್ದಾರೆ. |
![]() | ನಟಿ ಸಮಂತಾ ರುತ್ ಪ್ರಭು ಅಭಿನಯದ ‘ಶಾಕುಂತಲಂ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ನಟಿ ಸಮಂತಾ ರುತ್ ಪ್ರಭು ಅಭಿನಯದ ಪೌರಾಣಿಕ ಕಥೆಯುಳ್ಳ ಸಿನಿಮಾ ‘ಶಾಕುಂತಲಂ’ ಸಿನಿಮಾ ಬಿಡುಗಡೆ ಸಿದ್ದವಾಗಿದೆ. ಸಮಂತಾ ಮತ್ತು ದೇವ್ ಮೋಹನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ಕ್ಕೆ ತೆರೆ ಕಾಣಲಿದೆ. |
![]() | 'ಅಪರೂಪದ ಚರ್ಮದ ಕಾಯಿಲೆ'ಯ ಚಿಕಿತ್ಸೆಗಾಗಿ ನಟಿ ಸಮಂತಾ ಅಮೆರಿಕಕ್ಕೆ; ವದಂತಿ ತಳ್ಳಿಹಾಕಿದ ಮ್ಯಾನೇಜರ್ಟಾಲಿವುಡ್ ಸೇರಿದಂತೆ ಕಾಲಿವುಡ್‌ನಲ್ಲೂ ಸಾಲು ಸಾಲು ಸಿನಿಮಾಗಳ ಮೂಲಕ ಸಖತ್ ಬ್ಯುಸಿಯಾಗಿರುವ ನಟಿ ಸಮಂತಾ ರುತ್ ಪ್ರಭು ಅವರ ಅವರ 'ಯಶೋದಾ' ಮತ್ತು 'ಶಾಕುಂತಲಂ' ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಆದರೆ, ಅವರ ಇತ್ತೀಚಿನ ಅಮೆರಿಕ ಪ್ರವಾಸವು ಇದೀಗ ಗಾಸಿಪ್‌ಗಳಿಗೆ ಆಹಾರವಾಗಿದೆ. |
![]() | ನಿಮ್ಮ ಕೆಲಸ ನೋಡಿಕೊಳ್ಳಿ, ಕುಟುಂಬದ ಕಡೆ ಗಮನ ನೀಡಿ: ನಾಗ ಚೈತನ್ಯ- ಶೋಭಿತಾ ರಿಲೇಶನ್‌ಶಿಪ್ ವಿಚಾರಕ್ಕೆ ಸಮಂತಾ ತಿರುಗೇಟು!ನಟಿ ಸಮಂತಾರಿಂದ ವಿಚ್ಛೇದನ ಪಡೆದು ದೂರಾದ ಮೇಲೆ ನಾಗ ಚೈತನ್ಯ ಶೋಭಿತಾ ಧುಲಿಪಲ ಜೊತೆ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಾಗ ಚೈತನ್ಯ ಅಥವಾ ಶೋಭಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. |