• Tag results for Shiv Sena

ಭೋಪಾಲ್: ಪ್ರೇಮಿಗಳ ದಿನದಂದು ಬಿಜೆವೈಎಂ, ಶಿವಸೇನೆ ಕಾರ್ಯಕರ್ತರಿಂದ ಹುಕ್ಕಾ ಬಾರ್, ರೆಸ್ಟೋರೆಂಟ್ ಗಳು ಧ್ವಂಸ!

ಪ್ರೇಮಿಗಳ ದಿನಾಚರಣೆಯ ದಿನದಂದು ಬಿಜೆಪಿ ಯುವ ಮೋರ್ಚಾದ ಹಾಗೂ ಶಿವಸೇನೆ ಕಾರ್ಯಕರ್ತರು ರೆಸ್ಟೋರೆಂಟ್ ಹಾಗೂ ಹುಕ್ಕಾ ಬಾರ್ ಲಾಂಜ್ ಗಳಿಗೆ ನುಗ್ಗಿ ಧ್ವಂಸಗೊಳಿಸಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ. 

published on : 15th February 2021

ಸಿಂಘು ಗಡಿಯಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ಭೇಟಿಯಾದ ಶಿವಸೇನೆ ಸಂಸದ ಸಂಜಯ್ ರಾವುತ್!

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿರುವ ದೆಹಲಿ ಮತ್ತು ಹರಿಯಾಣ ನಡುವಿನ ಸಿಂಘು ಗಡಿಗೆ ಶಿವಸೇನೆ ಸಂಸದ ಸಂಜಯ್ ರಾವುತ್ ತೆರಳಿದ್ದು ರೈತ ಮುಖಂಡ ರಾಕೇಶ್ ಟಿಕಾಯತ್ ರನ್ನು ಭೇಟಿಯಾದರು.

published on : 2nd February 2021

ಬೆಳಗಾವಿ: ಗಡಿಯಲ್ಲಿ ಪುಂಡಾಟ ನಡೆಸಿದ 8 ಮಂದಿ ಶಿವಸೇನೆ ಕಾರ್ಯಕರ್ತರ ವಿರುದ್ಧ ಎಫ್‌ಐಆರ್

ಬೆಳಗಾವಿ ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವುಗೊಳಿಸಬೇಕೆಂದು ಪ್ರತಿಭಟನೆಗೆ ಯತ್ನಿಸಿ ಗಡಿಯಲ್ಲಿ ಪುಂಡಾಟ ನಡೆಸಿದ್ದ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರ ವಿರುದ್ಧ ಬೆಳಗಾವಿ ಪೋಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

published on : 23rd January 2021

ಹೆಸರಲ್ಲೇನಿದೆ ಅನ್ನಬೇಡಿ: ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಈಗ ಅದೇ ಮೂಡಿಸಿದೆ ಬಿರುಕು!

ಹೆಸರಲ್ಲೇನಿದೆ? ಅಂತ ಕೇಳಬೇಡಿ, ಎಲ್ಲವೂ ಇರುವುದು ಹೆಸರಿನಲ್ಲಿ!! ಈಗ ಮಹಾರಾಷ್ಟ್ರದ ಮೈತ್ರಿ ಸರ್ಕಾರದ ನಡುವೆ ಬಿರುಕು ಹೆಚ್ಚಾಗಿರುವುದೂ ಒಂದು ಹೆಸರಿನಿಂದಾಗಿ ಎನ್ನುತ್ತಿದೆ ಈ ವರದಿ 

published on : 9th January 2021

ಶಿವಸೇನೆ ಹಾಗೂ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಅಡಿ ಒಗ್ಗಟ್ಟಾಗಬೇಕು: ಸಾಮ್ನಾ

ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ "ದುರ್ಬಲ ಮತ್ತು ಅಸಂಘಟಿತವಾಗಿದೆ" ಎಂದಿರುವ ಶಿವಸೇನೆ ಮುಖವಾಣಿ 'ಸಾಮ್ನಾ', ಶಿವಸೇನಾ ಸೇರಿದಂತೆ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಬ್ಯಾನರ್ ನಡಿ ಒಗ್ಗಟ್ಟಾಗಬೇಕು ಎಂದು ಸೂಚಿಸಿದೆ.

published on : 26th December 2020

ಮಹಾ ಸಿಎಂ ಉದ್ಧವ್ ಠಾಕ್ರೆ ನಿವಾಸದಲ್ಲಿ ಶಿವಸೇನೆ ಸೇರಿದ ಊರ್ಮಿಳಾ ಮಾತೋಂಡ್ಕರ್

ಕಾಂಗ್ರೆಸ್ ತೊರೆದಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರಿಯಲ್ಲಿ ಶಿವಸೇನೆ ಸೇರ್ಪಡೆಯಾಗಿದ್ದಾರೆ.

published on : 1st December 2020

ವಿರೋಧಿಗಳನ್ನು ಹಣಿಯಲು ಇಡಿ, ಸಿಬಿಐಗಳನ್ನು ಕಾಶ್ಮೀರ ಗಡಿಗೆ ಕಳುಹಿಸಿ: ಕೇಂದ್ರದ ವಿರುದ್ಧ ಶಿವಸೇನೆ ಟೀಕೆ

ವಿರೋಧಿಗಳನ್ನು ಹಿಮ್ಮೆಟ್ಟಿಸಲು ಕೇಂದ್ರವು ಸಿಬಿಐ, ಇಡಿ (ಜಾರಿ ನಿರ್ದೇಶನಾಲಯ)ಗಳನ್ನು ಬಳಸುವುದಾದರೆ ಅವುಗಳನ್ನು ಜಮ್ಮು ಕಾಶ್ಮೀರದ ಗಡಿಗೆ ಕಳಿಸಬೇಕು ಎಂದು ಶಿವಸೇನೆ ಕೇಂದ್ರಕ್ಕೆ ತಿರುಗೇಟು ನೀಡಿದೆ.

published on : 30th November 2020

'ಕೂಡಲೇ ಹೆಸರು ಬದಲಿಸಿ': ಕರಾಚಿ ಸ್ವೀಟ್ಸ್ ಮಾಲೀಕರಿಗೆ ಶಿವಸೇನೆ ಮುಖಂಡರಿಂದ ಬೆದರಿಕೆ

ಕರಾಚಿ ಸ್ವೀಟ್ಸ್ ಎಂಬ ಹೆಸರನ್ನು ಕೂಡಲೇ ಬದಲಿಸುವಂತೆ ಮುಂಬೈನ ಕರಾಚಿ ಬೇಕರಿ ಮಾಲೀಕರಿಗೆ ಶಿವಸೇನೆ ಮುಖಂಡರು ಬೆದರಿಕೆ ಹಾಕಿರುವ ಘಟನೆ ನಡೆದಿದೆ.

published on : 19th November 2020

ಟ್ರಂಪ್ ಸೋಲಿನಿಂದ ಭಾರತ ಪಾಠ ಕಲಿಯಬೇಕು: ಶಿವಸೇನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಭಾರತವೂ ಪಾಠ ಕಲಿತರೆ ಒಳ್ಳೆಯದು ಎಂದು ಶಿವಸೇನೆ ಹೇಳಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿ ಶಿವಸೇನೆ ಈ ಮೇಲಿನ ಹೇಳಿಕೆ ನೀಡಿದೆ.

published on : 9th November 2020

ಭಾರತ ಚುನಾವಣಾ ಆಯೋಗ ಬಿಜೆಪಿಯ ಶಾಖೆ: ಶಿವಸೇನೆ ಸಂಚಲನ ಆರೋಪ

ಶಿವಸೇನೆ ನಾಯಕ ಸಂಜಯ್ ರಾವತ್  ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯ ಒಂದು ಶಾಖೆ ಎಂದು ಲೇವಡಿ ಮಾಡಿದ್ದಾರೆ. 

published on : 31st October 2020

ಅಮಿತ್ ಶಾ ನಿಲುವನ್ನು ಸ್ವಾಗತಿಸಿದ ಶಿವಸೇನೆ 

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಬರೆದ ಪತ್ರದ ಬಗ್ಗೆ ಅಮಿತ್ ಶಾ ನಿಲುವನ್ನು ಶಿವಸೇನೆ ಸ್ವಾಗತಿಸಿದೆ. 

published on : 18th October 2020

ರಾಜ್ಯಪಾಲರು ಹೇಗೆ ವರ್ತಿಸಬಾರದು ಎಂಬುದನ್ನು ಕೋಶಿಯಾರಿ ತೋರಿಸಿಕೊಟ್ಟಿದ್ದಾರೆ: ಶಿವಸೇನೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು, ನೀವು "ಜಾತ್ಯತೀತ ಅನಿಸಿಕೊಳ್ಳಲು ಹಿಂದುತ್ವವನ್ನು ತ್ಯಜಿಸಿದರೇ" ಎಂದು ಕೇಳಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ, ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

published on : 15th October 2020

2019ರ 'ಸುಪ್ರೀಂ' ಅಯೋಧ್ಯೆ ತೀರ್ಪಿನ ನಂತರ ಬಾಬ್ರಿ ಪ್ರಕರಣವು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿತು: ಶಿವಸೇನೆ

ಅಯೋಧ್ಯೆ ರಾಮಜನ್ಮಭೂಮಿ ಕುರಿತಾಗಿ 2019ರಲ್ಲಿ ಸುಪ್ರೀಂ ಕೋರ್ಟ್ ನ ಐತಿಹಾಸಿಕ ತೀರ್ಪಿನ ನಂತರ ಬಾಬ್ರಿ ಮಸೀದಿ ಧ್ವಂಸ ಪ್ರಕರಣವು ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿತ್ತು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. 

published on : 30th September 2020

ಅಕಾಲಿದಳ ತೊರೆದ ಮೇಲೆ ಎನ್ ಡಿಎ ದಲ್ಲಿ ಏನುಳಿದಿದೆ?: ಬಿಜೆಪಿ ಬಗ್ಗೆ ಶಿವಸೇನೆ ಸಾಮ್ನಾ ವ್ಯಂಗ್ಯ

ಕೃಷಿ ಮಸೂದೆಗಳನ್ನು ವಿರೋಧಿಸಿ ಶಿರೋಮಣಿ ಅಕಾಲಿ ದಳ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಬೆನ್ನಲ್ಲೇ ಬಿಜೆಪಿ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. 

published on : 28th September 2020

ರಾಜ್ಯಗಳಿಗೆ ಸಹಾಯ ಮಾಡಲು ವಿಶ್ವಬ್ಯಾಂಕ್ ನಿಂದ ಸಾಲ ಪಡೆಯಿರಿ: ಕೇಂದ್ರಕ್ಕೆ ಶಿವಸೇನೆ ಆಗ್ರಹ

 ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಶಿವಸೇನೆ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಸ್ತುತ ಪರಿಸ್ಥಿತಿಗೆ ಕೊರೋನಾವೈರಸ್ ಪ್ರೇರಿತ ಲಾಕ್‌ಡೌನ್‌, ಅಪನಗದೀಕರಣ ಮತ್ತು ಸರ್ಕಾರದ "ತಪ್ಪಾದ ನಿರ್ವಹಣೆ"ಕಾರಣ ಎಂದು ಹೇಳಿದೆ. 

published on : 18th September 2020
1 2 >