• Tag results for Supreme court

ಜಮ್ಮು-ಕಾಶ್ಮೀರದ 2 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ 4ಜಿ ಇಂಟರ್ನೆಟ್ ಸೇವೆಗೆ ಕೇಂದ್ರ ಅವಕಾಶ

ಜಮ್ಮು ಮತ್ತು ಕಾಶ್ಮೀರದ ಎರಡು ಜಿಲ್ಲೆಗಳಲ್ಲಿ ಆಗಸ್ಟ್ 15 ಬಳಿಕ ಪ್ರಾಯೋಗಿಕ ಆಧಾರದ ಮೇಲೆ 4ಜಿ ಇಂಟರ್ನೆಟ್ ಸೇವೆಗಳಿಗೆ ಅವಕಾಶ ನೀಡಲಾಗುವುದು ಎಂದು ಸುಪ್ರೀಂಕೋರ್ಟ್'ಗೆ ಕೇಂದ್ರ ಸರ್ಕಾರದ ವಿಶೇಷ ಸಮಿತಿ ಮಂಗಳವಾರ ತಿಳಿಸಿದೆ. 

published on : 11th August 2020

ಸುಶಾಂತ್ ಪ್ರಕರಣ: ಮಾಧ್ಯಮಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರಿಯಾ ಚಕ್ರವರ್ತಿ 

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಮಾಧ್ಯಮಗಳು ಅನುಚಿತವಾಗಿ ವರದಿ ಪ್ರಕಟಿಸುತ್ತಿದ್ದು, ತೀರ್ಪು ನೀಡುತ್ತಿವೆ ಎಂದು ಆಕ್ಷೇಪಿಸಿ ರಿಯಾ ಚಕ್ರವರ್ತಿ ಕೋರ್ಟ್ ಮೆಟ್ಟಿಲೇರಿದ್ದಾರೆ.

published on : 10th August 2020

#SemiNudeBodyPaint: ಮಕ್ಕಳಿಂದ ಅರೆನಗ್ನ ದೇಹದ ಮೇಲೆ ಪೇಂಟ್; ಫಾತೀಮಾಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ 'ಸುಪ್ರೀಂ'

ಮಕ್ಕಳಿಂದಲೇ ಅರೆನಗ್ನ ದೇಹದ ಮೇಲೆ ಪೇಟಿಂಗ್ ಮಾಡಿಸಿಕೊಂಡಿದ್ದ ಕೇರಳದ ವಿವಾದಿತ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತೀಮಾಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

published on : 7th August 2020

ಕಾಂಗ್ರೆಸ್-ಚೀನಾ ನಡುವೆ ಒಪ್ಪಂದ ವಿಚಾರ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್!

‘ಕಾಂಗ್ರೆಸ್‌ ಹಾಗೂ ಚೀನಾದ ಕಮ್ಯುನಿಸ್ಟ್‌ ಪಕ್ಷದ (ಸಿಪಿಸಿ) ಮಧ್ಯೆ 2008ರಲ್ಲಿ ನಡೆದಿದೆ ಎನ್ನಲಾದ ಒಪ್ಪಂದದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನುಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

published on : 7th August 2020

ಮಲ್ಯ ಮೇಲ್ಮನವಿ ಅರ್ಜಿ: ಇದೇ ತಿಂಗಳ 20 ರಂದು ಸುಪ್ರೀಂನಲ್ಲಿ ವಿಚಾರಣೆ

 ಆರ್ಥಿಕ ಅಪರಾಧದ ಆರೋಪ ಹೊತ್ತ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯ 2017 ಮೇ ತಿಂಗಳಲ್ಲಿ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 20ಕ್ಕೆ ಮುಂದೂಡಿದೆ.

published on : 6th August 2020

ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ಸಿಬಿಐಗೆ ಶಿಫಾರಸು; ಬಿಹಾರ ಸರ್ಕಾರದ ನಿರ್ಧಾರವನ್ನು ಒಪ್ಪಿದ್ದೇವೆ: ಸುಪ್ರೀಂಗೆ ಕೇಂದ್ರ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಸಾವು ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಒಪ್ಪಿಸಿರುವ ಬಿಹಾರ ಸರ್ಕಾರದ ಶಿಫಾರಸನ್ನು ಒಪ್ಪಿದ್ದೇವೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್'ಗೆ ಬುಧವಾರ ತಿಳಿಸಿದೆ. 

published on : 5th August 2020

ಹಿರಿಯ ನಾಗರೀಕರಿಗೆ ಸಕಾಲಕ್ಕೆ ಪಿಂಚಣಿ, ಅಗತ್ಯ ವಸ್ತುಗಳು ತಲುಪುವಂತೆ ನೋಡಿಕೊಳ್ಳಿ: ಕೇಂದ್ರ, ರಾಜ್ಯಗಳಿಗೆ 'ಸುಪ್ರೀಂ' ಸೂಚನೆ

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರಿಗೆ ಸಕಾಲಕ್ಕೆ ಪಿಂಚಣಿ ತಲುವಂತೆ ಹಾಗೂ ಒಂಟಿಯಾಗಿರುವ ಹಿರಿಯ ನಾಗರೀಕರಿಗೆ ಅಗತ್ಯ ವಸ್ತುಗಳನ್ನು ತಲುಪುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ. 

published on : 4th August 2020

ಸುಶಾಂತ್ ಸಿಂಗ್ ಆತ್ಮಹತ್ಯೆ: ಸುಪ್ರೀಂ ಕೋರ್ಟ್ ನಲ್ಲಿ ನಟಿ ರಿಯಾ ಮನವಿ ವಿಚಾರಣೆಗೆ ದಿನಾಂಕ ನಿಗದಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಪಾಟ್ನಾದಿಂದ ಮುಂಬೈಗೆ ಎಫ್ಐಆರ್ ವರ್ಗಾವಣೆ ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 5 ರಂದು ವಿಚಾರಣೆ ನಡೆಸಲಿದೆ.  

published on : 1st August 2020

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್

ರಾಜಸ್ಥಾನ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ಕಾಂಗ್ರೆಸ್ ರಾಜಸ್ಥಾನ ಹೈಕೋರ್ಟ್ ಆದೇಶ ಪ್ರಶ್ನಿಸಿ ಮತ್ತೆ ಸುಪ್ರೀಂ ಮೆಟ್ಟಿಲೇರಿದೆ.

published on : 31st July 2020

ಕೋವಿಡ್-19 ಮುಖ್ಯ ಕಾರ್ಯಕರ್ತರಿಗೆ ವೇತನ ನೀಡುವಲ್ಲಿ ಕರ್ನಾಟಕ ಸೇರಿ 4 ರಾಜ್ಯಗಳು ವಿಫಲ: ಕೇಂದ್ರ ಸರ್ಕಾರ

ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಮತ್ತು ತ್ರಿಪುರಾ ರಾಜ್ಯಗಳು ಕೋವಿಡ್-19 ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

published on : 31st July 2020

ಪರೀಕ್ಷೆಗಳನ್ನು ಮಾಡದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವುದು ನಿಯಮಕ್ಕೆ ವಿರುದ್ಧ: ಯುಜಿಸಿ

ಜುಲೈ 6ರ ಮಾರ್ಗಸೂಚಿ ಪ್ರಕಾರ, ಸೆಪ್ಟೆಂಬರ್ ಕೊನೆಯ ವೇಳೆಗೆ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲು ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಕೇಂದ್ರ ಧನಸಹಾಯ ಆಯೋಗ(ಯುಜಿಸಿ) ಸುಪ್ರೀಂ ಕೋರ್ಟ್ ಗೆ ಹೇಳಿದೆ.

published on : 31st July 2020

ಭಾರತದ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತು ಹೊಂದಿರುವುದಿಲ್ಲ: ಪಿಎಂ ನರೇಂದ್ರ ಮೋದಿ

ಮಾರಿಷಸ್ ನ ಸುಪ್ರೀಂ ಕೋರ್ಟ್ ನ ನೂತನ ಕಟ್ಟಡವನ್ನು ಪೋರ್ಟ್ ಲೂಯಿಸ್ ನಲ್ಲಿ ಅಲ್ಲಿನ ಪ್ರಧಾನಿ ಪ್ರವಿಂದ್ ಜುಗ್ನೌತ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

published on : 30th July 2020

ಪಿಎಂ-ಕೇರ್ಸ್ ನಿಧಿಯಡಿ ಸಂಗ್ರಹಿಸಿರುವ ಹಣವನ್ನು ಎನ್ ಡಿಆರ್ ಎಫ್ ಗೆ ವರ್ಗಾಯಿಸಲು ಮೇಲ್ಮನವಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ!

ಕೋವಿಡ್- 19 ಸಾಂಕ್ರಾಮಿಕ ರೋಗ ನಿಯಂತ್ರಣ ಉದ್ದೇಶಕ್ಕಾಗಿ ಪಿಎಂ- ಕೇರ್ಸ್ ನಿಧಿ ಅಡಿಯಲ್ಲಿ ಸಂಗ್ರಹಿಸಲಾಗಿರುವ ಎಲ್ಲಾ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್ ) ವರ್ಗಾವಣೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.

published on : 27th July 2020

ರಾಜಸ್ತಾನ ರಾಜಕೀಯದಲ್ಲಿ ಹೊಸ ಬೆಳವಣಿಗೆ: ಸುಪ್ರೀಂ ಕೋರ್ಟ್ ನಿಂದ ಅರ್ಜಿ ಹಿಂದಕ್ಕೆ ಪಡೆದ ಸ್ಪೀಕರ್ ಸಿ.ಪಿ. ಜೋಶಿ

ರಾಜಸ್ತಾನ ರಾಜಕೀಯದಲ್ಲಿ ದಿನಕ್ಕೊಂದು ವಿದ್ಯಮಾನಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿ ನೋಡಿದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಸೋಲು ಎದುರಾಗುತ್ತಿರುವಂತೆ ಕಾಣುತ್ತಿದೆ.

published on : 27th July 2020

ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ 18 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲು: ನ್ಯಾಯಮೂರ್ತಿ ಚಂದ್ರಚೂಡ್

 ಮಾರ್ಚ್ ಮತ್ತು ಜುಲೈ ನಡುವಿನ ಕರೋನಾವೈರಸ್  ಪ್ರೇರಿತ ಲಾಕ್ ಡೌನ್ ಸಮಯದಲ್ಲಿ ಭಾರತದ ನ್ಯಾಯಾಲಯಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ

published on : 25th July 2020
1 2 3 4 5 6 >