• Tag results for Taliban

ಡ್ಯುರಾಂಡ್ ಗಡಿ ಬೇಲಿ: ಪಾಕ್-ಆಫ್ಘಾನ್ ದ್ವೇಷ ಉಲ್ಬಣ; ಬೇಲಿ ಕೀಳುತ್ತಿರುವ ತಾಲಿಬಾನ್ ಯೋಧರು, ಪಾಕ್ ಗೆ ಮುಖಭಂಗ!

ಗಡಿ ಬೇಲಿ ವಿಚಾರದಲ್ಲಿ ಎರಡು ನೆರೆ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದ್ದು ಡ್ಯುರಾಂಡ್ ಲೈನ್‌ನಲ್ಲಿ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಬೇಲಿ ಹಾಕಲು ಅವಕಾಶ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಹೇಳಿದೆ. 

published on : 6th January 2022

ಅಫ್ಘಾನ್ ಸೇನೆಗೆ ಆತ್ಮಾಹುತಿ ಬಾಂಬರ್‌ಗಳನ್ನು ಸೇರಿಸಲು ತಾಲಿಬಾನ್‍ ನಿರ್ಧರ

ನಾಲ್ಕು ತಿಂಗಳ ಹಿಂದೆಯಷ್ಟೇ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿದ ತಾಲಿಬಾನ್ ಉಗ್ರಗಾಮಿ ಸಂಘಟನೆ ಈಗ ತನ್ನ ಸೇನೆಯನ್ನು ವಿಸ್ತರಿಸಲು ನಿರ್ಧರಿಸಿದೆ.

published on : 6th January 2022

ಪಾಕಿಸ್ತಾನದಲ್ಲಿ ತಾಲಿಬಾನ್ ರಾಜ್ ಆರಂಭ!; 4 ಪಾಕ್ ಯೋಧರ ಸಾವು, ಸೇನೆಯಿಂದಲೇ ದಾಳಿ ಎಂದ ಟಿಟಿಪಿ!!

ನೆರೆಯ ಪಾಕಿಸ್ತಾನದಲ್ಲಿ ಸದ್ದಿಲ್ಲದೇ ತಾಲಿಬಾನ್ ರಾಜ್ ಆರಂಭವಾಗಿದ್ದು, ಸೇನೆ ಮತ್ತು ತಾಲಿಬಾನ್ ಬಂಡುಕೋರರ ನಡುವಿನ ದಾಳಿಯಲ್ಲಿ ನಾಲ್ಕು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

published on : 1st January 2022

ಚುನಾವಣೆಯೇ ಬೇಕಿಲ್ಲ: ಚುನಾವಣಾ ಆಯೋಗವನ್ನು ವಿಸರ್ಜಿಸಿದ ತಾಲಿಬಾನ್ ಸರ್ಕಾರ!

ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಆಡಳಿತ ಚುಕ್ಕಾಣಿ ಹಿಡಿದಿರುವ ತಾಲಿಬಾನಿಗಳು ಇದೀಗ ದೇಶದ ಚುನಾವಣಾ ಆಯೋಗವನ್ನೇ ವಿಸರ್ಜಿಸಿದೆ.

published on : 27th December 2021

ಸಂಬಳ ನೀಡಲಾಗದೆ ವಿಶ್ವಬ್ಯಾಂಕ್ ನೌಕರರಿಗೆ ಗೇಟ್ ಪಾಸ್: ತಾಲಿಬಾನ್ ಸರ್ಕಾರಕ್ಕೆ ಮುಖಭಂಗ

ಅಲ್ಲಿನ ವಿಶ್ವಬ್ಯಾಂಕ್ ಕಚೇರಿಯಲ್ಲಿ ಕೆಲಸದಿಂದ ತೆಗೆದುಹಾಕಲ್ಪಟ್ಟ ನೌಕರರು 15,000 ರೂ.ಗಳಿಗೆ ಕೆಲಸಕ್ಕಿದ್ದರು ಎಂದು ತಿಳಿದುಬಂದಿದೆ.

published on : 26th December 2021

ತಾಲಿಬಾನ್ ಆಡಳಿತದ ಮಹಾ ಎಡವಟ್ಟು: ಶತ್ರು ರಾಷ್ಟ್ರಕ್ಕೆ 6 ಕೋಟಿ ಹಣ ವರ್ಗಾಯಿಸಿ, ಈಗ ವಾಪಸ್ ನೀಡುವಂತೆ ಮನವಿ!!!

ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಅಫ್ಘಾನಿಸ್ತಾನದಲ್ಲಿ ಆಡಳಿತಕ್ಕೆ ಬಂದಿದ್ದ ತಾಲಿಬಾನ್ ಸರ್ಕಾರ ಮಹಾ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಆಕಸ್ಮಿಕವಾಗಿ ತನ್ನ ಶತ್ರುರಾಷ್ಟ್ರ ಕೋಟ್ಯಂತರ ಹಣವನ್ನು ರವಾನೆ ಮಾಡಿ ಈಗ ಅದನ್ನು ವಾಪಸ್ ನೀಡುವಂತೆ ಗೋಗರೆಯುತ್ತಿದೆ.

published on : 22nd December 2021

ಆಫ್ಘಾನಿಸ್ತಾನ: ವಿದೇಶಿ ನೆರವಿಲ್ಲದೆ ಹೊಸ ಬಜೆಟ್ ಮಂಡನೆಗೆ ತಾಲಿಬಾನ್ ಸಿದ್ಧತೆ

ಎರಡು ದಶಕಗಳಲ್ಲಿ ಮೊದಲ ಬಾರಿಗೆ ವಿದೇಶಿ ನೆರವಿಲ್ಲದೆ ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ಹಣಕಾಸು ಸಚಿವಾಲಯವು ಕರಡು ರಾಷ್ಟ್ರೀಯ ಬಜೆಟ್ ಅನ್ನು ಸಿದ್ಧಪಡಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.

published on : 17th December 2021

ಇಮ್ರಾನ್ ಖಾನ್ ಸರ್ಕಾರದೊಡನೆ ಕದನವಿರಾಮ ಅಂತ್ಯ: ಪಾಕ್ ತಾಲಿಬಾನ್ ಘಟಕ ತೆಹ್ರೀಕ್ ಇ ತಾಲಿಬಾನ್ ಘೋಷಣೆ

ಕದನವಿರಾಮ ಒಪ್ಪಂದ ಮುರಿದುಬೀಳಲು ಸಂಘಟನೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸದೇ ಇರುವುದೇ ಕಾರಣ ಎನ್ನಲಾಗಿದೆ. ಪಾಕ್ ನಲ್ಲಿ ವಿಧ್ವಂಸಕ ಕೃತ್ಯ ಮುಂದುವರಿಸಲು ಉಗ್ರನಾಯಕ ಕರೆ.

published on : 10th December 2021

ತಾಲಿಬಾನ್ ಎಫೆಕ್ಟ್: ಆಫ್ಘಾನಿಸ್ತಾನದ ಎಲ್ಲ ಖಾಸಗಿ ಬ್ಯಾಂಕ್ ಗಳೂ ದಿವಾಳಿ!

ತಾಲಿಬಾನ್ ಆಡಳಿತದ ಆರಂಭವಾದ ಕೆಲವೇ ತಿಂಗಳುಗಳ ಅಂತರದಲ್ಲಿ ಆಫ್ಘಾನಿಸ್ತಾನದ ಎಲ್ಲ ಖಾಸಗಿ ಬ್ಯಾಂಕ್ ಗಳು ದಿವಾಳಿಯಾಗಿದೆ ಎನ್ನಲಾಗಿದೆ.

published on : 7th December 2021

ತಾಲಿಬಾನ್ ವಶವಾದಾಗಿನಿಂದ ಅಫ್ಘಾನಿಸ್ತಾನದಲ್ಲಿ ಶೇ.50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಬಂದ್!

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಾಗಿನಿಂದ ಕಳೆದ ಮೂರು ತಿಂಗಳಲ್ಲಿ ಶೇ. 50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಮುಚ್ಚಲ್ಪಟ್ಟಿರುವುದಾಗಿ ಖಾಸಗಿ ಶಿಕ್ಷಣ ಕೇಂದ್ರಗಳ ಯೂನಿಯನ್ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

published on : 29th November 2021

ಮಹಿಳೆಯರು ನಟಿಸಿರುವ ಧಾರಾವಾಹಿಗಳಿಗೆ ತಾಲಿಬಾನ್ ನಿರ್ಬಂಧ: ಕಠಿಣ ಟಿವಿ ಮಾರ್ಗಸೂಚಿಗೆ ಪತ್ರಕರ್ತರ ಖಂಡನೆ

ಆಫ್ಘನ್ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾದ ಧೋರಣೆ ಇರುವ ಸಿನಿಮಾಗಳಿಗೂ ನಿರ್ಬಂಧ ವಿಧಿಸಲಾಗಿದೆ. 

published on : 24th November 2021

ಭಾರತದೊಂದಿಗೆ ಯಾವುದೇ ಸಂಘರ್ಷ ಬಯಸುವುದಿಲ್ಲ: ತಾಲಿಬಾನ್ 

ಭಾರತ ಸೇರಿದಂತೆ ಯಾವುದೇ ದೇಶದೊಂದಿಗೆ ಸಂಘರ್ಷವನ್ನು ಅಫ್ಘಾನಿಸ್ತಾನ ಬಯಸುವುದಿಲ್ಲ ಎಂದು ಯುದ್ಧಪೀಡಿತ ದೇಶದ ತಾಲಿಬಾನ್ ನೇತೃತ್ವದ ಹಂಗಾಮಿ ಸರ್ಕಾರದ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಹೇಳಿದ್ದಾರೆ.

published on : 14th November 2021

ಬುದ್ಧನ ಪ್ರತಿಮೆ ಧ್ವಂಸ ಮಾಡಿದಕ್ಕೆ ಅಮೆರಿಕಾದಿಂದ ತಾಲಿಬಾನ್ ಮೇಲೆ ಬಾಂಬ್ ದಾಳಿ: ಸಿಎಂ ಯೋಗಿ ಆದಿತ್ಯನಾಥ್

20 ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಮಾಡಿದ್ದಕ್ಕಾಗಿ ತಾಲಿಬಾನಿಗಳ ಮೇಲೆ ಅಮೆರಿಕಾ ಬಾಂಬ್​ ದಾಳಿ ನಡೆಸಿದೆ. ಇದು ಅವರಿಗೆ ದೇವರು ನೀಡಿರುವ ಶಿಕ್ಷೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಲಿಬಾನ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

published on : 14th November 2021

ದಿನಂಪ್ರತಿ ಸಾವಿರಾರು ಆಫ್ಘನ್ ನಿರಾಶ್ರಿತರು ಇರಾನಿನತ್ತ ವಲಸೆ: ಯುರೋಪ್ ಗೆ ತಲೆನೋವು

ಇರಾನ್ ಒಳಕ್ಕೆ ಪ್ರವೇಶಿಸಿರುವ ವಲಸಿಗರಲ್ಲಿ ಬಹುತೇಕರು ಅಲ್ಲಿಂದ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ಇರಾದೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

published on : 11th November 2021

'ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ': ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ 

ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಆ ದೇಶದ ಜನರ ಮೇಲೆ ಸಾಕಷ್ಟು ಪ್ರಮುಖ ಪರಿಣಾಮಗಳನ್ನು ಬೀರುವುದು ಮಾತ್ರವಲ್ಲದೆ ಅದರ ನೆರೆಹೊರೆಯ ದೇಶಗಳು ಮತ್ತು ಪ್ರದೇಶಗಳ ಮೇಲೆ ಕೂಡ ಅಗಾಧ ಪ್ರಭಾವ ಬೀರುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

published on : 10th November 2021
1 2 3 4 5 6 > 

ರಾಶಿ ಭವಿಷ್ಯ