social_icon
  • Tag results for Troll

ಆಸ್ಟ್ರೇಲಿಯಾ ಕ್ರಿಕೆಟಿಗರ ಟ್ರೋಲ್: ಭಾರತದ ಅಭಿಮಾನಿಗಳ ವರ್ತನೆಗೆ ಬಜ್ಜಿ ಗರಂ!

ಭಾನುವಾರ ನಡೆದ ಐಸಿಸಿ ವಿಶ್ವಕಪ್ 2023 ಫೈನಲ್ ನಲ್ಲಿ ಭಾರತ ಸೋತ ನಂತರ ಆಸ್ಟ್ರೇಲಿಯಾ ಕ್ರಿಕೆಟಿಗರು ಹಾಗೂ ಅವರ ಕುಟುಂಬ ಸದಸ್ಯರನ್ನು ಟ್ರೋಲ್ ಮಾಡುತ್ತಿರುವ ಭಾರತೀಯ ಅಭಿಮಾನಿಗಳ ವರ್ತನೆಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಗರಂ ಆಗಿದ್ದಾರೆ. 

published on : 21st November 2023

ಒಡಿಶಾ: ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕಿ.ಮೀ ಟ್ರಾಲಿ ಪೆಡಲ್ ತುಳಿದ ಬಾಲಕಿ!

ತನ್ನ ಗಾಯಾಳು ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು 14 ವರ್ಷದ ಬಾಲಕಿಯೊಬ್ಬಳು ಟ್ರಾಲಿ ರಿಕ್ಷಾವನ್ನು 35 ಕಿ.ಮೀ ತುಳಿದಿರುವ ಘಟನೆ ಒಡಿಶಾದ ಭದ್ರಕ್ ನಲ್ಲಿ  ವರದಿಯಾಗಿದೆ.

published on : 27th October 2023

'ವೇಶ್ಯಾವಾಟಿಕೆ ಕೂಲ್ ಪ್ರೊಫೆಶನ್' ಎಂದ ಹಾಸ್ಯನಟಿ ವಿದುಷಿ ಸ್ವರೂಪ್! ನೆಟ್ಟಿಗರ ತರಾಟೆ

ಸ್ಟ್ಯಾಂಡ್-ಅಪ್ ಕಾಮಿಡಿಯನ್ ವಿದುಷಿ ಸ್ವರೂಪ್ ವೇಶ್ಯಾವಾಟಿಕೆಯನ್ನು "ಕೂಲ್ ಪ್ರೊಫೆಷನ್" ಎಂದು ಕರೆಯುವ ವೀಡಿಯೊ ವೈರಲ್ ಆದ ನಂತರ ಭಾರಿ ಟ್ರೋಲ್ ಗೆ ಗುರಿಯಾಗಿದ್ದು, ನೆಟ್ಟಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

published on : 24th October 2023

ರಾಜ್ಯ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಸೇರಿಸದ ಪ್ರಧಾನಿ ಮೋದಿ, ಛೇ, ಮಿನಿಮಮ್ ಮರ್ಯಾದೆಯೂ... ಭಾರಿ ಟ್ರೋಲ್!

ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಯಾವುದೇ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಸೇರಿಸಿಕೊಳ್ಳದಿರುವುದು ಭಾರೀ ಟ್ರೋಲ್ ಗೆ ಗುರಿಯಾಗಿದೆ.

published on : 26th August 2023

ವಾಹನ ಚಾಲನೆ ಒಂದು ಕಲೆ, ಕೌಶಲ್ಯ ಮಾತ್ರವಲ್ಲ ಜವಾಬ್ದಾರಿ ಕೂಡ; ಎಚ್ಚರ ತಪ್ಪಿದರೆ ಜೀವಕ್ಕೆ ಮಾರಕ ಎಂದು ತೋರಿಸಿದ B-MACH

ಕಳೆದ ಜನವರಿಯಿಂದ 118 ಕಿಲೋ ಮೀಟರ್ ಉದ್ದದ ದಶಪಥ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ(B-MACH)ಯಲ್ಲಿ ಸಂಚರಿಸುವಾಗ ಅಪಘಾತಕ್ಕೀಡಾಗಿ ಇಲ್ಲಿಯವರೆಗೆ ಸುಮಾರು 140 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಮಾರ್ಚ್ 12ರಂದು ಉದ್ಘಾಟಿಸಿ ಹೋಗಿದ್ದರು.

published on : 12th August 2023

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಸ್ ಚಾಲಕರಿಂದ ಸಂಚಾರ ಉಲ್ಲಂಘನೆ: ಕೆಎಸ್ಆರ್ ಟಿಸಿಯಿಂದ ತನಿಖೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳು ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ತಪ್ಪು ದಿಕ್ಕಿನಲ್ಲಿ ಸಾಗುತ್ತಿರುವ ಮತ್ತು ಅಪಾಯಕಾರಿ ಯು-ಟರ್ನ್‌ಗಳನ್ನು ತೆಗೆದುಕೊಳ್ಳುವ ಹಲವಾರು ನಿದರ್ಶನಗಳು ವರದಿಯಾದ ನಂತರ, ನಿಗಮವು ಈ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದೆ.

published on : 10th August 2023

'ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ' ಅಲ್ಲ, ಇದು ‘ಪ್ರವೇಶ ನಿಯಂತ್ರಿತ ಹೆದ್ದಾರಿ’ ಎಂದ NHAI: ಎರಡರ ಮಧ್ಯೆ ವ್ಯತ್ಯಾಸವೇನು?

ಬೆಂಗಳೂರು-ಮೈಸೂರು ‘ಪ್ರವೇಶ ನಿಯಂತ್ರಿತ ಹೆದ್ದಾರಿ’ ಎಂದು ಹೇಳುವ ಬದಲು ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ’ ಎಂದು ತಪ್ಪಾಗಿ ಕರೆಯಲಾಗುತ್ತಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. 

published on : 3rd August 2023

'ವಿದೇಶಕ್ಕೆ ಹೋಗುವಾಗ ಜೊತೆಗೆ ಆಹಾರ ಒಯ್ಯುತ್ತೇನೆ, ವೆಜ್-ನಾನ್ ವೆಜ್ ಗೆ ಒಂದೇ ಸ್ಪೂನ್ ಬಳಸಿದರೆ ಎಂಬ ಆತಂಕ ನನಗೆ': ಟ್ರೋಲ್ ಆದ ಸುಧಾ ಮೂರ್ತಿ!

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ಲೇಖಕಿ, ಸಮಾಜಸೇವಕಿಯಾಗಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿಯ ತಾಯಿಯಾಗಿ ಗುರುತಿಸಿಕೊಂಡಿರುವ ಸುಧಾ ಮೂರ್ತಿಯವರು ಇತ್ತೀಚೆಗೆ ಲಂಡನ್ ನಲ್ಲಿ ವಲಸೆ ಅಧಿಕಾರಿ ಮುಂದೆ '10 ಡೌನಿಂಗ್ ಸ್ಟ್ರೀಟ್' ಎಂದು ವಿಳಾಸ ಹೇಳಿದಾಗ ಅವರು ಅಚ್ಚರಿಯಿಂದ ತಮ್ಮನ್ನು ನೋಡಿದರು ಎಂದು ಹೇಳಿದ್ದು ಸುದ್ದಿಯಾಗಿತ್ತು.

published on : 26th July 2023

ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್- ಬಿಕೆ ಹರಿಪ್ರಸಾದ್ ಭೇಟಿ: ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರಾ ಡಿಸಿಎಂ?

ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

published on : 26th July 2023

ಅಭಿಮಾನಿಗಳು ಟ್ರೋಲ್ ಮಾಡೋ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು: ಶಾಸಕಿ ನಯನಾ ಮೋಟಮ್ಮ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಗುರುವಾರ ವಿಧಾನಸಭೆಯಲ್ಲಿ ನೀಡಿದ್ದ ಒಂದು ಹೇಳಿಕೆಯಿಂದ ಭಾರೀ ಟ್ರೋಲ್‌ ಆಗುತ್ತಿದ್ದಾರೆ. ಮೇಜು ಕುಟ್ಟುವ ಮೂಲಕ ಅವರನ್ನು ಬೆಂಬಲಿಸಿದ್ದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕೂಡ ಟ್ರೋಲ್‌ಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ವಿಡಿಯೋ ಭಾರೀ ವೈರಲ್‌ ಆಗಿದೆ.

published on : 9th July 2023

ಆದಿಪುರುಷ್ ತಂಡದ ಬಗ್ಗೆ ರಾಮಾಯಣ ನಿರ್ದೇಶಕ ಹೇಳಿದ್ದೇನು ಅಂದರೆ... 

ರಾಮಾಯಣದ ಕಥೆಯನ್ನು ತೆರೆ ಮೇಲೆ ತಂದಿರುವ ಆದಿಪುರುಷ್ ಚಿತ್ರ ತಂಡ ವಿಎಫ್ಎಕ್ಸ್ ನಲ್ಲಿ ಮಾಡಿಕೊಂಡಿರುವ ಎಡವಟ್ಟುಗಳ ಬಗ್ಗೆ ಹಲವೆಡೆ ಚರ್ಚೆಯಾಗುತ್ತಿದೆ.

published on : 17th June 2023

ನಾನು ಎಸ್.ಎಂ ಕೃಷ್ಣ ಶಿಷ್ಯನಲ್ಲ ಎಂಬ ಹೇಳಿಕೆ: ಪ್ಲೇಟ್ ಬದಲಿಸಿದ ಡಿಸಿಎಂ; ಡ್ಯಾಮೇಜ್ ಕಂಟ್ರೋಲ್ ಗೆ ಡಿಕೆಶಿ ಮಾಡಿದ್ದೇನು?

ನಾನು ಎಸ್‌ಎಂ ಕೃಷ್ಣ ಶಿಷ್ಯನಲ್ಲ, ನಾನು ಬಂಗಾರಪ್ಪ ಶಿಷ್ಯ ಎಂದು ಹೇಳಿ ಅಚ್ಚರಿ ಮೂಡಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಹೇಳಿಕೆ ನೀಡಿದ ಮರುದಿನವೇ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾಲಿಗೆ ನಮಸ್ಕರಿಸಿದ್ದಾರೆ.

published on : 22nd May 2023

ನೀತಿ ಸಂಹಿತೆ ಉಲ್ಲಂಘನೆ: 81 ಆರ್ಥಿಕ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ, ಅಕ್ರಮ ತಡೆಗೆ ನಗರದಲ್ಲಿ ಮೊಬೈಲ್ ಸ್ಕ್ವಾಡ್ ನಿಯೋಜನೆ

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 81 ಆರ್ಥಿಕ ಸೂಕ್ಷ್ಮ ಪ್ರದೇಶಗಳನ್ನು ಗುರ್ತಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ.

published on : 28th April 2023

'ಮುಂದಿನ ಬಾರಿ ಎಲ್ಲಾ ಮುದ್ದು ಅಜ್ಜಿಯರಿಗಾಗಿ ಕನ್ನಡದಲ್ಲಿಯೇ ಮಾತನಾಡುತ್ತೇನೆ': ರಮ್ಯಾ

ವೀಕೆಂಡ್ ವಿತ್ ರಮೇಶ್ ಸೀಸನ್ 5ನ ಮೊದಲ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಶೋನ ತುಂಬೆಲ್ಲಾ ಅವರು ಬಹುಪಾಲು ಇಂಗ್ಲಿಷ್ ನಲ್ಲಿಯೇ ಮಾತನಾಡಿದ್ದು ಇದಕ್ಕೆ ಕಾರಣ. 

published on : 28th March 2023

ಬಟ್ಟೆ ಕೂಡ ನಾಚಿಕೆಪಡುತ್ತೆ: ಅಭಿಮಾನಿಗಳನ್ನು ದಂಗಾಗಿಸಿದ ಉರ್ಫಿ ಜಾವೇದ್ ಅರೆ ನಗ್ನ ಉಡುಪು

ಇಂಟರ್ನೆಟ್ ಸೆನ್ಸೇಷನ್ ಮತ್ತು ಪಾಪರಾಜಿಗಳ ನೆಚ್ಚಿನ ಮಾಡೆಲ್ ಉರ್ಫಿ ಜಾವೇದ್ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಉರ್ಫಿ ತನ್ನ ವಿಚಿತ್ರವಾದ ಬಟ್ಟೆ ಮತ್ತು ಬೋಲ್ಡ್ ಲುಕ್‌ನಿಂದಾಗಿ ತನ್ನ ನೋಟದ ಬಗ್ಗೆ ಯಾವಾಗಲೂ ಚರ್ಚೆಯಲ್ಲಿರುತ್ತಾರೆ.

published on : 18th March 2023
1 2 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9