• Tag results for Uttara Kannada

ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ; ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ: ಸಚಿವ ಸುಧಾಕರ್‌

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪ್ರಕಟಿಸಿದರು.

published on : 20th September 2022

ಪರೇಶ್‌ ಮೇಸ್ತ ಕೊಲೆ ಆರೋಪಿಗೆ ವಕ್ಫ್ ಮಂಡಳಿ ಹುದ್ದೆ; ತೀವ್ರ ವಿರೋಧ, ವ್ಯಾಪಕ ಮುಜುಗರದ ಬಳಿಕ ತಡೆ ನೀಡಿದ ಸರ್ಕಾರ

ಪರೇಶ್‌ ಮೇಸ್ತ ಸಾವಿನ ಪ್ರಕರಣದ ಪ್ರಮುಖ ಆರೋಪಿ ಜಮಾಲ್‌ ಆಜಾದ್‌ ಅಣ್ಣಿಗೇರಿಗೆ ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್‌ ಸಲಹಾ ಸಮಿತಿಯ ಉಪಾಧ್ಯಕ್ಷ ಸ್ಥಾನ ನೀಡಿ ಹೊರಡಿಸಿದ್ದ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶವನ್ನು ತಡೆ ಹಿಡಿದಿದೆ.

published on : 13th August 2022

ಈ ವಿವಾಹದಲ್ಲಿ ವಧು-ವರ ಇಲ್ಲ ಬದಲಿಗೆ ವಧು-ವಧು: ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದಲ್ಲಿ ವಿಶಿಷ್ಟ ಆಚರಣೆ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಮಳೆದೇವ ಇಂದ್ರನನ್ನು ಸಂತೃಪ್ತಿಗೊಳಿಸಲು ಹಾಲಕ್ಕಿ ಒಕ್ಕಲಿಗ ಸಮುದಾಯದವರು ಇಬ್ಬರು ಮಹಿಳೆಯರ ಮಧ್ಯೆ ಮದುವೆ ಮಾಡಿಸುತ್ತಾರೆ. ಮಳೆ, ಬೆಳೆ ಚೆನ್ನಾಗಿ ಆಗಿ ಸಂತೃಪ್ತಿ, ಸಂತೋಷ ಸಮಾಜದಲ್ಲಿ ನೆಲೆಸಲಿ ಎಂಬುದು ಇದರ ಸಾಂಕೇತಿಕ ಅರ್ಥವಾಗಿದೆ.

published on : 6th August 2022

ಭಟ್ಕಳದಲ್ಲಿ ಮನೆ ಮೇಲೆ ಗುಡ್ಡ ಕುಸಿತ: ನಾಲ್ವರ ಮೃತದೇಹ ಹೊರ ತೆಗೆದ ಸಿಬ್ಬಂದಿ!

ಉತ್ತರ ಕನ್ನಡದಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಮುಟ್ಟಳ್ಳಿಯ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು ಅವಶೇಷಗಳಡಿಯಲ್ಲಿ ಸಿಲುಕಿದ್ದ ನಾಲ್ವರ ಮೃತದೇಹಗಳನ್ನು ಎನ್ ಡಿಆರ್ಎಫ್ ಸಿಬ್ಬಂದಿ ಹೊರ ತೆಗೆದಿದ್ದಾರೆ. 

published on : 2nd August 2022

ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಿರಂತರ ಪ್ರಯತ್ನ: ಸ್ಪೀಕರ್ ಕಾಗೇರಿ

ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿಗಾಗಿ ಬಲವಾದ ಬೇಡಿಕೆ ಕೇಳಿಬರುತ್ತಿದೆ. ಸಾಮಾಜಿಕ ಮಾಧ್ಯಮ ಸೇರಿದಂತೆ ಆ ಭಾಗದ ಸಾರ್ವಜನಿಕರು ಹಲವು ವರ್ಷಗಳಿಂದ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

published on : 25th July 2022

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ: ಶೀಘ್ರವೇ ತೀರ್ಮಾನಎಂದ ಸಚಿವ ಸುಧಾಕರ್

''ವೀ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್ ಇನ್ ಉತ್ತರ ಕನ್ನಡ'' ಎಂಬ ಹ್ಯಾಶ್ ಟ್ಯಾಗ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ಕಳೆದ ವಾರ ಶಿರೂರು ಟೋಲ್ ಗೇಟ್‌ನಲ್ಲಿ ನಡೆದ ಭೀಕರ ಆಂಬುಲೆನ್ಸ್‌ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಬಳಿಕ ಉತ್ತರ ಕನ್ನಡ ಕನ್ನಡ ಜಿಲ್ಲೆಯ ಜನರ ಬೇಡಿಕೆ, ಕೂಗು ಜೋರಾಗಿತ್ತು.

published on : 25th July 2022

ಉತ್ತರ ಕನ್ನಡದ ಅಂಶಿ ಘಾಟ್ ಸಂಚಾರ ಸಂಪೂರ್ಣ ಸ್ಥಗಿತ ಇಲ್ಲ: ಅಧಿಕಾರಿಗಳು

ಉತ್ತರ ಕನ್ನಡದ ಅಂಶಿ ಘಾಟ್ ನಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತ ಮಾಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

published on : 18th July 2022

ಉತ್ತರ ಕನ್ನಡ: ಭಾರಿ ಮಳೆ, ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ!

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಬಳಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಓರ್ವ ವ್ಯಕ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯಾದ್ಯಂತ ಹಲವು ಮರಗಳು ಧರೆಗುರುಳಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.

published on : 5th July 2022

ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಕರ್ನಾಟಕದ ಮೊದಲ ವೈಲ್ಡ್ ಆರ್ಕಿಡೇರಿಯಂ ಸ್ಥಾಪನೆ

ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಆರ್ಕಿಡ್ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ಪ್ರಯತ್ನವಾಗಿ ಅರಣ್ಯ ಇಲಾಖೆ ಆರ್ಕಿಡೇರಿಯಂ ಸ್ಥಾಪಿಸಲು ಸಜ್ಜಾಗಿದೆ. 

published on : 18th June 2022

ಜೋಯಿಡಾ: ಗಣೇಶಗುಡಿಯಲ್ಲಿ ಅಕ್ರಮ ಜಲಸಾಹಸ ಕ್ರೀಡೆಗಳಿಗೆ ಪೊಲೀಸರ ಕಡಿವಾಣ!

ದೋಣಿ ಮುಳುಗಿ ಕೆಲವೇ ಅಂತರದಲ್ಲಿ ತಪ್ಪಿದ್ದ ದುರಂತ ಪ್ರಕರಣದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದು, ಗಣೇಶಗುಡಿ ಸಮೀಪ ಕಾಳಿನದಿಯಲ್ಲಿ ಅಕ್ರಮ ಜಲಸಾಹಸ ಕ್ರೀಡೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

published on : 16th April 2022

72 ಗಂಟೆಗಳಲ್ಲಿ ಪಿಂಚಣಿ ನೀಡುವ ಯೋಜನೆ 15 ದಿನಗಳಲ್ಲಿ ಜಾರಿ: ಗ್ರಾಮ ವಾಸ್ತವ್ಯದಲ್ಲಿ ಆರ್. ಅಶೋಕ್

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ  ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಚವೆ, ಹಿಲ್ಲೊರು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್. ಅಶೋಕ್ ಶುಕ್ರವಾರ ಚಾಲನೆ ನೀಡಿದರು.

published on : 16th April 2022

ಉತ್ತರ ಕನ್ನಡದಲ್ಲಿ ಜಲ್ ಜೀವ ಮಿಷನ್ ಗೆ ನೂರಾರು ಅಡ್ಡಿ; ಯೋಜನೆಯೇ ಹೊರೆ!

ಗ್ರಾಮೀಣ ಭಾಗಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರ ಯೋಜನೆ ಜಲ್ ಜೀವನ್ ಮಿಷನ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಡ್ಡಿಗಳನ್ನು ಎದುರಿಸುತ್ತಿದ್ದು, ಸರ್ಕಾರಕ್ಕೆ ಹಾಗೂ ಸ್ಥಳೀಯ ಜನರಿಗೆ ಯೋಜನೆ ಹೊರೆ ಎನಿಸತೊಡಗಿದೆ.

published on : 17th March 2022

ಡಾಂಡೇಲಿ: ಕಾಳಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕನನ್ನು ನೀರಿನೊಳಗೆ ಎಳೆದೊಯ್ದ ಮೊಸಳೆ!

ದೈನಂದಿನ ಕೆಲಸ ಮುಗಿಸಿ ಸ್ನಾನ ಮಾಡಲು ಕಾಳಿ ನದಿಗೆ ಇಳಿದಿದ್ದ ಯುವಕನನ್ನು ಮೊಸಳೆ ಎಳೆದೊಯ್ದಿರುವ ಘಟನೆ ದಾಂಡೇಲಿ ಬಳಿಯ ಕಾಳಿ ನದಿಯಲ್ಲಿ ನಡೆದಿದೆ.

published on : 9th February 2022

ಊರ ತುಂಬಾ ಕೆಂಪು ಬಿಳಿ ಶೇಡಿ ಕೆಮ್ಮಣ್ಣಿನ ಅವತಾರ: ಮಲೆನಾಡಿನ ಹವ್ಯಕರಲ್ಲಿ ದೀಪಾವಳಿ ಆಚರಣೆ

ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುಥಿ೯) ಮಾನೋ೯ಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗಳನ್ನು ಕರೆಯುವ ವಾಡಿಕೆ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗೂ ಈ ಹಬ್ಬಗಳನ್ನು ಆಚರಿಸುವ ರೀತಿ ಕೂಡಾ ವಿಭಿನ್ನ.

published on : 3rd November 2021

ರಾಶಿ ಭವಿಷ್ಯ