accident

ಮೆಜೆಸ್ಟಿಕ್ ನಲ್ಲಿ ಬಸ್ಸು ಡಿಕ್ಕಿ; ವ್ಯಕ್ತಿ ಸಾವು
ನಗರದ ಮೆಜೆಸ್ಟಿಕ್ ಬಸ್ಸು ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ಫ್ಲಾಟ್ ಫಾರಂ ನಂಬರ್ 15ರಲ್ಲಿ ಸಂಭವಿಸಿದೆ.

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮಳೆಗೆ ಒಂದೇ ಸ್ಥಳದಲ್ಲಿ ಎರಡು ಪ್ರತ್ಯೇಕ ಅಪಘಾತ
ವರುಣನ ಆರ್ಭಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದೆ. ಒಂದೇ ಸ್ಥಳದಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ವರದಿ ಆಗಿಲ್ಲ.

ಬೆಂಗಳೂರು: ಲಾಕ್ ಡೌನ್ ವೇಳೆ ಅಪಘಾತಕ್ಕೀಡಾಗಿದ್ದ ಮುಖ್ಯ ಪೊಲೀಸ್ ಪೇದೆ ಸಾವು
ಅಪಘಾತಕ್ಕೀಡಾಗಿದ್ದ ಮುಖ್ಯ ಪೊಲೀಸ್ ಪೇದೆ ನಾಗೇಶ್ ಅವರು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸೀಜ್ ಆದ ಆಟೋ ಪಾರ್ಕಿಂಗ್ ವೇಳೆ ಅವಘಡ: ಪೇದೆಗೆ ಗಂಭೀರ ಗಾಯ; ಗೃಹ ಸಚಿವರಿಂದ ಆರೋಗ್ಯ ವಿಚಾರಣೆ
ಸೀಜ್ ಆದ ಆಟೋವನ್ನು ಪೊಲೀಸ್ ಠಾಣೆ ಬಳಿ ನಿಲ್ಲಿಸಲು ತೆಗೆದುಕೊಂಡು ಹೋಗುವಾಗ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಹೆಡ್ ಕಾನ್ಸ್ಟೆಬಲ್ ನಾಗೇಶ್ ಅವರ ತಲೆಗೆ ಗಂಭೀರ ಗಾಯವಾಗಿದೆ.

ಲಾಕ್'ಡೌನ್ ನಡುವೆಯೂ ಜಾಲಿ ರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ; ವಾಹನ ವಶ, ನಟಿಗಾಗಿ ಶೋಧ
ಲಾಕ್ಡೌನ್ ಉಲ್ಲಂಘಿಸಿ ಜಾಲಿರೈಡ್ಗೆ ಹೋಗಿದ್ದ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಸೇರಿ ಇಬ್ಬರು ಇದ್ದ ಕಾರು ಅಪಘಾತಕ್ಕೀಡಾಗಿ ನಟಿ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.

ಗುಜರಾತ್'ನಲ್ಲಿ ಭೀಕರ ರಸ್ತೆ ಅಪಘಾತ: ಕಾರು-ಲಾರಿ ಡಿಕ್ಕಿ- 5 ಸಾವು, ಓರ್ವನಿಗೆ ಗಾಯ
ಗುಜರಾತ್ ರಾಜ್ಯದ ಸುರೇಂದ್ರನಗರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ-ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐವರು ದುರ್ಮರಣವನ್ನಪ್ಪಿದ್ದು, ಓರ್ವನಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಶನಿವಾರ ಸಂಭವಿಸಿದೆ.

ಯುಗಾದಿ: ಮರಣ ತಂದ ಬೇವು
ಹೊಸ ವರ್ಷ ಯುಗಾದಿ ಹಬ್ಬಕ್ಕಾಗಿ ಬೇವಿನ ಸೊಪ್ಪು ಕೀಳಲು ಹೋಗಿದ್ದ ವ್ಯಕ್ತಿಯೊರ್ವ ಮರದಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಕಹಿಘಟನೆ ಕೆಪಿ ನಗರದ ಅಗ್ರಹಾರ ಬಳಿ ಸಂಭವಿಸಿದೆ.

ಕೊರೋನಾ ಭೀತಿಯಿಂದ ಊರಿಗೆ ತೆರಳುತ್ತಿದ್ದವರಿಗೆ ಅಪಘಾತ: ಬಾಗಲಕೋಟೆಯಲ್ಲಿ ಮೂವರ ಸಾವು
ಬೆಳ್ಳಂಬೆಳಗ್ಗೆ ಕಾರು ಅಪಘಾತ ಸಂಭವಿಸಿ ಮೂವರರು ಸಾವನ್ನಪ್ಪಿದ್ದು, ಮೂವರು ವ್ಯಕ್ತಿಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಬೆಂಗಳೂರು: ಡಿವೈಡರ್ ಗೆ ಬೈಕ್ ಡಿಕ್ಕಿ; ಓರ್ವ ಸಾವು, ಮತ್ತೋರ್ವ ಗಂಭೀರ
ಖಾಲಿ ರಸ್ತೆಯಲ್ಲಿ ಬೌನ್ಸರ್ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಸವಾರನೋರ್ವ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ಫ್ಲೈ ಓವರ್ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

