ದೇಶಕುಲಭೂಷಣ್ ಜಾಧವ್ ಬಿಡುಗಡೆಗೆ ಪಾಕಿಸ್ತಾನ ಮನವೊಲಿಸಲು ಭಾರತ ಹಿಂಬಾಗಿಲ ಪ್ರಯತ್ನ ನಡೆಸಿತ್ತು: ಹರೀಶ್ ಸಾಳ್ವೆ
ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ 2017ರಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಬಿಡುಗಡೆಗೆ ಪಾಕಿಸ್ತಾನವನ್ನು ಹಿಂದಿನ ಬಾಗಿಲಿನಿಂದ ರಹಸ್ಯವಾಗಿ ಮನವೊಲಿಸಲು ಭಾರತ ಪ್ರಯತ್ನಿಸಿತ್ತು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಹೇಳಿದ್ದಾರೆ.