Chennai

ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ: ತಮಿಳುನಾಡಿನಲ್ಲಿ ಬಿಗಿ ಪೊಲೀಸ್ ಭದ್ರತೆ
2 ದಿನಗಳ ಪ್ರವಾಸ ನಿಮಿತ್ತ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದು, ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ಭೇಟಿ ನೀಡಲಿರುವ ತಮಿಳುನಾಡಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಮಹಾಬಲಿಪುರಂನಲ್ಲಿ ಮೋದಿ-ಕ್ಸಿ ಜಿನ್'ಪಿಂಗ್ ಶೃಂಗಸಭೆ: ಉಭಯ ನಾಯಕರ ಸ್ವಾಗತಕ್ಕೆ ಚೆನ್ನೈ ಸಜ್ಜು
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅ.11 ಮತ್ತು 12ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಹಾಬಲಿಪುರಂನಲ್ಲಿ ಅನೌಪಚಾರಿಕ ಶೃಂಗಸಭೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಉಭಯ ನಾಯಕರನ್ನು ಸ್ವಾಗತಿಸಲು ಚೆನ್ನೈನಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.

ಮೋದಿ-ಕ್ಸಿ ಜಿನ್ ಪಿಂಗ್ ಸ್ವಾಗತಕ್ಕೆ ಮಹಾಬಲಿಪುರಂ ಕಲೆ-ವಾಸ್ತುಶಿಲ್ಪಗಳು ಸಜ್ಜು!
ಚೆನ್ನೈ ಹತ್ತಿರವಿರುವ ಮಹಾಬಲಿಪುರಂ ನಗರದಲ್ಲಿ ಇದೇ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಧ್ಯೆ ಅನೌಪಚಾರಿಕ ಸಭೆ ನಡೆಯಲಿದೆ.

'ಗಾಳಿ ವಿರುದ್ಧ ಕೇಸ್ ದಾಖಲಿಸಿ': ಬ್ಯಾನರ್ ಬಿದ್ದು ಟೆಕ್ಕಿ ಸಾವಿಗೆ ಎಐಎಡಿಎಂಕೆ ಮುಖಂಡನ ಹೇಳಿಕೆ!
ತಲೆ ಮೇಲೆ ಬ್ಯಾನರ್ ಬಿದ್ದು ಯುವತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಮುಖಂಡ ಸಿ. ಪೊನ್ನಯನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಅಲ್ಲ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧಕ್ಕೆ ಅಭಿಯಾನ: ಪ್ರಧಾನಿ ಮೋದಿ ಸ್ಪಷ್ಟನೆ
ಒಂದು ಬಾರಿ ಬಳಕೆಯಾಗುವ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ತೀವ್ರ ಹಾನಿಯಾಗುವುದರಿಂದ ಅದರ ಬಳಕೆಗೆ ನಿಷೇಧ ಹೇರಬೇಕೆಂದು ಕೇಂದ್ರ ಸರ್ಕಾರ ಅಭಿಯಾನ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಟೆಕ್ಕಿ ಶುಭಶ್ರೀ ಸಾವು ಪ್ರಕರಣ: ತಲೆಮರೆಸಿಕೊಂಡಿದ್ದ ಎಐಎಡಿಎಂಕೆ ನಾಯಕ ಜಯಗೋಪಾಲ್ ಅರೆಸ್ಟ್
ಮಹಿಳಾ ಟೆಕ್ಕಿಯ ಸಾವಿಗೆ ಕಾರಣವಾಗಿ ಬಳಿಕ ಎರಡು ವಾರಗಳ ಕಾಲ ತಲೆಮರೆಸಿಕೊಂಡಿದ್ದ ಸ್ಥಳೀಯ ಮಟ್ಟದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಾಯಕನನ್ನು ಶುಕ್ರವಾರ ಬಂಧಿಸಲಾಯಿತು.

ಪೆರೊಲ್ ಅಂತ್ಯ: ರಾಜೀವ್ ಹತ್ಯೆ ಪ್ರಕರಣದ ಆರೋಪಿ ನಳಿನಿ ಮತ್ತೆ ಜೈಲಿಗೆ
ಮದ್ರಾಸ್ ಹೈಕೋರ್ಟಿನಿಂದ ನೀಡಿದ್ದ 52 ದಿನಗಳ ಪೆರೊಲ್ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಆರೋಪಿಗಳಲ್ಲಿ ಒಬ್ಬರಾದ ನಳಿನಿ ಶ್ರೀ ಹರನ್ ಮತ್ತೆ ವೆಲ್ಲೂರಿನ ಕಾರಾಗೃಹದಲ್ಲಿ ಶರಣಾಗಿದ್ದಾರೆ.

ಚೆನ್ನೈ: ತಲೆ ಮೇಲೆ ಎಐಎಡಿಎಂಕೆ ಬ್ಯಾನರ್ ಬಿದ್ದು ಯುವತಿ ಸಾವು
ತಲೆ ಮೇಲೆ ಬ್ಯಾನರ್ ಬಿದ್ದು ಅಪಘಾತದಲ್ಲಿ ಯುವತಿ ಮೃತಪಟ್ಟ ಘಟನೆ ತಮಿಳುನಾಡಿನ ಚೆನ್ನೈನ ಪಾಲಿಕರಣೈಯಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಕಾರ್ಯಕರ್ತನ ಮಗನ ಮದುವೆಗಾಗಿ ಅಳವಡಸಿದ್ದ ಬ್ಯಾನರ್ ಬಿದ್ದಿದೆ,

ಆರ್ಥಿಕ ಸಂಕಷ್ಟ: ನೇಣಿಗೆ ಶರಣಾದ ಲಾನ್ಸನ್ ಟಯೊಟಾ ಎಂಡಿ ರೀಟಾ!
ಆರ್ಥಿಕ ಸಂಕಷ್ಟದಿಂದ ಉದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಚೆನೈನ ಪ್ರಸಿದ್ಧ ಉದ್ಯಮ ಸಂಸ್ಥೆಯಾದ ಲಾನ್ಸನ್ ಟೊಯೋಟಾ ಸಂಸ್ಥೆಯ ಲಾನ್ಸನ್ ಗ್ರೂಪ್ ಜಾಯಿಂಟ್ ಎಂಡಿ ರೀಟಾ ಲಂಕಲಿಗಂ ಆತ್ಮಹತ್ಯೆಗೆ ಶರಣಾಗಿದ್ದಾರೆ.

