Corona Virus

ಕೊರೋನಾ ವೈರಸ್; ಹೆಚ್ಚು ಸಾವು ಕಂಡ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಭಾರತ
ಮಾರಕ ಕೊರೋನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಈಗಾಗಲೇ 4ನೇ ಸ್ಥಾನಕ್ಕೇರಿರುವ ಭಾರತ ಇದೀಗ ಅತೀ ಹೆಚ್ಚು ಸಾವು ಕಂಡ ದೇಶಗಳ ಪಟ್ಟಿಯಲ್ಲೂ 9ನೇ ಸ್ಥಾನಕ್ಕೇರಿದೆ.

ಕೊರೋನಾ ಮುಕ್ತ ನರ್ಸ್ ನ್ನು ಕರೆದೊಯ್ದು ಪ್ರಶಂಸೆ ಬಹುಮಾನ ಗಿಟ್ಟಿಸಿಕೊಂಡ ಮಣಿಪುರದ ಗಟ್ಟಿಗಿತ್ತಿ ಆಟೋ ಚಾಲಕಿ!
ಕೋವಿಡ್-19ನಿಂದ ಗುಣಮುಖರಾದ ನರ್ಸ್ ಒಬ್ಬರನ್ನು ಇಂಫಾಲ್ ನಿಂದ ಕಮ್ಜೊಂಗ್ ಜಿಲ್ಲೆಯ ಅವರ ಮನೆಗೆ ಪರ್ವತ ಪ್ರದೇಶದಲ್ಲಿ ಆಟೋದಲ್ಲಿ ಬಿಟ್ಟು ಮಣಿಪುರದ ಏಕೈಕ ಆಟೋ ಚಾಲಕಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಕೊರೋನಾ ಅಬ್ಬರ: ಸತತ 2ನೇ ದಿನವೂ 2 ಸಾವಿರಕ್ಕೂ ಅಧಿಕ ಹೊಸ ಸೋಂಕು ಪ್ರಕರಣ
ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಮತ್ತೆ 2 ಸಾವಿರಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಚೀನಾದಲ್ಲಿ ಒಂದೇ ದಿನ 57 ಮಂದಿಗೆ ಕೊರೋನಾ ಸೋಂಕು: ಏಪ್ರಿಲ್ ಬಳಿಕ ಮೊದಲ ಬಾರಿಗೆ ಗರಿಷ್ಛ ಸಂಖ್ಯೆ
ಕೊರೋನಾ ವೈರಸ್ ಚೀನಾದಲ್ಲಿ ಸೋಂಕಿನ 2ನೇ ಅಲೆ ಆರಂಭವಾಯಿತೇ ಎಂಬ ಪ್ರಶ್ನೆ ಮೂಡುತ್ತಿದ್ದು, ಇಂದು ಮತ್ತೆ ಚೀನಾದಲ್ಲಿ 57 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೊರೋನಾ: ವಿಶ್ವದಲ್ಲಿ 4 ಲಕ್ಷ 25 ಸಾವಿರ ದಾಟಿದ ಸಾವಿನ ಸಂಖ್ಯೆ, 76 ಲಕ್ಷಕ್ಕೂ ಅಧಿಕ ಸೋಂಕಿತರು!
ವಿಶ್ವ ಮಟ್ಟದಲ್ಲಿ 4 ಲಕ್ಷದ 25 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೋನಾ ವೈರಸ್ ನ ಸೋಂಕಿತ ಪ್ರಕರಣಗಳು ಇದುವರೆಗೆ 76 ಲಕ್ಷದ 32 ಸಾವಿರದ 517 ಆಗಿದೆ. ಅವರಲ್ಲಿ 4 ಲಕ್ಷದ 25 ಸಾವಿರದ 282 ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ ಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕೊರೋನಾ ಎಫೆಕ್ಟ್: 'ರೈತರು ಬೇಕಾಗಿದ್ದಾರೆ'; ಕೃಷಿ ಕ್ಷೇತ್ರದತ್ತ ಹೊರಳುತ್ತಿದೆ ಜನರ ಆಸಕ್ತಿ!
ಪ್ರತಿ ಸಮಸ್ಯೆಯೊಳಗೆ ಒಂದು ಅವಕಾಶವಿರುತ್ತದೆ ಎನ್ನುತ್ತಾರೆ. ಕೋವಿಡ್-19 ಲಾಕ್ ಡೌನ್ ಹಲವರಿಗೆ ಹಲವು ರೀತಿಯಲ್ಲಿ ಕಷ್ಟಗಳನ್ನು ತಂದೊಡ್ಡಿರಬಹುದು. ಆದರೆ ಇದು ಕೆಲವರ ಬಾಳಲ್ಲಿ ಹೊಸ ಅವಕಾಶಕ್ಕೆ, ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಇದು ಸಾಕಷ್ಟು ಅವಕಾಶಗಳನ್ನು ಹೊಸದಾಗಿ ಸೃಷ್ಟಿಮಾಡುತ್ತಿದೆ.

ಕೊರೋನಾ ಎಫೆಕ್ಟ್: ಸಂಕಷ್ಟದಲ್ಲಿ ಪ್ರವಾಸೋದ್ಯಮ ವಲಯ, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ 3 ಲಕ್ಷ ಜನ!
ಜೀವನೋಪಾಯಕ್ಕೆ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಂಬಿಕೊಂಡಿದ್ದ ಸುಮಾರು 3 ಲಕ್ಷ ಜನರು ಈ ವರ್ಷ ಕೋವಿಡ್-19ನಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಕೊರೋನಾ ವೈರಸ್: ಜಾಗತಿಕ 3.8 ಮಿಲಿಯನ್ ಸೋಂಕಿತರು ಗುಣಮುಖ
ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಜಾಗತಿಕ ಸುಮಾರು 3.8 ಮಿಲಿಯನ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಇಂದು 2137 ಹೊಸ ಸೋಂಕು ಪ್ರಕರಣ ಪತ್ತೆ, 36 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಇಂದು ಒಂದೇ ದಿನ 2137 ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ.

