Corona Virus

ಲೆಫ್ಟಿನೆಂಟ್ ಗವರ್ನರ್ ಆದೇಶದಿಂದ ದೆಹಲಿಗರಿಗೆ ದೊಡ್ಡ ಸಮಸ್ಯೆ: ಸಿಎಂ ಅರವಿಂದ್ ಕೇಜ್ರಿವಾಲ್ ಅಸಮಾಧಾನ
ದೆಹಲಿಯಲ್ಲಿ ದೆಹಲಿ ನಿವಾಸಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಬೇಕು ಎಂಬ ಕಾರಣದಿಂದ ಆಸ್ಪತ್ರೆಗಳನ್ನು ಮೀಸಲಿಡುವ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿರುವ ದೆಹಲಿ ಲೆಫ್ಚಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿರ್ಧಾರದಿಂದ ದೆಹಲಿ ನಿವಾಸಿಗಳಿಗೆ ದೊಡ್ಡ ಪ್ರಮಾಣದ ತೊಂದರೆಯಾಗಲಿದೆ ಎಂದು ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಮಿಜೋರಾಂನಲ್ಲಿ 2ವಾರಗಳ ಸಂಪೂರ್ಣ ಲಾಕ್ ಡೌನ್!
ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಬಳಿಕ ಇಡೀ ದೇಶ ಅನ್ ಲಾಕ್ ನತ್ತ ಮುಖ ಮಾಡಿರುವಂತೆಯೇ ಅತ್ತ ಮಿಜೋರಾಂ ಸರ್ಕಾರ ಮಾತ್ರ 2 ವಾರಗಳ ಸಂಪೂರ್ಣ ಲಾಕ್ ಡೌನ್ ಹೇರಿದೆ.

ಕೊರೋನಾ ವೈರಸ್: ಬಂಗಾಳದಲ್ಲಿ ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಿಸಿದ ಸಿಎಂ ಮಮತಾ ಬ್ಯಾನರ್ಜಿ
ದಿನೇ ದಿನೇ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಜೂನ್ 30ರವರೆಗೂ ಲಾಕ್ ಡೌನ್ ವಿಸ್ತರಿಸಿದ್ದಾರೆ.

ದೆಹಲಿಗರಿಗೆ ಮಾತ್ರವಲ್ಲ ಪ್ರತೀಯೊಬ್ಬರಿಗೂ ಚಿಕಿತ್ಸೆ ನೀಡಬೇಕು: ಕೇಜ್ರಿವಾಲ್ ನಡೆಗೆ ಲೆಫ್ಟಿನೆಂಟ್ ಗವರ್ನರ್ ತಿರುಗೇಟು!
ದೆಹಲಿಯಲ್ಲಿ ದೆಹಲಿ ನಿವಾಸಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಬೇಕು ಎಂಬ ಕಾರಣದಿಂದ ಆಸ್ಪತ್ರೆಗಳನ್ನು ಮೀಸಲಿಡುವ ಕೇಜ್ರಿವಾಲ್ ಸರ್ಕಾರದ ನಿರ್ಧಾರಕ್ಕೆ ಲೆಫ್ಟಿನೆಂಟ್ ಗವರ್ನರ್ ತಡೆ ನೀಡಿದ್ದು, ದೆಹಲಿಯಲ್ಲಿ ಪ್ರತೀಯೊಬ್ಬರಿಗೂ ಚಿಕಿತ್ಸೆ ದೊರೆಯಬೇಕು ಎಂದು ಹೇಳಿದ್ದಾರೆ.

ಸಮಯ ಉರುಳುತ್ತಿದ್ದಂತೆ ಕೊರೋನಾ ಭಯ ದೂರವಾಗಿ ಹಿಂದಿನ ಜೀವನಶೈಲಿಗೆ ಜನರು ಮರಳುತ್ತಾರೆ: ದುಶ್ಯಂತ್ ಶ್ರೀಧರ್
ಕೋವಿಡ್-19 ರೋಗ ಇಡೀ ಮನುಕುಲಕ್ಕೆ ಹೊಸ ವ್ಯವಸ್ಥೆ, ಹೊಸ ಆಲೋಚನಾ ವಿಧಾನ, ಹೊಸ ಜೀವನವನ್ನು ತೆರೆದಿಟ್ಟಿದೆ ಎನ್ನುವುದು ಎಲ್ಲೆಡೆ ಕೇಳಿಬರುತ್ತಿರುವ ಮಾತು. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಾಗಿಲ್ಲ.

ಭೂಮಿಯಲ್ಲಿ ಬೆಳೆಯಿಲ್ಲ, ಕೈಯಲ್ಲಿ ಕಾಸಿಲ್ಲ: ಕೊರೋನಾ ಸಂಕಷ್ಟದ ನಡುವೆ ರಾಜ್ಯದ ರೈತರ ಪಾಡು
ಕೊರೋನಾ ವೈರಸ್ ಬಿಕ್ಕಟ್ಟು ಯಾವ ಕೇತ್ರದ ಮೇಲೆ ಪರಿಣಾಮ ಬೀರುವುದನ್ನೂ ಬಿಟ್ಟಿಲ್ಲ. ರೈತರು ಸಹ ಈ ವರ್ಷ ಸಾಕಷ್ಟು ಕಂಗಾಲಾಗಿದ್ದಾರೆ.

ಕೊವಿಡ್-19: ವಿಶ್ವಾದ್ಯಂತ 4 ಲಕ್ಷ ದಾಟಿದ ಸಾವಿನ ಸಂಖ್ಯೆ; ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ
ವಿಶ್ವದಾದ್ಯಂತ ಕೊವಿಡ್-19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಭಾನುವಾರ 4.00,000 ಮೀರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತಿಳಿಸಿದೆ.

ಕೊರೋನಾ ವೈರಸ್ ಗೆ ಚೀನಾ ಕಾರಣ; ಆರೋಪ ಅಲ್ಲಗಳೆದಿದ್ದ ಚೀನಾದಿಂದ ಶ್ವೇತಪತ್ರ ಬಿಡುಗಡೆ!
ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಕುರಿತಂತೆ ಚೀನಾ ವಿರುದ್ಧ ಜಾಗತಿಕವಾಗಿ ಕೇಳಿಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ತಿರುಗೇಟು ನೀಡಿರುವ ಚೀನಾ ಸರ್ಕಾರ ಇದೀಗ ಶ್ವೇತಪತ್ರ ಬಿಡುಗಡೆ ಮಾಡಿದೆ.

ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ಮಾಡಿದ್ದು ಸರಿಯಲ್ಲ: ಇಮ್ರಾನ್ ಪಾಷಾ ವಿರುದ್ಧ ಜಮೀರ್ ಗರಂ!
ಕೊರೋನಾ ವೈರಸ್ ಸೋಂಕಿನಿಂದ ಗುಣಮುಖರಾದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ಧ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಗರಂ ಆಗಿದ್ದಾರೆ.

