Corona Virus

ಆರೋಗ್ಯ ಇಲಾಖೆಯ ಮತ್ತೊಂದು ಎಡವಟ್ಟು ಬಯಲಿಗೆ; ಪೊಲೀಸ್ ಪೇದೆ ಬೆನ್ನಲ್ಲೇ, ಸೋಂಕಿತೆ ಎಂದು ಹೇಳಲಾಗಿದ್ದ ಗರ್ಭಿಣಿ ಮಹಿಳೆಯ ವರದಿ ಕೂಡ ಸುಳ್ಳು!
ಮಾರಕ ಕೊರೋನಾ ವೈರಸ್ ಗೆ ಕರ್ನಾಟಕ ರಾಜ್ಯ ತತ್ತರಿಸಿ ಹೋಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಒತ್ತಡಕ್ಕೊಳಗಾಗಿರುವ ಆರೋಗ್ಯ ಇಲಾಖೆ ಗೊಂದಲದ ಗೂಡಾಗಿದ್ದು, ಇಲಾಖೆಯ ಒಂದೊಂದೇ ಎಡವಟ್ಟುಗಳು ಇದೀಗ ಬಯಲಾಗುತ್ತಿವೆ.

ಕೊರೋನಾ ವೈರಸ್: ನಿಯಮಿತ ಮೂಗಿನ ಸ್ವಚ್ಛತೆ, ಗಂಟಲಿನ ಗಾರ್ಗಿಲ್ ನಿಂದ ಕೋವಿಡ್-19 ಅನ್ನು ದೂರವಿಡಬಹುದು!
ನಿಯಮಿತವಾಗಿ ಮೂಗಿನ ಸ್ವಚ್ಛತೆ ಮಾಡುವುದರಿಂದ ಮತ್ತು ಆಗಾಗ್ಗೆ ಬಿಸಿ ನೀರಿನ ಮೂಲಕ ಗಂಟಲಿನ ಗಾರ್ಗಿಲ್ ಮಾಡುವ ಮೂಲಕ ಮಾರಕ ಕೊರೋನಾ ವೈರಸ್ ಅನ್ನು ದೂರವಿಡಬಹುದು ಎಂದು ತಜ್ಞರು ಹೇಳಿದ್ದಾರೆ.

ಮುಂಬೈನಲ್ಲಿ 10 ಸಾವಿರ ಗಡಿ ದಾಟಿದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ 412ಕ್ಕೆ ಏರಿಕೆ
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, 24 ಗಂಟೆಗಳಲ್ಲಿ ಬರೊಬ್ಬರಿ 769 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 10,527ಕ್ಕೆ ಏರಿಕೆಯಾಗಿದೆ.

ಕೊರೋನಾ ವೈರಸ್ ಔಷಧಿ ಅಭಿವೃದ್ಧಿ, ಶೀಘ್ರದಲ್ಲೇ ಮಾರಾಟ ಎಂದ ಇಸ್ರೇಲ್
ಜಗತ್ತಿನ 190ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಇಸ್ರೇಲ್ ವಿಜ್ಞಾನಿಗಳು ಔಷಧಿ ಕಂಡುಹಿಡಿದಿದ್ದು, ಶೀಘ್ರದಲ್ಲೇ ಮಾರಾಟ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಲಾಕ್ ಡೌನ್ ಬಳಿಕ ಮುಂದೇನು: ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಪ್ರಶ್ನೆ
ಕೊರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಎಷ್ಟು ಸಮಯದವರೆಗೆ ಲಾಕ್ ಡೌನ್ ಮುಂದುವರಿಸುತ್ತದೆ, ಲಾಕ್ ಡೌನ್ ನಿರ್ಣಯಕ್ಕೆ ಬಳಸುತ್ತಿರುವ ಮಾನದಂಡಗಳೇನು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

ಕೊರೋನಾ ವೈರಸ್ ಭೀತಿ: ಹುಲಿಗೆಮ್ಮದೇವಿ ಜಾತ್ರೆ ರಥೋತ್ಸವ ರದ್ದು
ಮಾರಕ ಕೊರೋನಾ ವೈರಸ್ ಸೋಂಕು ಭೀತಿ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಜಾತ್ರಾ ಮಹೋತ್ಸವ ಹುಲಿಗೆಮ್ಮದೇವಿ ಜಾತ್ರೆ ರಥೋತ್ಸವವನ್ನು ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಕರ್ತವ್ಯಕ್ಕೆ ಹಾಜರಾಗುವ ಬಿಎಂಟಿಸಿ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಕಡ್ಡಾಯ
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಎಲ್ಲ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ; ವಿಶೇಷ ರೈಲು ರದ್ದು
ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದರಾಗಿದ್ದ ವಲಸೆ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ ಶಾಕ್ ನೀಡಿದ್ದು, ಕಾರ್ಮಿಕರ ರವಾನೆಗಾಗಿ ಬೇಡಿಕೆ ಇಟ್ಟಿದ್ದ ರೈಲುಗಳನ್ನು ರದ್ದುಗೊಳಿಸಿದೆ.

ತಂತಮ್ಮ ಊರಿಗೆ ಕಳುಹಿಸುವಂತೆ ದಂಗೆ ಎದ್ದ ಕಾರ್ಮಿಕರು; ರೈಲ್ವೇ ನಿಲ್ದಾಣದಲ್ಲಿ ಕಲ್ಲು ತೂರಾಟ, ಪೊಲೀಸರಿಗೆ ಗಾಯ
ತಮ್ಮ ತಮ್ಮ ಊರಿಗೆ ಕಳುಹಿಸುವಂತೆ ಒತ್ತಾಯಿಸಿ ನಗರದಲ್ಲಿರುವ ವಲಸೆ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ನಡೆದಿದೆ.

