Corona Virus

ಕೋವಿಡ್-19: ದೆಹಲಿ ಸರ್ಕಾರದಿಂದ ಕ್ವಾರಂಟೈನ್ ನಲ್ಲಿರುವವರ ಮೊಬೈಲ್ ಟ್ರ್ಯಾಕಿಂಗ್
ದೆಹಲಿಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕ್ವಾರಂಟೈನ್ ನಲ್ಲಿರುವವರ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಮುಂದಾಗಿದೆ.

ಅಮೆರಿಕನ್ನರಿಗೆ 9/11ರ ದಾಳಿಗಿಂತಲೂ ಭೀಕರ ಕೊರೋನಾ ವೈರಸ್!
ಅಮೆರಿಕಾದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 4 ಸಾವಿರಕ್ಕೇರಿದೆ. ಈ ಮೃತರ ಸಂಖ್ಯೆ ಅಮೆರಿಕಾದಲ್ಲಿ 9/11ರ ಭಯೋತ್ಪಾದಕ ದಾಳಿಗಿಂತಲೂ ಅಧಿಕವಾಗಿದೆ.

ದೆಹಲಿ ನಿಜಾಮುದ್ದೀನ್ ಮರ್ಕಜ್ ಮಸೀದಿಗೆ ತೆರಳಿದ್ದ ಬೆಳಗಾವಿಯ 10, ಕೋಲಾರದ 18 ಮಂದಿ ಕ್ವಾರಂಟೈನ್ ಗೆ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ 10 ಮಂದಿ ಮತ್ತು ಕೋಲಾರದ 18 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೊರೋನಾ ವೈರಸ್: ಭಾರತದಲ್ಲಿ 50ಕ್ಕೇರಿದ ಸಾವಿನ ಸಂಖ್ಯೆ, 1600ರ ಗಡಿ ದಾಟಿದ ಸೋಂಕು ಪ್ರಕರಣಗಳು
ಮಾರಕ ಕೊರೋನಾ ವೈರಸ್ ಗೆ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದ್ದು, ಅಂತೆಯೇ ಸೋಂಕು ಪ್ರಕರಣ ಗಳಸಂಖ್ಯೆ 1600ರ ಗಡಿ ದಾಟಿದೆ.

ಅಮೆರಿಕ: 10 ಲಕ್ಷ ಜನರಿಗೆ ಕೊರೋನ ಸೋಂಕು ಪರೀಕ್ಷೆ, 1,75,000ಮಂದಿಗೆ ಸೋಂಕು, ಚೀನಾ ಮೀರಿಸಿದ ಸಾವಿನ ಸಂಖ್ಯೆ!
ಅಮೆರಿಕದಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಸಾವಿನ ಸಂಖ್ಯೆಯಲ್ಲಿ ಅಮೆರಿಕ ಇದೀಗ ಚೀನಾವನ್ನೂ ಹಿಂದಿಕ್ಕಿದೆ ಎಂದು ತಿಳಿದುಬಂದಿದೆ.

ಜಮಾತ್ ಕಾರ್ಯಕರ್ತರ ಹುಡುಕಿ ಕ್ವಾರಂಟೈನ್ ಮಾಡಿ, ವಿದೇಶಿಗರನ್ನು ಗಡಿಪಾರು ಮಾಡಿ: ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ
ನಿಜಾಮುದ್ದೀನ್ ಮರ್ಕಜ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 2000 ತಬ್ಲೀಕ್ ಇ ಜಮಾತ್ ಕಾರ್ಯಕರ್ತರನ್ನು ಹುಡುಕಿ ಈ ಕೂಡಲೇ ಕ್ವಾರಂಟೈನ್ ಮಾಡಿ, ವಿದೇಶಿಗರನ್ನು ಗಡಿಪಾರು ಮಾಡಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೊರೋನಾ ವೈರಸ್: ನಿಜಾಮುದ್ದೀನ್ ಮಾರ್ಕಾಜ್ ಮೌಲಾನ ಮತ್ತಿತರರ ವಿರುದ್ಧ ಪ್ರಕರಣ ದಾಖಲು
ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿ, ಸೂಚನೆಗಳ ವಿರುದ್ಧವಾಗಿ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದಕ್ಕಾಗಿ ದೆಹಲಿ ಪೊಲೀಸರು ಮಂಗಳವಾರ ಮೌಲಾನ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 25 ಸಾವಿರ ರೂ. ದೇಣಿಗೆ ನೀಡಿದ ಪ್ರಧಾನಿ ಮೋದಿ ತಾಯಿ ಹೀರಾಬೆನ್
ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರೂ ಕೂಡ ಕೈ ಜೋಡಿಸಿದ್ದು, ಪ್ರಧಾನಿ ನಿಧಿಗೆ ತಮ್ಮ ಉಳಿತಾಯದ 25 ಸಾವಿರ ರೂಗಳನ್ನು ದೇಣಿಗೆ ನೀಡಿದ್ದಾರೆ.

ಕೊರೋನಾ ವೈರಸ್: ಕರ್ನಾಟಕಕ್ಕೆ ಶುಭ ಸುದ್ದಿ, 8 ಮಂದಿ ಕೋವಿಡ್-19 ಸೋಂಕಿತರು ಗುಣಮುಖ, ಡಿಸ್ಚಾರ್ಜ್
ಲಾಕ್ಡೌನ್ ನಡುವೆಯೂ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುವ ಮೂಲಕ ಆಂತಕ ಸೃಷ್ಟಿಯಾಗಿರುವಂತೆಯೇ ಕರ್ನಾಟಕದ ಪಾಲಿಗೆ ಕೊಂಚ ನಿರಾಳ ನೀಡುವ ಸುದ್ದಿಯೊಂದು ಹೊರಬಿದಿದ್ದೆ. ಅದರಂತೆ ರಾಜ್ಯದಲ್ಲಿ ಕೋವಿಡ್ 19 ವೈರಸ್ ಗೆ ತುತ್ತಾಗಿದ್ದವರ ಪೈಕಿ 8 ಸೋಂಕಿತರು ಇದೀಗ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

